ರುದ್ರಾಭಿಷೇಕ ಮಾಡಿಸಿದ ಮುಸ್ಲಿಂ ಸಚಿವ

Published : Jan 03, 2019, 08:08 AM IST
ರುದ್ರಾಭಿಷೇಕ ಮಾಡಿಸಿದ ಮುಸ್ಲಿಂ ಸಚಿವ

ಸಾರಾಂಶ

ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಮಾತಿದೆ. ಸಂಬಂಧ ಇದೆ ಸ್ವಾಮಿ! ರಾಜಸ್ಥಾನದ ಮುಸ್ಲಿಂ ಸಚಿವ ಶಿವನನ್ನು ಪೂಜೆ ಮಾಡಿದ್ದಾರೆ. ಇದು ಭಾರೀ ಸುದ್ದಿಯಾಗಿದೆ. 

ಜೈಪುರ (ಜ. 03): ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ರಾಜಸ್ಥಾನದ ಏಕ ಮೇವ ಮುಸ್ಲಿಂ ಸಚಿವ ಶಾಲೆ ಮಹಮ್ಮದ್‌ಗೂ ರುದ್ರಾಭಿಷೇಕಕ್ಕೂ ಏನು ಸಂಬಂಧ ಎಂದು ಯಾರಾದರೂ ಕೇಳಿದರೆ ಬರುವ ಉತ್ತರ ‘ಸಂಬಂಧ ಇದೆ’ ಎಂದು!

ಹೌದು. ಮೊಹಮ್ಮದ್ ಅವರು ಜೈಸಲ್ಮೇರ್ ಜಿಲ್ಲೆಯ ತಮ್ಮ ಕ್ಷೇತ್ರವಾದ ಪೋಖ್ರಣ್‌ನಲ್ಲಿ ಭಾನುವಾರ ‘ಬಾಬಾ ರಾಮ ದೇವ್ ಮಂದಿರ’ಕ್ಕೆ (ಯೋಗಗುರು ಬಾಬಾ ರಾಮ ದೇವ್ ಅಲ್ಲ) ಭೇಟಿ ನೀಡಿ ರುದ್ರಾಭಿಷೇಕ ನೆರವೇರಿಸಿದರು. ಇಲ್ಲಿನ ಶಿವಲಿಂಗಕ್ಕೆ ಬಾಬಾ ರಾಮದೇವ್ ಎನ್ನುತ್ತಾರೆ. ‘ನನಗೆ ಶಿವನ ಬಗ್ಗೆ ನಂಬಿಕೆ ಇದೆ’ ಅಂತಾರೆ ಮೊಹಮ್ಮದ್. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!
2026 ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ, ಈ ರಾಶಿಗೆ ಪ್ರತಿ ಹೆಜ್ಜೆಯಲ್ಲೂ ಅಡೆತಡೆ