ರಾಜಸ್ಥಾನ BJPಯಲ್ಲಿ ಮೇಜರ್ ಸರ್ಜರಿ : 15 ಮುಖಂಡರಿಗೆ ಗೇಟ್ ಪಾಸ್

By Web DeskFirst Published Jan 30, 2019, 11:49 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಮೇಜರ್ ಸರ್ಜರಿ ಮಾಡಲಾಗಿದೆ. ಒಟ್ಟು 15 ಮುಖಂಡರಿಗೆ ಬಿಜೆಪಿ ಗೇಟ್ ಪಾಸ್ ನೀಡಿದೆ. 

ಜೈಪುರ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಸ್ಥಾನ ಬಿಜೆಪಿ ಮುಖಂಡರು ಪಕ್ಷದಲ್ಲಿ ಮೇಜರ್ ಸರ್ಜರಿ ಮಾಡಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ರಾಜ್ಯದ 15 ಜಿಲ್ಲಾಧ್ಯಕ್ಷರನ್ನು ಬದಲಾಯಿಸಲಾಗಿದೆ. 

ಇಬ್ಬರು ಶಾಸಕರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.  41 ಜಿಲ್ಲೆಗಳ ಪೈಕಿ ಒಟ್ಟು 15 ಜಿಲ್ಲೆಗಳ ಅಧ್ಯಕ್ಷರು ಬದಲಾಗಿದ್ದಾರೆ. 

ಬದಲಾವಣೆ ವೇಳೆ ಹಲವು ರೀತಿಯ ಮಾನದಂಡಗಳನ್ನು ಅನುಸರಿಸಲಾಗಿದ್ದು, ಜಾತಿಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯುವುದನ್ನೇ ಪ್ರಮುಖ ಗುರಿಯಾಗಿಸಿಕೊಂಡು  ಬದಲಾವಣೆ ಮಾಡಲಾಗಿದೆ. 

ಜೈಪುರ ನಗರದ ಅಧ್ಯಕ್ಷ ಸ್ಥಾನ ನೀಡುವ ವೇಳೆ ವೈಶ್ಯ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಮಾಜಿ ಶಾಸಕ  ಗುಪ್ತಾ ಅವರನ್ನು ಕೆಳಕ್ಕೆ ಇಳಿಸಿ ಸಂಜಯ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 

ನಾಲ್ಕು ಪ್ರಮುಖ ಜಿಲ್ಲೆಗಳಾದ ಉದಯ್ ಪುರ, ಜೈಪುರ, ಬಿಕನೇರ್, ಜೋಧ್ ಪುರದಲ್ಲಿ  ಅಧ್ಯಕ್ಷರ ಆಯ್ಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಕಡಿಮೆ ಮತ ಪಡೆದ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. 

click me!