ನೀರವ್ ಮೋದಿ ಸೋದರಿ ವಿರುದ್ಧ ’ರೆಡ್ ಕಾರ್ನರ್’

By Web DeskFirst Published Sep 11, 2018, 10:04 AM IST
Highlights

ನೀರವ್ ಮೋದಿ ಸೋದರಿ ವಿರುದ್ಧ ರೆಡ್ ಕಾರ್ನರ್ ನೊಟೀಸ್ | ಅಕ್ರಮ ಹಣ ವರ್ಗಾವಣೆ ಆರೋಪದ ಅಡಿಯಲ್ಲಿ ಪೂರ್ವಿ ಮೋದಿ ಬೇಕಾಗಿದ್ದಾರೆ 

ನವದೆಹಲಿ (ಸೆ. 11): ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು. ವಂಚಿಸಿ ತಲೆ ಮರೆಸಿಕೊಂಡಿರುವ ವಜ್ರೋದ್ಯಮಿ ನೀರವ್ ಮೋದಿಯ ಸೋದರಿ ಹಾಗೂ ಬೆಲ್ಜಿಯಂ ಪ್ರಜೆ ಪೂರ್ವಿ ಮೋದಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ವೊಂದನ್ನು ಜಾರಿ ಮಾಡಿದೆ.

ಅಂತಾರಾಷ್ಟ್ರೀಯ ಅರೆಸ್ಟ್ ವಾರೆಂಟ್ ಆಗಿ ನೋಟಿಸ್ ಕಾರ್ಯನಿರ್ವಹಿಸಲಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಅಡಿಯಲ್ಲಿ ಪೂರ್ವಿ ಮೋದಿ ಬೇಕಾಗಿದ್ದಾರೆ. ಜಾರಿ ನಿರ್ದೇಶನಾಲಯ ಆಕೆಯ ವಿರುದ್ಧ ರೆಡ್
ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಇಂಟರ್ ಪೋಲ್ ಅನ್ನು ಕೇಳಿಕೊಂಡಿತ್ತು. ಇದೇ ವೇಳೆ ನೀರವ್ ಸೋದರ ನೀಶಲ್ ಮೋದಿ ವಿರುದ್ಧ ಕೂಡ ಇದೇ ನೋಟಿಸ್ ಜಾರಿಗೆ ಸಿದ್ಧತೆ ನಡೆದಿದೆ. 

click me!