ಚುನಾವಣೆ ವೇಳೆ ದಾಳಿಗೆ ನಕ್ಸಲರಿಂದ 4 ಹೊಸ ತರಬೇತಿ ಶಿಬಿರ ಆರಂಭ

By Web DeskFirst Published Sep 4, 2018, 11:15 AM IST
Highlights

ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ದೊಡ್ಡ ದಾಳಿಗೆ ಕೆಂಪು ಉಗ್ರರು ಸಿದ್ಧತೆ ನಡೆಸಿರಬಹುದು ಎಂದು ಭದ್ರತಾ ಪಡೆಗಳು ಶಂಕಿಸಿವೆ. ಎಲ್ಲೆಡೆ ದಾಳಿ ನಡೆಸಲು ತರಬೇತಿ ಶಿಬಿರಿಗಳನ್ನು ಆರಂಭಿಸಿದೆ.

ನವದೆಹಲಿ: ಛತ್ತೀಸ್‌ಗಢದಲ್ಲಿ ನಕ್ಸಲ್‌ ಮುಖಂಡರು ಕಳೆದ 2 ತಿಂಗಳ ಅವಧಿಯಲ್ಲಿ 4 ಹೊಸ ತರಬೇತಿ ಶಿಬಿರಗಳನ್ನು ಸ್ಥಾಪಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ದೊಡ್ಡ ದಾಳಿಗೆ ಸಿದ್ಧತೆ ನಡೆಸಿರಬಹುದು ಎಂದು ಭದ್ರತಾ ಪಡೆಗಳು ಶಂಕಿಸಿವೆ.

ಈ ಶಿಬಿರಗಳಲ್ಲಿ ನಕ್ಸಲರು, ಸುಧಾರಿತ ಸ್ಫೋಟಕಗಳ ಬಳಕೆ ಹಾಗೂ ಬಂದೂಕುಗಳ ಬಳಕೆ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಇದು ಚುನಾವಣೆಯನ್ನು ಗುರಿಯಾಗಿಸಿ ನಡೆದ ಸಿದ್ಧತೆ ಇರಬಹುದು. ಜೊತೆಗೆ ಸರಪಂಚ್‌ ಹಾಗೂ ಗ್ರಾಮಗಳ ಪಟೇಲರಿಗೆ ಒತ್ತಡ ತರುವ ಮೂಲಕ ಅವರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗದಂತೆ ತಡೆಯುವ ಸಾಧ್ಯತೆಯೂ ಇದೆ.

ಇದಕ್ಕಾಗಿ ಸ್ಥಳೀಯ ಜನರು ಹಾಗೂ ಜನಪ್ರತಿನಿಧಿಗಳನ್ನು ಹತ್ಯೆ ಘಟನೆ ಅಲ್ಲಗೆಳೆಯುವಂತಿಲ್ಲ ಎಂದು ಗೃಹ ಸಚಿವಾಲಯ ಎಚ್ಚರಿಸಿದೆ.

click me!