2019ರ ಲೋಕಸಭಾ ಚುನಾವಣಾ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸೀಟು?

By Ramesh BFirst Published Oct 5, 2018, 12:39 AM IST
Highlights

ಸಿ-ವೋಟರ್, ರಿಪಬ್ಲಿಕ್ ಟಿವಿ 2019ರ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಯಾವ ಯಾವ ರಾಜ್ಯಗಳಲ್ಲಿ ಯಾವ ಮೈತ್ರಿಕೂಟ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ನವದೆಹಲಿ,[ಅ.04]: 2019ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಬಾರಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಲೆಕ್ಕಾಚಾರಗಳು ಜೋರಾಗಿ ನಡೆದಿವೆ.

ಅದರಂತೆ ಸಿ-ವೋಟರ್, ರಿಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಲಿದೆ.

ರಿಪಬ್ಲಿಕ್ ಟಿವಿ - ಸಿ ವೋಟರ್ ಲೋಕಸಭೆಯ ಮಹಾಸಮೀಕ್ಷೆ : ಮತ್ತೇ ಮೋದಿಗೆ ಗೆಲುವು

ಸಿ-ವೋಟರ್, ರಿಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆಯಂತೆ 543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 276 ಸ್ಥಾನಗಳು ಸಿಕ್ಕರೆ, ಯುಪಿಎಗೆ 112, ಇತರೆ 155 ಸ್ಥಾನಗಳು ಸಿಗಲಿವೆ.

ಹಾಗಾದ್ರೆ ಯಾವ ಯಾವ ರಾಜ್ಯಗಳಲ್ಲಿ ಯಾವ ಮೈತ್ರಿಕೂಟ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

*ದೆಹಲಿ ಒಟ್ಟು ಸ್ಥಾನ 07: ಎನ್ಡಿಎ: 07 ಯುಪಿಎ: 00 ಎಎಪಿ: 00

*ಹರ್ಯಾಣ ಒಟ್ಟು 10 : ಎನ್ಡಿಎ: 06 ಯುಪಿಎ:03 ಇತರೆ : 01

*ಪಂಜಾಬ್ ಒಟ್ಟು13 : ಎನ್ಡಿಎ: 01 ಯುಪಿಎ:12

*ಒಡಿಶಾ: ಒಟ್ಟು 21: ಬಿಜೆಪಿ: 13 ಬಿಜು ಜನತಾ ದಳ: 6 ಯುಪಿಎ : 2

*ಮಹಾರಾಷ್ಟ್ರ ಒಟ್ಟು48 : ಬಿಜೆಪಿ : 22 ಶಿವಸೇನಾ :07 ಕಾಂಗ್ರೆಸ್ : 11 ಎನ್ ಸಿಪಿ: 08

*ಛತ್ತೀಸ್ ಗಢ ಒಟ್ಟು 11: ಎನ್ಡಿಎ: 09 ಯುಪಿಎ:02

*ರಾಜಸ್ಥಾನ ಒಟ್ಟು 25: ಎನ್ಡಿಎ: 18 ಯುಪಿಎ: 07

*ಮಧ್ಯಪ್ರದೇಶ ಒಟ್ಟು29 : ಎನ್ಡಿಎ: 23 ಯುಪಿಎ: 06

*ಬಿಹಾರ ಒಟ್ಟು40 : ಎನ್ಡಿಎ: 31 ಯುಪಿಎ: 09

*ಉತ್ತರಪ್ರದೇಶ ಒಟ್ಟು80 : ಎನ್ಡಿಎ: 36 ಯುಪಿಎ: 02 ಮಹಾಘಟಬಂದನ್ : 42

*ಉತ್ತರಖಂಡ್ ಒಟ್ಟು 05:ಎನ್ಡಿಎ: 05 ಯುಪಿಎ 00

*ತೆಲಂಗಾಣ ಒಟ್ಟು 17: ಎನ್ಡಿಎ: 01 ಯುಪಿಎ: 06 ಟಿಆರ್ ಎಸ್:09 ಎಐಎಮ್ ಐಎಮ್:01

*ತ್ರಿಪುರ ಒಟ್ಟು 02: ಎನ್ಡಿಎ 02 ಯುಪಿಎ: 00

*ನಾಗಾಲ್ಯಾಡ್ ಒಟ್ಟು 01: ಎನ್ಡಿಎ: 01 ಯುಪಿಎ: 00

*ತಮಿಳುನಾಡು ಒಟ್ಟು 39: ಎನ್ಡಿಎ: 02 ಯುಪಿಎ:00 ಡಿಎಂಕೆ:28 ಎಐಎಡಿಎಂಕೆ: 09

*ಮೆಘಾಲಯ ಒಟ್ಟು 02: ಎನ್ಡಿಎ: 01 ಯುಪಿಎ: 01

*ಲಕ್ಷದ್ವೀಪ ಒಟ್ಟು 01: ಎನ್ಡಿಎ 00 ಯುಪಿಎ: 01

*ಕೇರಳ ಒಟ್ಟು 20: ಎನ್ಡಿಎ: 00 ಯುಪಿಎ: 16 ಎಲ್ ಡಿಎಫ್ 04

*ಕರ್ನಾಟಕ ಒಟ್ಟು 28: ಎನ್ಡಿಎ 18 ಯುಪಿಎ 07 ಜೆಡಿಎಸ್ 03

*ಜಾರ್ಖಂಡ್ ಒಟ್ಟು14: ಎನ್ಡಿಎ 08 ಯುಪಿಎ 05 ಜೆವಿಎಮ್ 01

*ಜಮ್ಮು ಮತ್ತು ಕಾಶ್ಮೀರ ಒಟ್ಟು 06: ಎನ್ಡಿಎ: 02 ಯುಪಿಎ: 04

*ಹಿಮಾಚಲಪ್ರದೇಶ ಒಟ್ಟು 04:ಎನ್ಡಿಎ 04 ಯುಪಿಎ: 00

*ಗೋವಾ ಒಟ್ಟು 02: ಎನ್ಡಿಎ 01 ಯುಪಿಎ 01

*ಗುಜರಾತ್ ಒಟ್ಟು 26: ಎನ್ಡಿಎ 24 ಯುಪಿಎ 02

* ಪುದುಚೆರಿ ಒಟ್ಟು o1: ಎನ್ಡಿಎ 00 ಯುಪಿಎ 01

* ಪಶ್ಚಿಮಬಂಗಾಳ ಒಟ್ಟು 42: ಎನ್ಡಿಎ 16 ಯುಪಿಎ 01 ಟಿಎಂಸಿ 25

click me!