
ಮಾಗಡಿ: ಕೊಪ್ಪಳದಲ್ಲಿ ನಕಲಿ ಮೊಟ್ಟೆ ಪತ್ತೆಯಾದಂತೆ ಮಾಗಡಿಯಲ್ಲೂ ಇಂತಹದ್ದೇ ಘಟನೆ ವರದಿಯಾಗಿದೆ.
ಪಟ್ಟಣದ ಕಲ್ಯಾಗೇಟ್ ಬಳಿ ನಿರ್ಮಲ ಚಿತ್ರ ಮಂದಿರದ ಮುಂಭಾಗದ ರಸ್ತೆಯಲ್ಲಿನ ಬಡಾವಣೆ ನಿವಾಸಿ ಲಕ್ಷ್ಮೇದೇವಿ ಅವರು ಖರೀದಿಸಿ ತಂದಿದ್ದ ಮೊಟ್ಟೆಯನ್ನು ಒಡೆದರೆ ನೈಜ ಮೊಟ್ಟೆಯಂತಿಲ್ಲ ಎಂದು ದೂರಿದ್ದಾರೆ.
ಒಡೆದಾಗ ಮೊಟ್ಟೆಯ ಬಿಳಿಯ ಭಾಗದಲ್ಲಿ ಪೇಪರ್‌ನಂತಹ ವಸ್ತು ಹಾಗೂ ಮೊಟ್ಟೆಯ ಒಳಗಿನ ಹಳದಿಭಾಗ ಗಟ್ಟಿಯಾಗಿರುವುದು ಕಂಡು ಬಂದಿದೆ.
ಅಸಲಿ ಮೊಟ್ಟೆ ಒಡೆದು ಹಳದಿ ಭಾಗವನ್ನು ನೀರಿನಲ್ಲಿ ಹಾಕಿದರೆ ಕದಡುತ್ತದೆ. ಮೊಟ್ಟೆಯ ಬಿಳಿಯ ಕವಚದಲ್ಲಿ ಪದರ ತೆಳುವಾಗಿರುತ್ತದೆ. ಅಲ್ಲದೆ ಹಳದಿ ಭಾಗ ಕೆಟ್ಟವಾಸನೆ ಬರುತ್ತದೆ. ಅದರೆ ನಕಲಿ ಮೊಟ್ಟೆಯಲ್ಲಿ ಇದ್ಯಾವ ಅಂಶಗಳು ಕಾಣುತ್ತಿಲ್ಲ ಎಂದರು. ]
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.