ಜಿಯೋ ಹಿಂದಿಕ್ಕಲು ಬಿಎಸ್‌ಎನ್‌ಎಲ್‌ ಸಜ್ಜು : ದಿನಕ್ಕೆ ಭರಪೂರಾ ಡೇಟಾ ಕೊಡುಗೆ

Published : Jun 22, 2018, 01:59 PM ISTUpdated : Jun 22, 2018, 02:01 PM IST
ಜಿಯೋ ಹಿಂದಿಕ್ಕಲು ಬಿಎಸ್‌ಎನ್‌ಎಲ್‌ ಸಜ್ಜು : ದಿನಕ್ಕೆ ಭರಪೂರಾ ಡೇಟಾ ಕೊಡುಗೆ

ಸಾರಾಂಶ

ಸರ್ಕಾರಿ ಸ್ವಾಮ್ಯದ  ಬಿಎಸ್ಎನ್ಎಲ್ ಈಗ  ರಿಲಾಯನ್ಸ್ ಜಿಯೋಗೆ ಭರ್ಜರಿ ಸ್ಪರ್ಧೆಯನ್ನು ಒಡ್ಡುತ್ತಿದೆ.  ಸದ್ಯ ದಿನಕ್ಕೆ 1 ಜಿಬಿ ಡೇಟಾ ಸೌಲಭ್ಯ ನೀಡುತ್ತಿದ್ದ ಬಿಎಸ್ಎನ್ಎಲ್ ನಿಂದ ಇದೀಗ ದಿನಕ್ಕೆ 3ಜಿಯ 2 ಜಿಬಿ ಡೇಟಾ ನೀಡಲಾಗುತ್ತಿದೆ.   

ನವದೆಹಲಿ : ಸರ್ಕಾರಿ ಸ್ವಾಮ್ಯದ  ಬಿಎಸ್ ಎನ್ ಎಲ್ ಈಗ  ರಿಲಾಯನ್ಸ್ ಜಿಯೋಗೆ ಭರ್ಜರಿ ಸ್ಪರ್ಧೆಯನ್ನು ಒಡ್ಡುತ್ತಿದೆ.  ಸದ್ಯ ದಿನಕ್ಕೆ 1 ಜಿಬಿ ಡೇಟಾ ಸೌಲಭ್ಯ ನೀಡುತ್ತಿದ್ದ ಬಿಎಸ್ ಎನ್ ಎಲ್ ನಿಂದ ಇದೀಗ ದಿನಕ್ಕೆ 3ಜಿಯ 2 ಜಿಬಿ ಡೇಟಾ ನೀಡಲಾಗುತ್ತಿದೆ.   

ಬಿಎಸ್‌ಎನ್‌ಎಲ್‌ನಿಂದ ಈ ಹೊಸ ಆಫರ್ ಜೂನ್ 18ನೇ ತಾರೀಕಿನಿಂದಲೇ ಆರಂಭವಾಗಿದೆ. ಈ ಆಫರ್ನಲ್ಲಿ 999, 666,485, 429, 186 ರು. ರೀಚಾರ್ಜ್  ಪ್ಲಾನ್‌ಗಳಲ್ಲಿ ಲಭ್ಯವಾಗಲಿದೆ. ಈ ಹಿಂದೆ ಇದ್ದ ಕೋಂಬೋ ಆಫರ್ ರೀಚಾರ್ಜ್ ಮೌಲ್ಯದಲ್ಲಿಯೇ ಡೇಟಾ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡಿದೆ. 

ಅಲ್ಲದೇ ಬಿಎಸ್‌ಎನ್‌ಎಲ್‌ ಮತ್ತೊಂದು  ಹೊಸ ಆಫರ್ ಪರಿಚಯಿಸಿದ್ದು, ಜುಲೈ 15ರವರೆಗೂ ರೀಚಾರ್ಜ್ ಮಾಡಿಸಿಕೊಂಡವರಿಗೆ ಲಭ್ಯವಾಗಲಿದೆ.  149 ರು. ರೀಚಾರ್ಜ್ ಮಾಡಿಸಿಕೊಂಡಲ್ಲಿ 28 ದಿನಗಳ ಕಾಲ 4ಜಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ಆಫರ್ ದಿಲ್ಲಿ ಮತ್ತು ಮುಂಬೈ ಗ್ರಾಹಕರಿಗೆ ಮಾತ್ರ ಅನ್ವಯವಾಗುವುದಿಲ್ಲ. ಫುಟ್ ಬಾಲ್ ಫ್ಯಾನ್‌ಗಳಿಗಾಗಿ ಈ ಆಫರ್ ಪರಿಚಯಿಸಲಾಗಿದೆ.  

ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೊಸ ಹೊಸ ಆಫರ್ ನೀಡುವ ಮೂಲಕ ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಭಾರೀ ಪ್ರಮಾಣದಲ್ಲಿ ಸ್ಪರ್ಧೆಯನ್ನೊಡ್ಡುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!