
ನವದೆಹಲಿ(ಅ.28): ಈಗ ಎಲ್ಲಿ ನೋಡಿದರೂ ಖೋಟಾ ನೋಟುಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ 500, ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಜನರು ತೆಗೆದುಕೊಳ್ಳಬೇಕಾದರೆ ನೂರಾರು ಬಾರಿ ಯೋಚಿಸುವಂತಾಗಿದೆ. ಹೀಗಾಗಿ ಆರ್. ಬಿಐ, ಸಾರ್ವಜನಕರಿಗೆ ಸಲಹೆ ನೀಡಿದೆ. ಏನಿದು ಸಲಹೆ ಅಂತೀರಾ? ಈ ಸ್ಟೋರಿ ಓದಿ
ದೇಶದಲ್ಲಿ ಹೆಚ್ಚಾಗಿದೆ ಖೋಟಾನೋಟುಗಳ ಹಾವಳಿ
ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಖೋಟಾ ನೋಟು ಹಾವಳಿ ಈಗ ಎಲ್ಲೆಲ್ಲೂ ಜೋರಾಗಿದೆ. ಅದರಲ್ಲೂ 500 ಮುಖ ಬೆಲೆ ಹಾಗೂ ,ಒಂದು ಸಾವಿರ ಮುಖ ಬೆಲೆಯ ನೋಟುಗಳೇ ಹೆಚ್ಚಾಗಿ ಖೋಟಾ ನೋಟುಗಳಾಗಿ ಕಂಡು ಬರುತ್ತಿರುವುದು ಆರ್'ಬಿಐಗೆ ತಲೆನೋವಾಗಿದೆ
ನಕಲಿ ನೋಟುಗಳು ಹರಿದಾಡುತ್ತಿರುವುದರ ಬಗ್ಗೆ ಕಳವಳಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಾರ್ವಜನಿಕರಿಗೆ ಎಚ್ಚರಿಕೆಯನ್ನ ನೀಡಿದೆ. ಯಾವುದೇ 500ರೂಪಾಯಿ, ಸಾವಿರ ರೂಪಾಯಿಯ ನೋಟುಗಳನ್ನು ಸ್ವೀಕರಿಸುವ ಮುನ್ನ ಪರಿಶೀಲಿಸಿ ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಜನರ ಪ್ರತಿನಿತ್ಯದ ವ್ಯವಹಾರಗಳಲ್ಲಿ ಹೆಚ್ಚಿನ ಮೊತ್ತದ ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಾಗುತ್ತಿವೆ. ಇದರ ಲಾಭವನ್ನು ಪಡೆಯಲು ಕೆಲ ದೇಶದ್ರೋಹಿಗಳು ಹೊಂಚು ಹಾಕುತ್ತಿವೆ ಎಂದು ಆರ್'ಬಿಐ ಕಳವಳ ವ್ಯಕ್ತಪಡಿಸಿದೆ. ನಕಲಿ ನೋಟುಗಳನ್ನು ಹತ್ತಿರದಿಂದ ನೋಡಿದರೆ ಅದು ಅಸಲಿಯೋ, ನಕಲಿಯೋ ಎಂದು ತಿಳಿಯಲು ಕೆಲ ನೋಟುಗಳ ಭದ್ರತಾ ಲಕ್ಷಣಗಳ ಬಗ್ಗೆ ಆರ್'ಬಿಐಯ ವೆಬ್'ಸೈಟ್'ನಲ್ಲಿ ಮಾಹಿತಿ ನೀಡಿದೆ.
ವೆಬ್'ಸೈಟ್'ನ ಮಾಹಿತಿಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಆರ್'ಬಿಐ ಮನವಿ ಮಾಡಿಕೊಂಡಿದೆ. ನಕಲಿ ನೋಟುಗಳೆಂದು ಕಂಡುಬಂದ ತಕ್ಷಣ ಅದನ್ನು ಚಲಾವಣೆ ಮಾಡದಂತೆ, ಕೂಡಲೇ ಬ್ಯಾಂಕಿನ ಗಮನಕ್ಕೆ ತರುವಂತೆ ರಿಸರ್ವ್ ಬ್ಯಾಂಕ್ ಜನತೆಯಲ್ಲಿ ಮನವಿ ಮಾಡಿದೆ. ಒಟ್ಟಿನಲ್ಲಿ ಸಾರ್ವಜನಿಕರು ಹಿಂದೆ ಮುಂದೆ ನೋಡದೇ ಜೇಬಿಗೆ ನೋಟುಗಳನ್ನು ಇಳಿಸಿಕೊಳ್ಳುವುದನ್ನು ಬಿಟ್ಟು ನೋಟುಗಳನ್ನ ಪರಿಶೀಲಿಸಿದರೆ ಒಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.