
ಬೇಲೂರು : ಪೂಜೆ ಸಲ್ಲಿಸಲು ರಥವೇರಿದ್ದ ಸಚಿವ ಎಚ್.ಡಿ.ರೇವಣ್ಣ ಬಳಿಕ ಕೆಳಗೆ ಇಳಿಯಲು ಪ್ರಯಾಸ ಪಟ್ಟ ಪ್ರಸಂಗ ಮಂಗಳವಾರ ನಡೆಯಿತು.
ವಿಶ್ವಪ್ರಸಿದ್ಧ ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ಪೂಜೆ ಸಲ್ಲಿಸಲು ರೇವಣ್ಣ ಆಗಮಿಸಿದ್ದರು. ರಥದ ಮೇಲೇರಿ ಪೂಜೆ ಸಲ್ಲಿಸುವಂತೆ ಅಭಿಮಾನಿಗಳು ಒತ್ತಾಯಿಸಿದರು.
ಈ ವೇಳೆ ರಥದ ಮನೆಯಿಂದ ಹಾಕಿದ್ದ ಅಟ್ಟಣಿಗೆ ಮುಖಾಂತರ ರೇವಣ್ಣ ರಥವೇರಿದರು. ಈ ಸಂದರ್ಭದಲ್ಲಿ ರಥವನ್ನು ಎಳೆಯಲು ಇನ್ನೂ ಐದು ನಿಮಿಷ ಬಾಕಿ ಇತ್ತು. ಆದರೆ ಏಕಾಏಕಿ ನಗಾರಿ, ಮಂಗಳವಾದ್ಯ ಮೊಳಗಿದ್ದರಿಂದ ರಥ ಎಳೆಯಲು ಸಜ್ಜಾಗಿದ್ದ ಭಕ್ತರು ರಥವನ್ನು ಎಳೆದು, ರಥೋತ್ಸವಕ್ಕೆ ಚಾಲನೆ ನೀಡಿದರು. ಆದಕಾರಣ ದೇವಸ್ಥಾನದ ಆಗ್ನೇಯ ಮೂಲೆಯ ರಂಗಮಂದಿರದವರೆಗೆ ರಥವನ್ನು ಎಳೆದು ನಿಲ್ಲಿಸುವವರೆಗೂ ರೇವಣ್ಣ ರಥದೊಳಗೆ ಕೂರಬೇಕಾಯಿತು.
ಕೆಳಗಿಳಿಯಲು ಪ್ರಯಾಸ:
ಇನ್ನು ರಥವನ್ನು ಇಳಿಯುವ ವೇಳೆ ರೇವಣ್ಣ ಸಾಕಷ್ಟುಪ್ರಯಾಸ ಪಡಬೇಕಾಯಿತು. ಏಕೆಂದರೆ ರೇವಣ್ಣ ಹತ್ತುವಾಗ ರಥದ ಮನೆಯಿಂದ ಹತ್ತಲು ಅಟ್ಟಣಿಕೆ ಮಾಡಿದ್ದರು. ಆದರೆ ರಥ ಮುಂದೆ ಬಂದಿದ್ದರಿಂದ ಇಳಿಯಲು ಯಾವುದೇ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಅರ್ಧ ಗಂಟೆಗೂ ಹೆಚ್ಚುಕಾಲ ರಥದಲ್ಲೇ ಕುಳಿತಿರಬೇಕಾಗಿತ್ತು. ಮಧ್ಯಾಹ್ನ 1 ಗಂಟೆ ನಂತರ ವಿದ್ಯುತ್ ಇಲಾಖೆಯಿಂದ ಕಂಬ ರಿಪೇರಿ ಮಾಡುವ ಲಿಫ್ಟ್ ಏಣಿಯನ್ನು ತಂದು ರೇವಣ್ಣ ಅವರನ್ನು ಕೆಳಗೆ ಇಳಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.