
ಬೆಂಗಳೂರು (ಡಿ.18): ರವಿ ಬೆಳಗೆರೆ ಮಧ್ಯಂತರ ಜಾಮೀನು ಅರ್ಜಿ ಅವಧಿ ಇಂದು ಮುಕ್ತಾಯವಾಗಿದೆ.
ಮಧ್ಯಂತರ ಜಾಮೀನು ವಿಸ್ತರಣೆಗೆ ಬೆಳಗೆರೆ ಪರ ವಕೀಲ ದಿವಾಕರ್ ಮನವಿ ಸಲ್ಲಿಸಿದ್ದಾರೆ. ಡಿ. 21 ರ ವರೆಗೆ ಮಧ್ಯಂತರ ಜಾಮೀನು ವಿಸ್ತರಣೆ ಮಾಡಲಾಗಿದೆ. ಆದರೆ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಹತ್ಯೆಗೆ ಆರೋಪಿಗಳು ತಯಾರಿ ಮಾಡಿಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಇದು ಪೊಲೀಸರು ಮಾಡುತ್ತಿರುವ ಸುಳ್ಳು ಆರೋಪ. ಪೊಲೀಸರು ರವಿ ಬೆಳಗೆರೆ ಮನೆಗೆ ದಾಳಿ ಮಾಡಿದಾಗ 2 ಗನ್ ಸಿಕ್ಕಿವೆ ಎಂದು ಹೇಳುತ್ತಾರೆ. ವಶಪಡಿಸಿಕೊಂಡು ಗನ್'ಗಳು ಪರವಾನಗಿ ಪಡೆದಿವೆ. ಮನೆಯಲ್ಲಿ ಸಿಕ್ಕ ಗುಂಡುಗಳೂ ಕಾನೂನುಬದ್ಧವಾಗಿ ಮಾಡಿದ್ದವು. ಒಂದು ಪಿಸ್ತೂಲ್, 93 ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವಗಳನ್ನು ಕಾನೂನು ಪ್ರಕಾರವೆ ಖರೀದಿಸಲಾಗಿದೆ. ಒಬ್ಬರು ಒಂದು ವರ್ಷದಲ್ಲಿ 200 ಗುಂಡುಗಳನ್ನ ತೆಗೆದುಕೊಳ್ಳಬಹುದು ಎಂದು ಬೆಳಗೆರೆ ಪರ ವಕೀಲ ದಿವಾಕರ್ ಹೇಳಿದ್ದಾರೆ.
ರವಿ ಬೆಳಗೆರೆ ಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಹೇಳುತ್ತಿರುವುದು ಸುಳ್ಳು. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂಜಿಯೋಗ್ರಾಂ ಚಿಕಿತ್ಸೆ ಅಗತ್ಯ ಇದೆ ಎಂದು ಜಯದೇವ ಆಸ್ಪತ್ರೆ ಹೃದ್ರೋಗ ತಜ್ಞೆ ಡಾ. ಆಶಾಲತಾ ತಿಳಿಸಿದ್ದಾರೆ ಎಂದು ದಿವಾಕರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.