ಗೌರಿ ಲಂಕೇಶ್ ಹತ್ಯೆ: ಮಂಗಳವಾರ ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶ

Published : Sep 10, 2017, 03:35 PM ISTUpdated : Apr 11, 2018, 01:02 PM IST
ಗೌರಿ ಲಂಕೇಶ್ ಹತ್ಯೆ: ಮಂಗಳವಾರ ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶ

ಸಾರಾಂಶ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ‘ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ’ ವತಿಯಿಂದ ಮಂಗಳವಾರದಂದು ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇಂದು  ಶಾಸಕರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಚಂಪಾರವರು, ಪಿ.ಲಂಕೇಶ್‍ರವರ ವೈಚಾರಿಕ ಪರಂಪರೆಯನ್ನು ಅವರಿಗಿಂತಲೂ ಪ್ರಖರವಾಗಿ ಮುಂದುವರೆಸಿದವರು ಗೌರಿ. ಅವರ ಹತ್ಯೆಯಾಗಿದೆ. ಇದು ಆತಂಕ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ವಿಷಾದಿಸಿದರು.

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ‘ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ’ ವತಿಯಿಂದ ಮಂಗಳವಾರದಂದು ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಇಂದು  ಶಾಸಕರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಚಂಪಾರವರು, ಪಿ.ಲಂಕೇಶ್‍ರವರ ವೈಚಾರಿಕ ಪರಂಪರೆಯನ್ನು ಅವರಿಗಿಂತಲೂ ಪ್ರಖರವಾಗಿ ಮುಂದುವರೆಸಿದವರು ಗೌರಿ. ಅವರ ಹತ್ಯೆಯಾಗಿದೆ. ಇದು ಆತಂಕ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ವಿಷಾದಿಸಿದರು.

ಯಾವ ಸ್ವಾತಂತ್ರ್ಯ, ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಗಾಗಿ ಗೌರಿ ಮುಂದಾದರೋ ಅದೇ ಬಲಿಗೆ ಕಾರಣವಾಗಿದೆ. ಈಗ ಪ್ರಜಾತಂತ್ರದ ರಕ್ಷಣೆಗಾಗಿ ಏನು ಮಾಡುವುದು? ಯಾರು ಮಾಡುವುದು? ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈ ವರ್ತಮಾನವನ್ನು ಅರ್ಥ ಮಾಡಿಕೊಂಡು ಮುಂದೇನು ಮಾಡಬೇಕು ಎಂಬುದರ ಆತ್ಮಾವಲೋಕನದ ಜೊತೆಗೆ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುತ್ತೇವೆ, ಅದಕ್ಕಾಗಿ ಗೌರಿ ಲಂಕೇಶ್ ಹತ್ಯಾ ವಿರೋಧಿ ಹೋರಾಟ ವೇದಿಕೆಯನ್ನು ರೂಪಿಸಿದ್ದೇವೆ, ಎಂದು ಚಂಪಾ ಹೇಳಿದರು.

ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ರಾಷ್ಟ್ರಮಟ್ಟದ ಪ್ರತಿರೋಧ ಸಮಾವೇಶದಲ್ಲಿ ಕವಿಗಳು, ಬರಹಗಾರರು, ಹೋರಾಟಗಾರರು, ಕಲಾವಿದರು, ಪತ್ರಕರ್ತರು ಮತ್ತು ಸಾಮಾನ್ಯಜನತೆ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸೀತರಾಂ ಯೆಚೂರಿ.ಸಾಯಿನಾಥ್, ಮೇಧಾ ಪಾಟ್ಕರ್, ಆನಂದ್ ಪಟವರ್ಧನ್, ತೀಸ್ತಾ ಸೆಟ್ಲವಾದ್, ಯೋಗೆಂದ್ರ ಯಾದವ್, ಜಿಗ್ನೇಶ್ ಮೇವಾನಿ ಮೊದಲಾದವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್‌ ಜೊತೆ ಅಫೇರ್‌ ನೋಡಿದ ಗಂಡನ ಕೊ*ಲೆ, ರುಂಡ ಕೊಯ್ದು ಖಾಲಿ ಬೋರ್‌ವೆಲ್‌ಗೆ ಹಾಕಿದ ಪತ್ನಿ!
ಕೋಟ್ಯಾಂತರ ಮೌಲ್ಯದ ಚಿನ್ನ ದರೋಡೆ ಮಾಡಿ ಎಸ್ಕೇಪ್ :ಆರೋಪಿ ಪ್ರೀತ್ ಪನ್ಸೇರ್ ಗಡೀಪಾರಿಗೆ ಭಾರತಕ್ಕೆ ಕೆನಡಾ ಮನವಿ