ಒವೈಸಿ ಮಾತ್ರವಲ್ಲ, ಪಿಎಫ್‌ಐ ಜತೆಯೂ ಬಿಜೆಪಿ ಹೊಂದಾಣಿಕೆ: ರಾಮಲಿಂಗ ರೆಡ್ಡಿ

By Suvarna Web DeskFirst Published Jan 31, 2018, 9:02 PM IST
Highlights
  • ಕಾಂಗ್ರೆಸ್- ಪಿಎಫ್‌ಐ ಮೈತ್ರಿಗೆ ದಾಖಲೆ ಕೊಡಿ: ರೆಡ್ಡಿ ಸವಾಲು
  • ಬಿಜೆಪಿ- ಒವೈಸಿ ಹೊಂದಾಣಿಕೆ ಹಳೆಯ ವಿಚಾರ

ಬೆಂಗಳೂರು: ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಜತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ದಾಖಲೆಗಳಿದ್ದರೆ ಬಿಜೆಪಿ ರಾಜ್ಯದ ಜನತೆ ಎದುರು ತೆರೆದಿಡಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಮತ್ತು ಒವೈಸಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವುದು ಹಳೆಯ ವಿಚಾರ. ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಈ ಹೊಂದಾಣಿಕೆ ಈಗಾಗಲೇ ಜಾರಿಯಲ್ಲಿದೆ. ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ನಾಯಕರು ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮತ್ತು ಪಿಎಫ್‌ಐ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂಬ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಅವರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವರು, ಈ ರೀತಿ ವಿನಾಕಾರಣ ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಕೊಡಲಿ. ಆರೋಪ ಮಾಡುವುದೇ ಅವರ ಜಾಯಮಾನ. ಹೀಗಾಗಿಯೇ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮ ಪಂಚಾಯತಿಯಲ್ಲಿ ಪಿಎಫ್‌ಐ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ಬಿಜೆಪಿಯ ಸದಸ್ಯ ಉಪಾಧ್ಯಕ್ಷರಾಗಿದ್ದರು. ಈ ಬಗ್ಗೆ ಸುರೇಶ್‌ಕುಮಾರ್ ಉತ್ತರಿಸಲಿ ಎಂದು ಒತ್ತಾಯಿಸಿದರು.

 

click me!