
ಶಿವಮೊಗ್ಗ(ಸೆ.24) ಶಿವಮೊಗ್ಗದಲ್ಲಿ ಇಂದು ನಡು ಮಧ್ಯಾಹ್ನ ಸೂರ್ಯನೇ ಬಣ್ಣದ ಛತ್ರಿ ಹಿಡಿದು ನಿಂತಿದ್ದ. ಸೂರ್ಯಂಗೆ ಟಾರ್ಚಾ! ಎಂದು ಮಾತಿನಲ್ಲಿ ಬಳಸುವುದುಂಟು. ಇಲ್ಲಿ ಸೂರ್ಯಂಗೆ ಉಂಗುರಾನಾ? ಎಂದು ಕೇಳಬೇಕಾಗಿದೆ.
ವೈಜ್ಞಾನಿಕವಾಗಿ ಇದನ್ನು ಸೋಲಾರ್ ಹ್ಯಾಲೋ (Solar Halo, To be precise, 22° Halo) ಎಂದು ಕರೆಯಲಾಗುತ್ತದೆ. ಸೂರ್ಯ ಕಿರಣಗಳು ಭೂಮಿಗೆ ಮೋಡಗಳನ್ನು ಹಾದು ಬರುವ ಮುನ್ನ ಈ ರೀತಿಯ ಏಳು ಬಣ್ಣದ ವೃತ್ತಾಕಾರದ ಉಂಗುರ ನಿರ್ಮಾಣವಾಗಬಲ್ಲದು.
ಭೂಮಿಯಿಂದ 20 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ (ಟ್ರೊಫೋಸ್ಫಿಯರ್) ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ತೀಕರಣವಾಗಿ ಮಂಜಿನ ಹರಳುಗಳಾಗಿರುತ್ತವೆ. ಈ ಗೋಳಾಕಾರದ ಮಂಜಿನ ಹರಳಿನ ಮೂಲಕ ಸೂರ್ಯನ ಬಿಳಿ ಬೆಳಕು ಹಲವು ಸಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದುರುವಿಕೆ ಉಂಟಾಗುತ್ತದೆ. ಇದರ ಪರಿಣಾಮ ಸೂರ್ಯನ ಸುತ್ತ22 ಡಿಗ್ರಿ ವೃತ್ತಾಕಾರದಲ್ಲಿ ಈ ಬಗೆಯ ಕಾಮನ ಬಿಲ್ಲುಗಳು ಉಂಟಾಗುತ್ತವೆ ಎಂದು ಖಗೋಳ ವಿಜ್ಞಾನಿ ಹರೋನಹಳ್ಳಿ ಸ್ವಾಮಿ ಹೇಳುತ್ತಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.