ರಾಮ್ ರಹೀಂ ಜೈಲು ಶಿಕ್ಷೆಗೂ ಮುನ್ನ ನಡೆದಿತ್ತು ಹಿಂಸಾಚಾರ; ಗಲಾಟೆಗೆ ಬಾಬಾ ದತ್ತು ಪುತ್ರಿಯೇ ನೀಡಿದ್ದಳಂತೆ ಸುಪಾರಿ!

Published : Oct 07, 2017, 10:07 PM ISTUpdated : Apr 11, 2018, 01:02 PM IST
ರಾಮ್  ರಹೀಂ ಜೈಲು ಶಿಕ್ಷೆಗೂ ಮುನ್ನ ನಡೆದಿತ್ತು ಹಿಂಸಾಚಾರ; ಗಲಾಟೆಗೆ ಬಾಬಾ ದತ್ತು ಪುತ್ರಿಯೇ  ನೀಡಿದ್ದಳಂತೆ ಸುಪಾರಿ!

ಸಾರಾಂಶ

ಅತ್ಯಾಚಾರಿ ರಾಮ್  ರಹೀಂ ಸಿಂಗ್‌ಗೆ ಜೈಲು ಶಿಕ್ಷೆ ಘೋಷಣೆಯಾಗುವ ಒಂದು ದಿನ ಮೊದಲೇ ಪಂಚಕುಲಾದಲ್ಲಿ ಹಿಂಸಾಚಾರ ನಡೆಸಲು ದತ್ತುಪುತ್ರಿ ಹನಿಪ್ರೀತ್​ 1.25 ಕೋಟಿ ರೂಪಾಯಿ ಹಣ ನೀಡಿದ್ದಳು ಅನ್ನೋ ಮಾಹಿತಿ ಬಹಿರಂಗವಾಗಿದೆ.

ನವದೆಹಲಿ (ಅ.07): ಅತ್ಯಾಚಾರಿ ರಾಮ್  ರಹೀಂ ಸಿಂಗ್‌ಗೆ ಜೈಲು ಶಿಕ್ಷೆ ಘೋಷಣೆಯಾಗುವ ಒಂದು ದಿನ ಮೊದಲೇ ಪಂಚಕುಲಾದಲ್ಲಿ ಹಿಂಸಾಚಾರ ನಡೆಸಲು ದತ್ತುಪುತ್ರಿ ಹನಿಪ್ರೀತ್​ 1.25 ಕೋಟಿ ರೂಪಾಯಿ ಹಣ ನೀಡಿದ್ದಳು ಅನ್ನೋ ಮಾಹಿತಿ ಬಹಿರಂಗವಾಗಿದೆ.

ಹಣವನ್ನ ಡೇರಾದ ಪಂಚಕುಲಾ ಶಾಖೆ ಮುಖ್ಯಸ್ಥ ಚಾಮ್‌ಕೌರ್‌ ಸಿಂಗ್‌ಗೆ ನೀಡಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ರಾಕೇಶ್ ಕುಮಾರ್‌ ಈಗ ಎಸಿಪಿ ಮುಕೇಶ್‌ ಮಲ್ಹೋತ್ರಾ ನೇತೃತ್ವದ ವಿಶೇಷ ತನಿಖಾ ತಂಡದ  ವಶದಲ್ಲಿದ್ದಾನೆ. ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ ಬಳಿಕ 36 ಮಂದಿ ಡೇರಾ ಬೆಂಬಲಿಗರು ಮೃತಪಟ್ಟಿದ್ದರು. ರಾಕೇಶ್‌ನನ್ನು ಸೆಪ್ಟೆಂಬರ್‌ 27ರಂದು ಬಂಧಿಸಲಾಗಿತ್ತು. ಗಲಾಟೆ ನಡೆಸುವಮಥೆ ಚಾಮ್‌ಕೌರ್‌ಗೆ 1.25 ಕೋಟಿ ರೂ ಹಸ್ತಾಂತರವಾಗಿರುವುದನ್ನು ಪಂಚಕುಲಾ ಪೊಲೀಸ್ ಕಮಿಷನರ್‌ ಎ.ಎಸ್‌ ಚಾವ್ಲಾ ಖಚಿತಪಡಿಸಿದ್ದಾರೆ. ಸದ್ಯ ಹನಿಪ್ರೀತ್‌‌ 6 ದಿನಗಳ ಪೊಲೀಸ್‌ ಕಸ್ಟಡಿಯಲ್ಲಿದ್ದು, ಹನಿಪ್ರೀತ್‌ಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಂಡ ಹಾಕಿ ಲೈಂಗಿಕ ದೌರ್ಜನ್ಯ ಕೇಸ್ ಮುಚ್ಚಿ ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು! ಏನಿದು ಪ್ರಕರಣ?
ಗ್ರೇಟರ್ ಬೆಂಗಳೂರು: ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ತಡೆ, ಬಡರೋಗಿಗಳ ನೆರವಿಗೆ ಕತ್ತರಿ?