ಸಿಹಿ ಸುದ್ದಿ...ಕೆಎಸ್‌ಒಯು ಮಾನ್ಯತೆಗೆ ಯುಜಿಸಿ ಅಸ್ತು

First Published Jun 14, 2018, 12:53 PM IST
Highlights

ದೂರ ಶಿಕ್ಷಣ ಪಡೆದುಕೊಳ್ಳುವವರಿಗೆ, ಜತೆಗೆ ಕೆ ಎಸ್ ಒಯುನಲ್ಲಿ 2012 ರಿಂದ 2015ರ ಅವಧಿಯಲ್ಲಿ ಪದವಿ ಪಡೆದುಕೊಂಡವರಿಗೆ ಒಂದು ಸಿಹಿ ಸುದ್ದಿ ಇದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ [ಕೆ ಎಸ್ ಒಯು] ಆರಂಭಕ್ಕೆ ಯುಜಿಸಿ ಹಸಿರು ನಿಶಾನೆ ತೋರಿದೆ.  2018-19ರ ಸಾಲಿನ ಶೈಕ್ಷಣಿಕ ಮಾನ್ಯತೆ ದೊರಕಿದ್ದು ಮುಂದಿನ ಜುಲೈ ತಿಂಗಳಿಂದ ಕೆಎಸ್‌ಒಯು ಪುನಾರಂಭಗೊಳ್ಳಲಿದೆ. 
 

ಮೈಸೂರು, ಜೂನ್ 14:  ದೂರ ಶಿಕ್ಷಣ ಪಡೆದುಕೊಳ್ಳುವವರಿಗೆ, ಜತೆಗೆ ಕೆ ಎಸ್ ಒಯುನಲ್ಲಿ 2012 ರಿಂದ 2015ರ ಅವಧಿಯಲ್ಲಿ ಪದವಿ ಪಡೆದುಕೊಂಡವರಿಗೆ ಒಂದು ಸಿಹಿ ಸುದ್ದಿ ಇದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ [ಕೆ ಎಸ್ ಒಯು] ಆರಂಭಕ್ಕೆ ಯುಜಿಸಿ ಹಸಿರು ನಿಶಾನೆ ತೋರಿದೆ.  2018-19ರ ಸಾಲಿನ ಶೈಕ್ಷಣಿಕ ಮಾನ್ಯತೆ ದೊರಕಿದ್ದು ಮುಂದಿನ ಜುಲೈ ತಿಂಗಳಿಂದ ಕೆಎಸ್‌ಒಯು ಪುನಾರಂಭಗೊಳ್ಳಲಿದೆ. 

ಹಾಜರಾತಿ ಮತ್ತು ದಾಖಲಾತಿ ವಿಚಾರದಲ್ಲಿ ಯುಜಿಸಿ ನಿಯಮಗಳನ್ನು ಮುರಿಯಲಾಗಿದೆ ಎಂಬ ಆರೋಪ ಹೊತ್ತಿದ್ದ ಕೆ ಎಸ್ ಒಯು ಮಾನ್ಯತೆ ಕಳೆದುಕೊಂಡಿತ್ತು.  ಮೂರು ವರ್ಷದಿಂದ ಮಾನ್ಯತೆ ಕಳೆದುಕೊಂಡಿದ್ದ ಕೆಎಸ್‌ಒಯು ಅನ್ನು ಮುಚ್ಚಲಾಗುತ್ತದೆ. ಅದರ ಅನುದಾನವನ್ನು ಬೇರೆಡೆಗೆ ವರ್ಗಾಯಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದಕ್ಕೆಲ್ಲ ಈಗ ಉತ್ತರ ಸಿಕ್ಕಿದೆ.

ಎಂಜಿನಿಯರಿಂಗ್‌ ಶುಲ್ಕ ಹೆಚ್ಚಳ.. ಪಟ್ಟಿ ನೋಡಿ

ಮಾನ್ಯತೆ ವಿಚಾರಕ್ಕೆ ಸಂಬಂಧಿಸಿ ದೆಹಲ್ಲಿ ಸಭೆ ನಡೆಯಲಿದ್ದು ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಕೆ ಎಸ್ ಒಯು ಗೆ ತಿಳಿಸಿದೆ.

ಪದವಿಗೆ ಮತ್ತೆ ಮಾನ್ಯತೆ ಸಿಗುತ್ತಾ?
ಹಾಗಾದರೆ ಮಾನ್ಯತೆ ರದ್ದಾಗಿದ್ದ ಅವಧಿಯ ಪದವಿಗಳಿಗೆ ಅಂದರೆ ಮಾನ್ಯತೆ ಸಿಗಲಿದೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.  ಹೊಸದಾಗಿ ಅಡ್ಮಿಶನ್ ಪಡೆದುಕೊಳ್ಳಲು ಸೂಚನೆ ನೀಡಲಾಗುತ್ತಿದ್ದು ಇನ್ನುಳಿದ ವಿಚಾರಗಳಿಗೂ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಕೆ ಎಸ್ ಒಯುನ ಪದಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏನಾಗಿತ್ತು?
ಅಡ್ಮಿಶನ್ ವಿಚಾರದಲ್ಲಿ ಯುಜಿಸಿ ನಿಯಮಗಳನ್ನು ಮುರಿದ ಕೆ ಎಸ್ ಒಯು ಹೊರ ರಾಜ್ಯದವರಿಗೂ ದಾಖಲಾತಿ ನೀಡಿತ್ತು. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದ ಬೇಕಾ ಬಿಟ್ಟಿಯಾಗಿ ಕೋರ್ಸ್ ಗಳಿಗೆ ಅಡ್ಮಿಶನ್ ಪಡೆದುಕೊಳ್ಳಲಾಗಿತ್ತು. ಜತೆಗೆ ತಾಂತ್ರಿಕ ಕೋರ್ಸ್ ಗಳನ್ನು  ದೂರ ಶಿಕ್ಷಣದ ಆಧಾರದಲ್ಲಿಯೇ ನೀಡಿ ಪ್ರಮಾಣ ಪತ್ರ ನೀಡಲಾಗಿತ್ತು ಎಂಬ ಆರೋಪಗಳ ಆಧಾರದಲ್ಲಿ ಯುಜಿಸಿ ಮಾನ್ಯತೆ ರದ್ದು ಮಾಡಿತ್ತು. ಇದಾದ ನಂತರ ಕಾನೂನು ಹೋರಾಟ ಆರಂಭವಾಗಿತ್ತು.

click me!