
ನವದೆಹಲಿ(ಮಾ.10): ಅನುಮತಿ ಪಡೆಯದೇ ತಮ್ಮ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಬಳಸಿಕೊಂಡ ಕಾರಣಕ್ಕಾಗಿ ರಿಲಯನ್ಸ್ ಜಿಯೋ ಮತ್ತು ಪೇಟಿಎಂ ಕಂಪನಿಗಳು ಕ್ಷಮಾಪಣೆ ಕೇಳಿವೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.
ಲಾಂಛನ ಮತ್ತು ಹೆಸರು ದುರ್ಬಳಕೆ ತಡೆ ಕಾಯ್ದೆ- 1950 ಅಡಿಯಲ್ಲಿ ಮೋದಿ ಅವರ ಭಾವಚಿತ್ರವನ್ನು ವಾಣಿಜ್ಯಿಕ ಜಾಹೀರಾತಿಗೆ ಬಳಸಿಕೊಳ್ಳುವುದು ನಿಷಿದ್ಧವಾಗಿದೆ. ಹೀಗಾಗಿ ಈ ಎರಡು ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿತ್ತು. ಅರಿವಿಲ್ಲದೇ ಮಾಡಿದ ಪ್ರಮಾದಕ್ಕೆ ಆ ಕಂಪನಿಗಳು ಕ್ಷಮೆ ಕೇಳಿವೆ ಎಂದು ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ಸಿ. ಆರ್. ಚೌಧರಿ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಅನುಮತಿ ಇಲ್ಲದೇ ಸಾಂವಿಧಾನಿಕ ಹುದ್ದೆಯಲ್ಲಿದ್ದವರ ಫೋಟೋವನ್ನು ಜಾಹೀರಾತು ಉದ್ದೇಶಕ್ಕೆ ಬಳಸಿದರೆ ಕಾಯ್ದೆ ಪ್ರಕಾರ ಕೇವಲ 500 ರು. ದಂಡ ಹಾಕಲು ಅವಕಾಶವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.