ಅರವಿಂದ್ ಕೇಜ್ರಿವಾಲ್ ಕೇಸ್'ನಿಂದ ರಾಮ್ ಜೇಠ್ಮಲಾನಿ ಹಿಂದಕ್ಕೆ

By Suvarna Web DeskFirst Published Jul 26, 2017, 9:05 PM IST
Highlights

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ನಡುವಿನ ಮಾನನಷ್ಟ ಮೊಕದ್ದಮೆ ಕೇಸ್’ನಲ್ಲಿ ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡುತ್ತಿದ್ದ ರಾಮ್ ಜೇಠ್ಮಲಾನಿ ಕೇಸ್'ನಿಂದ ಹಿಂದೆ ಸರಿದಿದ್ದಾರೆ.

ನವದೆಹಲಿ (ಜು.26): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ನಡುವಿನ ಮಾನನಷ್ಟ ಮೊಕದ್ದಮೆ ಕೇಸ್’ನಲ್ಲಿ ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡುತ್ತಿದ್ದ ರಾಮ್ ಜೇಠ್ಮಲಾನಿ ಕೇಸ್'ನಿಂದ ಹಿಂದೆ ಸರಿದಿದ್ದಾರೆ.

ವಿಚಾರಣೆ ವೇಳೆ ಅರುಣ್ ಜೇಟ್ಲಿಯವರಿಗೆ ಪಾಟೀ ಸವಾಲು ಹಾಕುವ ಸಂದರ್ಭದಲ್ಲಿ  ದಗಾಕೋರ ಎನ್ನುವ ಪದವನ್ನು ಜೇಠ್ಮಲಾನಿ ಬಳಸುತ್ತಾರೆ. ಇದನ್ನು ಒಳಸಲು ಹೇಳಿದ್ದೇ ಅರವಿಂದ್ ಕೇಜ್ರಿವಾಲ್ ಎಂದು ಜೇಠ್ಮಲಾನಿ ಹೇಳಿದ್ದರು. ಆದರೆ ಇದನ್ನು ಕೇಜ್ರಿ ನಿರಾಕರಿಸಿ ನಾನು ಹಾಗೆ ಹೇಳಿಲ್ಲ ಎಂದು ಸುಳ್ಳು ಹೇಳಿದ್ದಕ್ಕಾಗಿ ನಾನು ಹಿಂದೆ ಸರಿಯುತ್ತಿದ್ದೇನೆ ಎಂದು ರಾಮ್ ಜೇಠ್ಮಲಾನಿ ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್’ಯಿಂದ ಬರಬೇಕಾಗಿದ್ದ 2 ಕೋಟಿ ಫೀಯನ್ನು ಮನ್ನಾ ಮಾಡಬಹುದು. ನಾನು ಸಾಕಷ್ಟು ಜನರಿಗೆ ಉಚಿತವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಹಣ ಬರದಿದ್ದರೂ ಯಾವುದೇ ತೊಂದರೆಯಿಲ್ಲ ಎಂದು ಜೇಠ್ಮಲಾನಿ ಹೇಳಿದ್ದಾರೆ.   

click me!