ಸೌಂದರ್ಯ ವಿಚ್ಚೇದನ ಅಭಿಮಾನಿಗಳಿಗೆ ಸಿಹಿ ವಿಚಾರವೇ ?

Published : Sep 19, 2016, 05:27 AM ISTUpdated : Apr 11, 2018, 12:49 PM IST
ಸೌಂದರ್ಯ ವಿಚ್ಚೇದನ ಅಭಿಮಾನಿಗಳಿಗೆ ಸಿಹಿ ವಿಚಾರವೇ ?

ಸಾರಾಂಶ

ತಂದೆಯ ಮಾತಿಗೂ ತಲೆಬಾಗದ ಸೌಂದರ್ಯ, ತನ್ನ ದಾಂಪತ್ಯ ಗೀತೆಯನ್ನು ಮುರಿದುಕೊಳ್ಳುತ್ತಿದ್ದಾರೆ. ಪತಿ, ಉದ್ಯಮಿ ಅಶ್ವಿನ್ ಅನಾರೋಗ್ಯಕ್ಕೆ ತುತ್ತಾಗಿ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ದೂರವಾಗುವುದಕ್ಕೆ ಕಾರಣಗಳು ಏನೇ ಇರಬಹುದು. ಆ ಕಾರಣಗಳು ಸರಿಯಾಗಿಯೂ ಇರಬಹುದು, ಇಲ್ಲದೆಯೂ ಇರಬಹುದು.

ಕೆಲವು ವಾರಗಳ ಹಿಂದಿನ ಮಾತು. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಕುಟುಂಬದ ದಾಂಪತ್ಯದಲ್ಲಿ ವಿರಸ ಬಂದಾಗಿನ ಕ್ಷಣಗಳು. ಮಾಧ್ಯಮಗಳಲ್ಲಿ ಅವರ ದಾಂಪತ್ಯ ಪ್ರಕರಣ ಸುದ್ದಿಯಾಗುತ್ತಿದ್ದರೆ ಚಿತ್ರರಂಗದ ಹಿರಿ- ಕಿರಿಯರು ಆ ದಂಪತಿಯನ್ನು ಬೇರೆಯಾಗದಂತೆ ಸೇರಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಅವರ ನಡುವೆ ಹೊತ್ತಿಕೊಂಡ ಸಂಸಾರದ ಕಿಚ್ಚು ಯಾವ ಕಾರಣಕ್ಕೂ ಉರಿಯುವುದಕ್ಕೆ ಬಿಡಬಾರದೆಂಬುದು ಬಹುತೇಕರ ಬಯಕೆ. ಕೊನೆಗೂ ಎಲ್ಲರೂ ಸೇರಿ ಆ ಜೋಡಿಗಳನ್ನು ಒಂದು ಮಾಡಿಯೇಬಿಟ್ಟರು. ಸ್ಯಾಂಡಲ್‌ವುಡ್‌ನ ಸಂಸಾರದ ಸಮರ ಈಗ ನೆನಪಾಗಿದ್ದು ಪಕ್ಕದ ತಮಿಳು ಚಿತ್ರಸೀಮೆಯಲ್ಲಾಗುತ್ತಿರುವ ಬೆಳವಣಿಗೆ ಕಂಡಾಗ. ಕಳೆದ ಎರಡ್ಮೂರು ದಿನಗಳಿಂದ ತಮಿಳು ಚಿತ್ರರಂಗದಲ್ಲಿ ಒಂದೇಸಮನೆ ಸದ್ದು ಮಾಡುತ್ತಿದೆ ತಲೈವಾ ಕುಟುಂಬದ ಕುಡಿಯ ಸಂಸಾರದ ವಿರಸಗೀತೆ. ಈ ಗೀತೆಯ ನಾಯಕಿ ಸೌಂದರ್ಯ ರಜನಿಕಾಂತ್. ನಾಯಕ ಸೌಂದರ್ಯ ಪತಿ ಉದ್ಯಮಿ ಅಶ್ವಿನ್.

ಸೌಂದರ್ಯ ತಮ್ಮದೇ ಆದ ಎಡಿಟಿಂಗ್ ಸ್ಟುಡಿಯೋ ಹೊಂದಿದ್ದಾರೆ. ‘ಕೊಚ್ಚಾಡಿಯನ್’ ಮೂಲಕ ನಿರ್ದೇಶಕಿಯೂ ಆಗಿಬಿಟ್ಟರು. ‘ಕಬಾಲಿ’ ಮಾಡುವ ಹೊತ್ತಿಗೆ ಸಂಸಾರ ಬಿಟ್ಟು ಅಪ್ಪನ ಜತೆಗೇ ನಿಂತುಬಿಟ್ಟರು. ಈಗ ತಂದೆ ರಂಜನಿಕಾಂತ್ ಅವರ ಜೀವನಕತೆಯನ್ನು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಇಂಥ ಸೌಂದರ್ಯ ಅವರಿಗೆ ಮದುವೆಯಾಗಿ ಕೆಲವೇ ವರ್ಷಗಳಾಗಿವೆ. ಇವರ ಮದುವೆಗೆ ಸಾಕ್ಷಿಯಾಗಿ ಒಂದು ಮಗು ಕೂಡ ಇದೆ. ಆದರೂ ಸೌಂದರ್ಯ ರಜನಿಕಾಂತ್ ಈಗ ವಿಚ್ಛೇದನ ಬಯಸಿದ್ದಾರೆ. ತಂದೆಯ ಮಾತಿಗೂ ತಲೆಬಾಗದ ಸೌಂದರ್ಯ, ತನ್ನ ದಾಂಪತ್ಯ ಗೀತೆಯನ್ನು ಮುರಿದುಕೊಳ್ಳುತ್ತಿದ್ದಾರೆ. ಪತಿ, ಉದ್ಯಮಿ ಅಶ್ವಿನ್ ಅನಾರೋಗ್ಯಕ್ಕೆ ತುತ್ತಾಗಿ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ದೂರವಾಗುವುದಕ್ಕೆ ಕಾರಣಗಳು ಏನೇ ಇರಬಹುದು. ಆ ಕಾರಣಗಳು ಸರಿಯಾಗಿಯೂ ಇರಬಹುದು, ಇಲ್ಲದೆಯೂ ಇರಬಹುದು. ಆದರೆ, ಸಿನಿಮಾ ಕುಟುಂಬದಲ್ಲಿ ನಡೆದ ಈ ಬೆಳವಣಿಗೆ ಬಗ್ಗೆ ಅಲ್ಲಿನ ಚಿತ್ರೋದ್ಯಮದವರು ಹೇಗೆ ಪ್ರತಿಕ್ರಿಯಿಸಬೇಕಿತ್ತು? ಅವರ ಜವಾಬ್ದಾರಿ ಏನಾಗಬೇಕಿತ್ತು? ಎಂಬುದು ಈ ಹೊತ್ತಿನ ಪ್ರಶ್ನೆ. ‘ಹೌದು, ನನ್ನ ಮದುವೆ ವಿಚಾರದಲ್ಲಿ ಕೇಳಿಬರುತ್ತಿರುವ ಸುದ್ದಿ ನಿಜ. ಕಳೆದ ಒಂದು ವರ್ಷದಿಂದ ನಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ಸದ್ಯದಲ್ಲೇ ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯುತ್ತೇನೆ’ ಎಂದು ಸೌಂದರ್ಯ ಅವರೇ ಟ್ವೀಟ್ ಮಾಡಿದಾಕ್ಷಣ ಆಕೆಯನ್ನು ಒಪ್ಪಿಸಿ ಸಂಸಾರವನ್ನು ಸರಿ ಮಾಡಬೇಕಾದ ಚಿತ್ರೋದ್ಯಮದವರೇ ಅವರ ನಿರ್ಧಾರಕ್ಕೆ ಜೈ ಎಂದಿದ್ದಾರೆ.

ಅಧಿಕೃತವಾಗಿ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಟ್ವೀಟಿಸಿದ ಕೂಡಲೇ ಅದೇ ಟ್ವೀಟ್‌ಗೆ ಕೆಲವರು ‘ಒಳ್ಳೆಯ ನಿರ್ಧಾರ’ ಎಂದರೆ, ಮತ್ತೊಂದಿಷ್ಟು ಮಂದಿ ‘ಕಂಗ್ರ್ಯಾಜುಲೇಷನ್’ ಎಂದು ಶುಭ ಕೋರಿದ್ದಾರೆ. ಇನ್ನೂ ಕೆಲವರು ‘ಪ್ರೌಡ್ ಡಿಸಿಷನ್’, ‘ನಿನ್ನ ಮುಂದಿನ ಭವಿಷ್ಯ ಒಳ್ಳೆಯದಾಗಲಿ’ ಎನ್ನುತ್ತ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಹೀಗೆ ಪ್ರತಿಕ್ರಿಯೆ ಮಾಡಿರುವುದು ಯಾರೋ ಅಭಿಮಾನಿಗಳಲ್ಲ, ಚಿತ್ರರಂಗದ ಮಹಾನ್ ಗಣ್ಯರೇ! ಹಿರಿಯ ನಟಿ ರಾಧಿಕಾ ಶರತ್‌ಕುಮಾರ್, ಪೋಷಕ ನಟ ಮನೋಬಲ, ನಟ ಸೂರ್ಯ ಒಡೆತನದ ಗ್ರೀನ್ ಸ್ಟುಡಿಯೋ, ಮಾಡೆಲ್ ಕಂ ಕಾಸ್ಟ್ಯೂಮರ್ ಶ್ರೇಯಾ ರೆಡ್ಡಿ, ಎನ್‌ಡಿಟಿವಿಯ ಪೂಜಾ ತಲ್ವಾರ್ ಸೇರಿದಂತೆ ಹಲವರು ಸೌಂದರ್ಯ ಅವರ ಡೈವೋರ್ಸ್‌ಗೆ ಜೈ ಎಂದಿದ್ದಾರೆ. ಎಲ್ಲದಕ್ಕಿಂತ ಅಚ್ಚರಿ ವಿಷಯ ಅಂದರೆ ಸೌಂದರ್ಯ ಅವರ ಸೋದರಿಯನ್ನು ವಿವಾಹವಾಗಿರುವ ನಟ ಧನುಷ್ ಕೂಡ ‘ಹ್ಯಾಪಿ ಫಾರ್ ಯು ಆಂಡ್ ಪ್ರೌಡ್’ ಎಂದು ಟ್ವೀಟಿಸಿದ್ದಾರೆ. ಅಲ್ಲ, ಒಂದು ಸಂಸಾರದಲ್ಲಿ ಬಿರುಕು ಮೂಡಿ ದಂಪತಿ ಬೇರೆಯಾಗುತ್ತಿದೆ ಎಂದರೆ ಈ ಮಟ್ಟಿಗೆ ಅವರು ಬೆಂಬಲಿಸುತ್ತಿರುವುದೇ ಒಂದು ತಮಾಷೆಯಾಗಿ ಕಾಣಿಸುತ್ತಿದೆ. ‘ಆದಷ್ಟು ಬೇಗ ದೂರವಾಗಿ. ಡೈವೋರ್ಸ್ ತೆಗೆದುಕೊಳ್ಳಿ, ಶುಭಾಷಯಗಳು’ ಎಂದು ವಿಶ್ ಮಾಡುವಷ್ಟರ ಮಟ್ಟಕ್ಕೆ ತಮಿಳು ಸಿನಿಮಾ ಮಂದಿ ಇಳಿದಿದ್ದಾರಲ್ಲ ಎಂಬ ಮುಜುಗರವೂ ಹುಟ್ಟುತ್ತದೆ.

ಒಂದು ಸಂಸಾರದ ವಿರಸಕ್ಕೆ ಯಾರು ಕಾರಣ, ಯಾರದ್ದು ತಪ್ಪು- ಸರಿ ಎಂಬುದು ಬೇರೆ ಮಾತು. ಆದರೆ, ಇಬ್ಬರಿಗೂ ಬುದ್ಧಿ ಹೇಳಿ ಒಂದು ಮಾಡಬೇಕಾದ ಕರ್ತವ್ಯ ಯಾರದ್ದು? ಸೌಂದರ್ಯರ ನಿರ್ಧಾರಕ್ಕೆ ಜೈ ಎನ್ನುತ್ತಿದ್ದವರದ್ದಲ್ಲವೇ? ಹೀಗೆ ಡೈವೋರ್ಸ್‌ನಲ್ಲಿ ಸೌಂದರ್ಯಳ ಮೇಲಿನ ಅಭಿಮಾನವನ್ನೇ ಅರಾಧಿಸುತ್ತ ಆಕೆಯ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿರುವ ಸಿನಿಮಾದವರನ್ನು ನೋಡಿದಾಗ ನಮ್ಮೂರಿನ ಹಿರಿಯರಾದ ರವಿಚಂದ್ರನ್, ಅಂಬರೀಶ್, ರಾಕ್‌ಲೈನ್ ವೆಂಕಟೇಶ್, ಜಯಮಾಲರಂಥ ಕಲಾವಿದರ ಒಳ್ಳೆಯ ಮನಸ್ಸು ವಜ್ರಕ್ಕಿಂತ ಪ್ರಜ್ವಲವಾಗಿ ಹೊಳೆಯುವಂತೆ ಭಾಸವಾಗುತ್ತಿದೆ.

ಸದ್ಯ ಕಾಲಿವುಡ್‌ನ ಹಾಟ್ ಟಾಪಿಕ್ ನ್ಯೂಸ್ ಎಂದರೆ ಸೌಂದರ್ಯ ರಜನಿಕಾಂತ್‌ರ ಸಂಸಾರದ ವಿರಹ ಗೀತೆ. ತಮ್ಮ ಪತಿಯಿಂದ ಸೌಂದರ್ಯ ದೂರವಾಗುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ, ಗಂಡ-ಹೆಂಡತಿ ದೂರವಾಗುತ್ತಿರುವುದನ್ನು ಅಲ್ಲಿನ ಸಿನಿ ಆರಾಧಕರು ಬೆಂಬಲಿಸುತ್ತಿದ್ದಾರಂತೆ. ಈ ನಡುವೆ ಬೇರೊಂದು ವಿಷಯಕ್ಕೆ ಚಿತ್ರೋದ್ಯಮದ ಕೆಲವರು ವಿಶ್ ಮಾಡಿರುವುದೂ ಕೂಡ ಡೈವೋರ್ಸ್ ನಡುವೆ ಸೌಂದರ್ಯ ಆರಾಧನೆಯಂದೇ ಭಾವಿಸಿದ್ದಾರೆ ಅಲ್ಲಿನ ಸಿನಿ ಪ್ರಿಯರು!

ಕೆಲವು ವಾರಗಳ ಹಿಂದಿನ ಮಾತು. ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಕುಟುಂಬದ ದಾಂಪತ್ಯದಲ್ಲಿ ವಿರಸ ಬಂದಾಗಿನ ಕ್ಷಣಗಳು. ಮಾಧ್ಯಮಗಳಲ್ಲಿ ಅವರ ದಾಂಪತ್ಯ ಪ್ರಕರಣ ಸುದ್ದಿಯಾಗುತ್ತಿದ್ದರೆ ಚಿತ್ರರಂಗದ ಹಿರಿ- ಕಿರಿಯರು ಆ ದಂಪತಿಯನ್ನು ಬೇರೆಯಾಗದಂತೆ ಸೇರಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಅವರ ನಡುವೆ ಹೊತ್ತಿಕೊಂಡ ಸಂಸಾರದ ಕಿಚ್ಚು ಯಾವ ಕಾರಣಕ್ಕೂ ಉರಿಯುವುದಕ್ಕೆ ಬಿಡಬಾರದೆಂಬುದು ಬಹುತೇಕರ ಬಯಕೆ. ಕೊನೆಗೂ ಎಲ್ಲರೂ ಸೇರಿ ಆ ಜೋಡಿಗಳನ್ನು ಒಂದು ಮಾಡಿಯೇಬಿಟ್ಟರು. ಸ್ಯಾಂಡಲ್‌ವುಡ್‌ನ ಸಂಸಾರದ ಸಮರ ಈಗ ನೆನಪಾಗಿದ್ದು ಪಕ್ಕದ ತಮಿಳು ಚಿತ್ರಸೀಮೆಯಲ್ಲಾಗುತ್ತಿರುವ ಬೆಳವಣಿಗೆ ಕಂಡಾಗ. ಕಳೆದ ಎರಡ್ಮೂರು ದಿನಗಳಿಂದ ತಮಿಳು ಚಿತ್ರರಂಗದಲ್ಲಿ ಒಂದೇಸಮನೆ ಸದ್ದು ಮಾಡುತ್ತಿದೆ ತಲೈವಾ ಕುಟುಂಬದ ಕುಡಿಯ ಸಂಸಾರದ ವಿರಸಗೀತೆ. ಈ ಗೀತೆಯ ನಾಯಕಿ ಸೌಂದರ್ಯ ರಜನಿಕಾಂತ್. ನಾಯಕ ಸೌಂದರ್ಯ ಪತಿ ಉದ್ಯಮಿ ಅಶ್ವಿನ್.

ಸೌಂದರ್ಯ ತಮ್ಮದೇ ಆದ ಎಡಿಟಿಂಗ್ ಸ್ಟುಡಿಯೋ ಹೊಂದಿದ್ದಾರೆ. ‘ಕೊಚ್ಚಾಡಿಯನ್’ ಮೂಲಕ ನಿರ್ದೇಶಕಿಯೂ ಆಗಿಬಿಟ್ಟರು. ‘ಕಬಾಲಿ’ ಮಾಡುವ ಹೊತ್ತಿಗೆ ಸಂಸಾರ ಬಿಟ್ಟು ಅಪ್ಪನ ಜತೆಗೇ ನಿಂತುಬಿಟ್ಟರು. ಈಗ ತಂದೆ ರಂಜನಿಕಾಂತ್ ಅವರ ಜೀವನಕತೆಯನ್ನು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಇಂಥ ಸೌಂದರ್ಯ ಅವರಿಗೆ ಮದುವೆಯಾಗಿ ಕೆಲವೇ ವರ್ಷಗಳಾಗಿವೆ. ಇವರ ಮದುವೆಗೆ ಸಾಕ್ಷಿಯಾಗಿ ಒಂದು ಮಗು ಕೂಡ ಇದೆ. ಆದರೂ ಸೌಂದರ್ಯ ರಜನಿಕಾಂತ್ ಈಗ ವಿಚ್ಛೇದನ ಬಯಸಿದ್ದಾರೆ. ತಂದೆಯ ಮಾತಿಗೂ ತಲೆಬಾಗದ ಸೌಂದರ್ಯ, ತನ್ನ ದಾಂಪತ್ಯ ಗೀತೆಯನ್ನು ಮುರಿದುಕೊಳ್ಳುತ್ತಿದ್ದಾರೆ. ಪತಿ, ಉದ್ಯಮಿ ಅಶ್ವಿನ್ ಅನಾರೋಗ್ಯಕ್ಕೆ ತುತ್ತಾಗಿ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ದೂರವಾಗುವುದಕ್ಕೆ ಕಾರಣಗಳು ಏನೇ ಇರಬಹುದು. ಆ ಕಾರಣಗಳು ಸರಿಯಾಗಿಯೂ ಇರಬಹುದು, ಇಲ್ಲದೆಯೂ ಇರಬಹುದು. ಆದರೆ, ಸಿನಿಮಾ ಕುಟುಂಬದಲ್ಲಿ ನಡೆದ ಈ ಬೆಳವಣಿಗೆ ಬಗ್ಗೆ ಅಲ್ಲಿನ ಸಿನಿಮಾ ಪ್ರೇಮಿಗಳು, ಸೂಪರ್‌ಸ್ಟಾರ್ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸಬೇಕಿತ್ತು? ಅವರ ಜವಾಬ್ದಾರಿ ಏನಾಗಬೇಕಿತ್ತು? ಎಂಬುದು ಈ ಹೊತ್ತಿನ ಪ್ರಶ್ನೆ. ‘ಹೌದು, ನನ್ನ ಮದುವೆ ವಿಚಾರದಲ್ಲಿ ಕೇಳಿಬರುತ್ತಿರುವ ಸುದ್ದಿ ನಿಜ. ಕಳೆದ ಒಂದು ವರ್ಷದಿಂದ ನಾನು ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ. ಸದ್ಯದಲ್ಲೇ ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯುತ್ತೇನೆ’ ಎಂದು ಸೌಂದರ್ಯ ಅವರೇ ಟ್ವೀಟ್ ಮಾಡಿದಾಕ್ಷಣ ಆಕೆಯ ನಿರ್ಧಾರಕ್ಕೆ ಜೈ ಎಂದಿದ್ದಾರೆ.

ಅಧಿಕೃತವಾಗಿ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಟ್ವೀಟಿಸಿದ ಕೂಡಲೇ ಅದೇ ಟ್ವೀಟ್‌ಗೆ ‘ಒಳ್ಳೆಯ ನಿರ್ಧಾರ’ ಎನ್ನುತ್ತ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಎಲ್ಲದಕ್ಕಿಂತ ಅಚ್ಚರಿ ವಿಷಯ ಅಂದರೆ ಡೈವೋರ್ಸ್ ಸುದ್ದಿಯನ್ನು ಟ್ವೀಟ್ ಮಾಡಿದಾಗಲೇ ಬೇರೊಂದು ವಿಷಯಕ್ಕೆ ಚಿತ್ರೋದ್ಯಮದವರು ವಿಶ್ ಮಾಡಿದ್ದನ್ನೇ ಸೌಂದರ್ಯರ ಡೈವೋರ್ಸ್‌ಗೆ ಬೆಂಬಲಿಸಿದ್ದಾರೆಂದು ತಪ್ಪಾಗಿ ತಿಳಿದ ಪಡೆಯಪ್ಪನ ಅಭಿಮಾನಿ ಪಡೆ, ದೂರವಾಗುವುದೇ ಸರಿ ಎನ್ನುತ್ತಿದ್ದಾರಂತೆ. ಒಂದು ಸಂಸಾರದಲ್ಲಿ ಬಿರುಕು ಮೂಡಿ ದಂಪತಿ ಬೇರೆಯಾಗುತ್ತಿದೆ ಎಂದರೆ ಈ ಮಟ್ಟಿಗೆ ಅವರು ಬೆಂಬಲಿಸುತ್ತಿರುವುದೇ ಒಂದು ತಮಾಷೆಯಾಗಿ ಕಾಣಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ