ಭೂಪರಿವರ್ತನೆ, ನೋಂದಣಿ ನಿಯಮ ಬದಲಾವಣೆ: ನಿವೇಶನ ದರ ಶೇ.30 ದುಬಾರಿ!

Published : Apr 05, 2017, 10:50 PM ISTUpdated : Apr 11, 2018, 01:13 PM IST
ಭೂಪರಿವರ್ತನೆ, ನೋಂದಣಿ ನಿಯಮ ಬದಲಾವಣೆ: ನಿವೇಶನ ದರ ಶೇ.30 ದುಬಾರಿ!

ಸಾರಾಂಶ

ಬೆಂಗಳೂರು(ಎ.06): ರಾಜ್ಯ ಸರ್ಕಾರ ಸದ್ದಿಲ್ಲದೆ ಜಮೀನುಗಳ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.30ರ ವರೆಗೂ ಏರಿಕೆಯಾ​ಗುವಂತಹ ಹೊಸ ನಿಯಮವನ್ನು ಏಪ್ರಿಲ್‌ 1ರಿಂದಲೇ ಜಾರಿಗೆ ತಂದಿದೆ. ಈವರೆಗೆ ಪರಿವರ್ತನೆಗೊಂಡ ಕೃಷಿ ಜಮೀನುಗಳು ಬಡಾವಣೆಯಾಗಿ ಅಭಿವೃದ್ಧಿಯಾಗದ ಕಾರಣ ಅವುಗಳನ್ನು ಎಕರೆ ಅಥವಾ ಗುಂಟೆ ಲೆಕ್ಕದಲ್ಲಿ ನೋಂದಾ​ಯಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇವುಗಳ ನೋಂದಣಿ ವೇಳೆ, ಜಮೀನಿನ ವ್ಯಾಪ್ತಿ​ಯನ್ನು ಎಕರೆ ಅಥವಾ ಗುಂಟೆ ಪರಿಮಾಣ​ದಲ್ಲಿ ಪರಿಗಣಿಸದೇ ಚ.ಮೀ. ಪರಿಮಾಣ​ದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಅಭಿವೃ​ದ್ಧಿ​ಗೊಂಡ ನಿವೇಶನದ ಮಾರ್ಗಸೂಚಿ ದರದ ಶೇ.30ರಷ್ಟುಮೊತ್ತ​ವನ್ನು ಅದರ ಮೇಲೆ ವಿಧಿಸಲಿದೆ. ಹೀಗೆ ಮಾಡಿದಾಗ ಪರಿವರ್ತಿತ ಕೃಷಿ ಜಮೀನಿನ ಮಾರ್ಗ​ಸೂಚಿ ದರವು ಹಾಲಿ ಪ್ರಮಾ​ಣಕ್ಕಿಂತ ಶೇ. 10ರಿಂದ ಶೇ. 30ರವರೆಗೂ ಹೆಚ್ಚಾಗುವ ಸಂಭವವಿದೆ.

ಈ ಕುರಿತು ಅಧಿ​ಸೂಚನೆಯನ್ನು ಇತ್ತೀಚೆಗೆ ಹೊರಡಿಸ ಲಾಗಿದ್ದು, ನಿಯಮ ಏಪ್ರಿಲ್‌ 1ರಿಂದ ಜಾರಿಗೆ ಬಂದಿದೆ. ಹೊಸ ನಿಯಮದ ಪ್ರಕಾರ, ಅಭಿವೃದ್ಧಿ​ಗೊಂಡ ನಿವೇಶ ನದ ಬೆಲೆಯೇ, ಪರಿವರ್ತನೆ​ಯಾದ ಜಮೀನಿಗೂ ಅನ್ವಯ​ವಾಗುವಂತೆ ಮಾಡಿ ಮಾರ್ಗಸೂಚಿ ದರ ಪರೋ ಕ್ಷವಾಗಿ ಏರಿಕೆ​ಯಾಗುವಂತೆ ಮಾಡಲಾಗಿದೆ. ಹೀಗಾಗಿ ಇದರಿಂದ ಬೆಂಗಳೂರು ಸೇರಿ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಮಾರ್ಗ ಸೂಚಿ ದರ ಪರೋಕ್ಷವಾಗಿ ಶೇ. 10ರಿಂದ 30ರಷ್ಟುಹೆಚ್ಚಾಗಲಿದೆ. ಈ ಹೊಸ ನಿಯಮ ವನ್ನು ಮುಂದ್ರಾಂಕ ಮತ್ತು ನೋಂದಣಿ ಇಲಾಖೆ ವಿಶೇಷ ಸೂಚನೆ​ಯಡಿ ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಮೌಲ್ಯಮಾಪನ ಕೇಂದ್ರ ಸಮಿತಿ ಒಪ್ಪಿಗೆ ಪಡೆದು ಅದೇಶ ಹೊರಡಿಸಲಾಗಿದೆ. ಈ ನಿಯಮ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆ , ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ.

ಪರಿಣಾಮವೇನು?: ಈ ಹೊಸ ನಿಯಮದಿಂದ ಡೆವಲ ಪರ್‌ಗಳು ಪರಿವರ್ತನೆಯಾದ ಕೃಷಿ ಜಮೀನುಗಳನ್ನೂ ನಿವೇಶನ ದರದಲ್ಲಿ ಖರೀದಿಸಬೇಕಾಗುತ್ತದೆ. ನಂತರ ಬಡಾವಣೆ ನಿರ್ಮಿಸಲು ವಿವಿಧ ಹಂತದಲ್ಲಿ ಅಧಿಕ ವೆಚ್ಚ ಮಾಡಬೇಕಾಗುತ್ತದೆ. ಈ ಎಲ್ಲಾ ದರ ಹೆಚ್ಚಳ ಹಾಗೂ ನಾಗರೀಕ ಸೌಲಭ್ಯಗಳಿಗೆ ಬಿಡುವ ಖಾಲಿ ಜಾಗದ ವೆಚ್ಚ ವನ್ನು ಆತ ಲಭ್ಯವಾಗುವ ನಿವೇಶನಗಳಿಂದಲೇ ಪಡೆಯ ಬೇಕಾಗುತ್ತದೆ. ಹೀಗಾಗಿ ನಿವೇಶನದ ದರ ಹೆಚ್ಚಾಗಲಿದೆ. 
ಮಾರ್ಗಸೂಚಿ ದರ ಶೇ.30 ಹೆಚ್ಚು!: ಹೊಸ ನಿಯಮ ದಂತೆ ಬೆಂಗಳೂರಿನ ಬ್ಯಾಟರಾಯನಪುರ ಮತ್ತು ಜಕ್ಕೂರು ಪ್ಲಾಂಟೇಷನ್‌ ಪ್ರದೇಶವನ್ನು ಉದಾಹರಣೆಗೆ ತೆಗೆದುಕೊಳ್ಳೋಣ.

-ಹಳೇ ನಿಯಮದಂತೆ ಬ್ಯಾಟರಾಯನಪುರ, ಜಕ್ಕೂರು ಪ್ಲಾಂಟೇಷನ್‌ ಪ್ರದೇಶದಲ್ಲಿ ಎಕರೆಗೆ .8.25 ಕೋಟಿ ಮಾರ್ಗಸೂಚಿ ದರವಿದೆ. ಅದರ ನೋಂದಣಿಗೆ ಮಾರ್ಗ ಸೂಚಿ ದರ ಶೇ.65ರಷ್ಟುಹೆಚ್ಚುವರಿ ಅಂದರೆ ಎಕರೆಯ ಮಾರ್ಗಸೂಚಿ ದರ .13.62 ಕೋಟಿ ಆಗುತ್ತದೆ.

-ಅದೇ ಬ್ಯಾಟರಾಯನಪುರ ಮತ್ತು ಜಕ್ಕೂರು ಪ್ಲಾಂಟೇ ಷನ್‌ ಪ್ರದೇಶದಲ್ಲಿ (ಎಕರೆ ಬದಲು ಚ. ಮೀಟರ್‌ ಮತ್ತು ಅಭಿವೃದ್ಧಿ ಹೊಂದಿದ ಜಮೀನೆಂದು ಪರಿಗಣಿಸಬೇಕು) ಚ.ಮೀ. .1,30,000 ಮಾರ್ಗ ಸೂಚಿ ದರವಿದೆ.

-ಇದರಲ್ಲಿ ಮಾರ್ಗಸೂಚಿ ದರದ ಶೇ.30ರಷ್ಟುಎಂದರೆ ಚದರ ಮೀಟರ್‌ಗೆ .40,000 ಆಗುತ್ತದೆ. ಅದೇ ರೀತಿ ಎಕರೆಗೆ (ಎಕರೆಗೆ 4047 ಚ.ಮೀಟರ್‌ಗಳು) . 13.62 ಕೋಟಿ ಬದಲು .15.78 ಕೋಟಿ ಆಗುತ್ತದೆ. ಅಂದರೆ ಎಕರೆ ಲೆಕ್ಕಾಚಾರಕ್ಕೂ, ಚದರ ಮೀಟರ್‌ ಲೆಕ್ಕಾಚಾರಕ್ಕೂ ಶೇ.13ರಷ್ಟುಹೆಚ್ಚಾಗುತ್ತದೆ.

-ಇದೇರೀತಿ ಗೊಟ್ಟಿಗೆರೆ ಮತ್ತು ಕೆಂಗೇರಿ ಸುತ್ತಮುತ್ತ ನೋಡಿದರೆ ಶೇ.30 ವರೆಗೂ ಏರಿಕೆಯಾಗುತ್ತದೆ. ಇತರ ಮಹಾನಗರಗಳಲ್ಲೂ ಈ ರೀತಿ ದರ ಏರಿಕೆಯಾಗಲಿದೆ.

ವರದಿ: ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌