ಬಿಜೆಪಿಯ ಬೈಕ್ ರ್ಯಾಲಿ ತಡೆದಿದ್ದೇಕೆ? ಕಾರಣ ಬಿಚ್ಚಿಟ್ಟ ಸಚಿವ ರಾಮಲಿಂಗಾ ರೆಡ್ಡಿ

Published : Sep 05, 2017, 01:53 PM ISTUpdated : Apr 11, 2018, 12:48 PM IST
ಬಿಜೆಪಿಯ ಬೈಕ್ ರ್ಯಾಲಿ ತಡೆದಿದ್ದೇಕೆ? ಕಾರಣ ಬಿಚ್ಚಿಟ್ಟ ಸಚಿವ ರಾಮಲಿಂಗಾ ರೆಡ್ಡಿ

ಸಾರಾಂಶ

ಬಿಜೆಪಿಯ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪೊಲೀಸ್ ಇಲಾಖೆಯಿಂದ ಪರವಾನಿಗೆ ನೀಡಿಲ್ಲ. ಆದರೂ ಹಠಕ್ಕೆ ಬಿದ್ದ ಬಿಜೆಪಿಗರು ಬೈಕ್ ರ್ಯಾಲಿಗೆ ಸಜಕ್ಜಾಗಿದ್ದರು. ಹೀಗಾಗಿ ರಾಜ್ಯದ ನಾಣಾ ಬಾಗಗಳಲ್ಲಿ ಆರಂಭವಾಗಿದ್ದ ಈ ಬೈಕ್ ರ್ಯಾಲಿಯನ್ನು ಇಲಾಖೆಯ ನಿರ್ದೇಶನದಂತೆ ಪೊಲೀಸರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ರ್ಯಾಲಿಯ ಕುರಿತಾಗಿ ಮತ್ತು ಇದನ್ನು ತಾವ್ಯಾಕೆ ತಡೆದೆವು ಎನ್ನುವುದರ ಕುರಿತಾಗಿ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರುಸುವರ್ಣ ನ್ಯೂಸ್'ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು(ಸೆ.05): ಬಿಜೆಪಿಯ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪೊಲೀಸ್ ಇಲಾಖೆಯಿಂದ ಪರವಾನಿಗೆ ನೀಡಿಲ್ಲ. ಆದರೂ ಹಠಕ್ಕೆ ಬಿದ್ದ ಬಿಜೆಪಿಗರು ಬೈಕ್ ರ್ಯಾಲಿಗೆ ಸಜಕ್ಜಾಗಿದ್ದರು. ಹೀಗಾಗಿ ರಾಜ್ಯದ ನಾಣಾ ಬಾಗಗಳಲ್ಲಿ ಆರಂಭವಾಗಿದ್ದ ಈ ಬೈಕ್ ರ್ಯಾಲಿಯನ್ನು ಇಲಾಖೆಯ ನಿರ್ದೇಶನದಂತೆ ಪೊಲೀಸರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ರ್ಯಾಲಿಯ ಕುರಿತಾಗಿ ಮತ್ತು ಇದನ್ನು ತಾವ್ಯಾಕೆ ತಡೆದೆವು ಎನ್ನುವುದರ ಕುರಿತಾಗಿ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರುಸುವರ್ಣ ನ್ಯೂಸ್'ಗೆ ಪ್ರತಿಕ್ರಿಯಿಸಿದ್ದಾರೆ.

ಪರವಾನಿಗೆ ನೀಡಿದರೆ ಯಾವುದಾದರೂ ಗೊಂದಲ ಉಂಟಾಗುತ್ತದೆ ಎಂದೋ ಅಥವಾ ಬಿಜೆಪಿಯ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆಯಾ ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಉತ್ತರಿಸಿದ ಸಚಿವರು 'ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುವ ವಿಚಾರವೇ ಇಲ್ಲ. ಆದರೆ ಚಿಕ್ಕದೊಂದು ಗಣೇಶೋತ್ಸವ ಏರ್ಪಡಿಸಿದರೂ ನಾವು ಪರವಾನಿಗೆ ಪಡೆಯುತ್ತೇವೆ. ರಾಜಕೀಯ ಪಕ್ಷಗಳು ಆಯೋಜಿಸುವ ರ್ಯಾಲಿ, ಪಬ್ಲಿಕ್ ಮೀಟಿಂಗ್ಸ್'ಗಳಿಗೆ ಪರವಾನಿಗೆ ಪಡೆಯುವುದು ಕರ್ತವ್ಯ ಮತ್ತು ಇದು ಅತಿ ಅಗತ್ಯ. 10 ದಿನಕ್ಕೂ ಮೊದಲು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಿಂದ ರ್ಯಾಲಿ ಹೊರಡುತ್ತೇವೆ ಎಂದು ಬಿಜೆಪಿಗರು ಹೇಳಿದ್ದರು. ಆಯಾ ಜಿಲ್ಲೆಯ ಎಸ್'ಪಿ ಮತ್ತು ಕಮಿಷನರ್'ಗಳ ಬಳಿ ಇವರು ಪರವಾನಿಗೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಎಷ್ಟು ಜನರು ಹೋಗುತ್ತಾರೆ? ಒಂದು ವೇಳೆ ಕಾರ್ಯಕರ್ತರೊಂದಿಗೆ ಇತರರು ಸೇರಿಕೊಂಡಾಗ ಏನು ಮಾಡುತ್ತೀರಾ ಮೊದಲಾದ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ನಿನ್ನೆಯವರೆಗೂ ಯಾವುದೇ ದಾಖಲೆಗಳನ್ನು ನೀಡಿಲ್ಲ. ವಿರೋಧ ಪಕ್ಷದ ನಾಯಕರು ನಮ್ಮ ಕಚೇರಿಗೆ ಬಂದಾಗಲೂ ಅಧಿಕಾರಿಗಳು ಕೇಳಿರುವ ದಾಖಲೆಗಳನ್ನು ನೀಡಿ ನಾಣೇ ಪರವಾನಿಗೆ ನೀಡು8ವಂತೆ ಪೊಲೀಸರಿಗೆ ತಿಳಿಸುವುದಾಗಿಯೂ ಹೇಳಿದ್ದೆ. ಹೀಗಿದ್ದರೂ ಯಾವುದೇ ದಾಖಲೆಗಳನ್ನು ನೀಡಿಲ್ಲ. ಮಂಗಳೂರಿನಿಂದ ನೂರಾರು ಕಿಲೋಮೀಟರ್ ದೂರದಿಂದ ಸಾವಿರಾರು ಬೈಕ್'ಗಳ್ಲಲಿ ಹೋದರೆ, ಇತರರು ಸೇರಿಕೊಳ್ಳುವ ಅಪಾಯವುದೆ. ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದರೆ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಇದಕ್ಕೂ ಹೆಚ್ಚಾಗಿ ಮಂಗಳೂರು ಒಂದು ಸೂಕ್ಷ್ಮ ಪ್ರದೇಶ ಇತ್ತೀಚೆಗಷ್ಟೇ ಕೋಮು ಗಲಭೆ ನಡೆದು ಶಾಂತಿಯ ವಾತಾವರಣ ಅಲ್ಲಿ ನಿರ್ಮಾಣವಾಗಿದೆ.  ನಿನ್ನೆ ನನ್ನ ಬಳಿ ಬಂದ ಮುಖಂಡರ ಬಳಿಯೂ ನೀವು ಬೈಕ್ ರ್ಯಾಲಿ ಬಿಡಿ, ಜನರಿಗೆ ತೊಂದರೆಯಾಗುತ್ತದೆ. ಬೇಕಿದ್ದರೆ ಮಂಗಳೂರಿನಲ್ಲಿ ಅಥವಾ ಬೆಂಗಳೂರಿನಲ್ಲಿ ಸಭೆ ನಡೆಸಿ ಎಂದೂ ತಿಳಿಸಿದೆ. ಈಗ ಮಂಗಳೂರಿನಲ್ಲಿ ಶಾಂತಿ ನೆಲೆಸಿದೆ. ಅವರಿಗೆ ಶಾಂತಿ ಇರುವುದು ಬೇಕಾಗಿಲ್ಲ, ಜನರನ್ನು ಡಿಸ್ಟರ್ಬ್ ಮಾಡಬೇಕು ಇದರಿಂದ ಮುಂದಿನ ಚುನಾವಣೆಗೆ ಲಾಭ ಆಗುತ್ತದೆ ಎಂದು ಹೀಗೆ ಮಾಡುತ್ತಿದ್ದಾರೆ' ಎಂದಿದ್ದಾರೆ.

ಇನ್ನು ನೀವು ಕೂಡಾ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಳ್ಳಾರಿಗೆ ಹೋಗಿದ್ರಿ, ಆಗ ನಿಮಗೆ ಅವರು ರಕ್ಷಣೆ ನೀಡಿದ್ದರು. ಆದರೆ ನೀವು ಗಲಾಟೆ ಆಗಬಹುದೆಂಬ ಊಹೆಯ ಮೇರೆಗೆ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿಲ್ವಾ?

ನಾವು ಕೆಲವು ಮಾಹಿತಿಗಳನ್ನು ನೀಡುವಂತೆ ಅವರಿಗೆ ಸೂಚಿಸಿದ್ದೆವು. ಆದರೂ ಅವರು ನೀಡಿಲ್ಲ. ಒಂದು ವೇಳೆ ನಾವು ಕೇಳಿದ ಮಾಹಿತಿ ನೀಡಿದ್ದರೆ ಪರವಾನಿಗೆ ನೀಡುತ್ತಿದ್ದೆವು. ಇನ್ನು ನಾವು ಬಳ್ಳಾರಿಗೆ ಹೋದಾಗ ಅಲ್ಲಿ ಶಾಂತಿಯುತವಾದ ವಾತಾವರಣವಿತ್ತು ಅಲ್ಲಿ ಯಾವುದೇ ಗಲಾಟೆಗಳಿರಲಿಲ್ಲ. ಆದರೆ ಮಂಗಳೂರಿನಲ್ಲಿ  ಕೆಲವೇ ದಿನಗಳ ಹಿಂದೆ ಬೆಂಕಿ ಹತ್ತಿ ಉರಿದಿತ್ತು. ಕರ್ಫ್ಯೂ, ನಿಷೇಧಾಜ್ಞೆ ಇತ್ತು. ಇಂತಹ ಸ್ಥಳಕ್ಕೆ ಇವರೀಗ ಹೋಗುತ್ತಿದ್ದಾರೆ. ಯಾಕೆ ಹೋಗುತ್ತಿದ್ದಾರೆ? ಅಲ್ಲಿನ ಜನರಿಗೆ ಒಳ್ಳೆದಾಗಬೇಕೆಂದು ಜಹೋಗುತ್ತಿದ್ದಾರಾ? ಇದು ಕೇವಲ ರಾಜಕೀಯವಷ್ಟೇ ಮುಂದಿನ ಚುನಾವಣೆಗೆ ಅನುಕೂಲವಾಗಲಿ ಎಂದು ಅಲ್ಲಿ ಹೋಗಿ ಶಾಂತಿ ಕದಡಲು ಹೋಗುತ್ತಿದ್ದಾರಷ್ಟೇ' ಎಂದಿದ್ದಾರೆ.

ಇನ್ನು ರ್ಯಾಲಿ ನಡೆಸುವವರಿಗೆ ನೀವೇನು ಹೇಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ 'ಬಿಜೆಪಿಗರಲ್ಲಿ ಈಗಲೂ ನಾನು ಬೈಕ್ ರ್ಯಾಲಿಯನ್ನು ಬಿಡಿ, ಅದರ ಬದಲಾಗಿ ಮಂಗಳೂರಿನಲ್ಲಿ ಅಥವಾ ರಾಜಧಾನಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಪ್ರತಿಭಟನೆ ನಡೆಸಿ. ಪ್ರತಿಭಟಿಸುವ ಹಕ್ಕನ್ನು ನಾವು ಖಂಡಿತವಾಗಿಯೂ ಹತ್ತಿಕ್ಕುವುದಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆ ಮಾಡಿ ಪ್ರತಿಭಟಿಸುವುದು ಮತ್ತು ಮೆರವಣಿಗೆ ಮಾಡುವುದು ಬೇಡ ೆಂದು ಮನವಿ ಮಾಡಿಕೊಳ್ಳುತ್ತೇನೆ' ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು