ಇನ್ನು ನಾಲ್ಕು ದಿನ ರಾಜ್ಯದಲ್ಲಿ ಗಾಳಿ ಸಹಿತ ಮಳೆ : ಎಚ್ಚರ

By Web DeskFirst Published Sep 18, 2018, 10:35 AM IST
Highlights

ಆಂಧ್ರ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.

ಬೆಂಗಳೂರು :  ಆಂಧ್ರ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಇನ್ನು ಮೂರ್ನಾಲ್ಕು ದಿನ ಗಾಳಿ ಸಹಿತ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. 

ಅಂಧ್ರಪ್ರದೇಶದ ಉಂಟಾಗಿರುವ ವಾಯುಭಾರ ಕುಸಿತದ ತೀವ್ರತೆಯ ಆಧಾರದ ಮೇಲೆ ಉತ್ತರ ಒಳನಾಡಿದ ಮಳೆ ತೀವ್ರತೆ ಅವಲಂಬಿಸಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Latest Videos

ಸೋಮವಾರ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು 90 ಮಿ.ಮೀ ಮಳೆಯಾಗಿದೆ, ಕೊಪ್ಪಳ 87, ಗದಗ 82.5, ಕಲಬುರಗಿ 76.5, ವಿಜಯಪುರ 73, ಬಾಗಲ  ಕೋಟೆ 54, ಬಳ್ಳಾರಿ 54.3, ರಾಯಚೂರು ಜಿಲ್ಲೆಯಲ್ಲಿ 43.5 ಮಿ.ಮೀ. ಸುರಿದಿದೆ.

click me!