ಲೋಕಸಭಾ ಚುನಾವಣೆ : ಅಪ್ಪನ ವಿರುದ್ಧವೇ ಮಗಳು ಸ್ಪರ್ಧೆ

By Web DeskFirst Published Sep 15, 2018, 10:54 AM IST
Highlights

ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವರ ಕುಟುಂಬದಲ್ಲೇ ರಾಜಕೀಯ ಫೈಟ್ ಎದುರಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

ನವದೆಹಲಿ: ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರ ಕುಟುಂಬದಲ್ಲಿ ರಾಜಕೀಯ ಕಲಹ ಏರ್ಪಟ್ಟಿದೆ. 

2019 ರ ಲೋಕಸಭೆ ಚುನಾವಣೆಯಲ್ಲಿ ಪಾಸ್ವಾನ್ ಹಾಗೂ ಪುತ್ರ ಚಿರಾಗ್ ಪಾಸ್ವಾನ್ ವಿರುದ್ಧ ಸ್ಪರ್ಧಿಸುವುದಾಗಿ ಪುತ್ರಿ ಆಶಾ ದೇವಿ ಹಾಗೂ ಅಳಿಯ ಅನಿಲ್ ಸಾಧು ಘೋಷಿಸಿದ್ದಾರೆ. 

ಆಶಾ, ಪಾಸ್ವಾನ್‌ರ ಮೊದಲ  ಹೆಂಡತಿ ರಾಜ್ ಕುಮಾರ್ ದೇವಿಯ ಮಗಳಾಗಿದ್ದಾರೆ. ಪಾಸ್ವಾನ್ 1981 ರಲ್ಲಿ ಆಕೆಗೆ ವಿಚ್ಛೇದನ ನೀಡಿ 1983ರಲ್ಲಿ ರೀನಾ ಎನ್ನುವವರನ್ನು ವಿವಾಹ ಆಗಿದ್ದರು. 

ಪಾಸ್ವಾನ್ ಸಮುದಾಯವನ್ನು ಪಾಸ್ವಾನ್ ವಂಚಿಸುತ್ತಿದ್ದು, ತಮ್ಮ ಸ್ವಂತ ಮಗಳನ್ನೇ ಕಡೆಗಣಿಸಿದ್ದಾರೆ ಎಂದು ಅನಿಲ್ ಸಾಧು ಆರೋಪಿಸಿದ್ದಾರೆ.

click me!