
ಚೆನ್ನೈ: ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ತಮಿಳುನಾಡಿನ 20 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತಮ್ಮ ‘ಮಕ್ಕಳ ನೀದಿ ಮಯ್ಯಂ’ ಪಕ್ಷ ಸ್ಪರ್ಧಿಸಲು ಸಿದ್ಧವಿದೆ ಎಂದು ನೂತನ ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ ಹಾಸನ್ ಘೋಷಿಸಿದ್ದಾರೆ.
ಬುಧವಾರ ತಮ್ಮ 64ನೇ ಹುಟ್ಟುಹಬ್ಬಂದು ಕಮಲ್ ಈ ಘೋಷಣೆ ಮಾಡಿದರು. ‘ತೆರವಾಗಿರುವ ಕ್ಷೇತ್ರಗಳಿಗೆ ಯಾವತ್ತು ಚುನಾವಣೆ ನಡೆಯತ್ತದೆಯೋ ಗೊತ್ತಿಲ್ಲ. ಆದರೆ ಯಾವಾಗ ನಡೆಯಲಿದೆಯೋ ಆಗ ಸ್ಪರ್ಧೆಗೆ ನಮ್ಮ ಪಕ್ಷ ಸಿದ್ಧವಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ನಮ್ಮದು ಕೇವಲ ಭರವಸೆ ನೀಡುವ ಪಕ್ಷವಲ್ಲ. ನಾನು ಜನಾಭಿಪ್ರಾಯ ಸಂಗ್ರಹಕ್ಕೆ ಆದ್ಯತೆ ನೀಡುವೆ’ ಎಂದೂ ಕಮಲ್ ನುಡಿದರು.
ಇತ್ತೀಚೆಗೆ ಅಣ್ಣಾಡಿಎಂಕೆಯ 18 ಬಂಡುಕೋರ ಶಾಸಕರ ಅನರ್ಹತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದಲ್ಲದೆ, ಡಿಎಂಕೆಯ ಎಂ.ಕರುಣಾನಿಧಿ ಹಾಗೂ ಅಣ್ಣಾಡಿಎಂಕೆಯ ಎ.ಕೆ. ಬೋಸ್ ಎಂಬುವರ ನಿಧನವಾಗಿತ್ತು. ಹೀಗಾಗಿ 20 ಕ್ಷೇತ್ರಗಳ ಉಪಚುನಾವಣೆಗೆ ತಮಿಳುನಾಡು ಸಜ್ಜಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ