ವಿಶ್ವದ ಅತಿ ಪುಟ್ಟ ಹಣ್ಣಿನ ದರ 71 ಸಾವಿರ ರು.!: ಏನಿದರ ವಿಶೇಷತೆ?

By Web DeskFirst Published Feb 1, 2019, 9:06 AM IST
Highlights

ಇಂಡೋನೇಷ್ಯಾದ ತಸಿಕ್‌ಮಲಯಾ ಎಂಬ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಎರಡು ಹಣ್ಣುಗಳನ್ನು ಮಾರಾಟಕ್ಕಿಟ್ಟಿದ್ದು, ಬರೋಬ್ಬರಿ 71 ಸಾವಿರ ರೂಪಯಿ ನಿಗದಿಪಡಿಸಿದ್ದಾರೆ. ಏನಿದರ ವಿಶೇಷ?

ಎಷ್ಟೇ ಅಪರೂಪದ ಹಣ್ಣಾದರೂ ಅದಕ್ಕೆ ನೂರು ಇನ್ನೂರಕ್ಕಿಂತ ಹೆಚ್ಚಿನ ದರ ಇರಲು ಸಾಧ್ಯವಿಲ್ಲ. ಆದರೆ, ಇಂಡೋನೇಷ್ಯಾದ ತಸಿಕ್‌ಮಲಯಾ ಎಂಬ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಹಲಸಿನ ಹಣ್ಣಿನ ರೀತಿಯ 2 ಮುಳ್ಳಿನ ಹಣ್ಣುಗಳನ್ನು ಮಾರಾಟಕ್ಕೆ ಇಡಲಾದ್ದು, ಒಂದು ಹಣ್ಣಿನ ಬೆಲೆ ಬರೋಬ್ಬರಿ 71 ಸಾವಿರ ರು!

ವಿಶ್ವದ ಅತೀ ದುರ್ಗಂಧದ ಹಣ್ಣಿದು..! 

ಜೆ- ಕ್ವೀನ್‌ ಬ್ರಾಂಡಿನ ಡುರೇನ್‌ ಹಣ್ಣುಗಳು ಇದಾಗಿದ್ದು, ತೀರಾ ಅಪರೂಪವಾಗಿರುವ ಕಾರಣ ಇವುಗಳಿಗೆ ಇಷ್ಟೊಂದು ಬೆಲೆ. ವಿಶ್ವದ ಅತಿ ಸಣ್ಣ ಹಣ್ಣು ಎಂಬ ಖ್ಯಾತಿಯೂ ಇದಕ್ಕಿದೆ.

ಏನಿದರ ವಿಶೇಷತೆ?

ಇದು ವಿಶ್ವದಲ್ಲೇ ಅತೀ ಹೆಚ್ಚು ವಾಸನೆ ಮತ್ತು ವಾಕರಿಕೆ ತರುವ ಹಣ್ಣು. ಆದರೆ ವಿಪರೀತ ಶಕ್ತಿ ತರಿಸುವ ಗುಣಗಳಿರುವ ಈ ಹಣ್ಣು ಸಿಕ್ಕಾಪಟ್ಟೆ ರುಚಿಯಾಗಿರುವುದರಿಂದ ಜನರು ತಿನ್ನಲು ಹಾತೊರೆಯುತ್ತಾರೆ. ಅಲ್ಲದೇ ಖಿನ್ನತೆಯಂಥ ಮಾನಸಿಕ ಸಮಸ್ಯೆಯನ್ನೂಹೋಗಾಲಿಡಿಸುವ ಗುಣ ಈ ಹಣ್ಣಿಗೆದೆ. ಹಲ್ಲಿನ ಹಾಗೂ ಎಲುಬಿನ ಆರೋಗ್ಯಕ್ಕೂ ಅಗತ್ಯವಿರುವ ಅಂಶಗಳು ಈ ಹಣ್ಣಿನಲ್ಲಿದ್ದು, ಪಚನ ಕ್ರಿಯೆಯನ್ನೂ ಅಭಿವೃದ್ಧಿಗೊಳಿಸುತ್ತದೆ. ಬಹಳ ಔಷಧೀಯ ಗುಣಗಳಿರೋ ಕಾರಣದಿಂದಲೇ ಈ ಹಣ್ಣು ಅದೆಷ್ಟೇ ದುರ್ವಾಸನೆಯಿಂದ ಕೂಡಿದರೂ, ತಿನ್ನುತ್ತಾರೆ.

ಹಣ್ಣಿನ ದುರ್ವಾಸನೆ ಕಾರಣದಿಂದಲೇ ಚೀನಾ ಅಥವಾ ಏಷ್ಯಾದ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಕೆಲವು ಹೊಟೇಲ್‌ಗಳಲ್ಲಿ ಈ ಹಣ್ಣನ್ನು ಮಾರುವಂತಿಲ್ಲ

click me!