ಮತ್ತೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

First Published May 23, 2018, 12:47 PM IST
Highlights

ಇತ್ತೀಚೆಗಷ್ಟೇ 90 ಸಾವಿರಕ್ಕೂ ಅತ್ಯಧಿಕ  ಹುದ್ದೆಗಳ ನೇಮಕಾತಿಗೆ ಆಹ್ವಾನಿಸಿದ್ದ ರೈಲ್ವೆ ಇಲಾಖೆ ಇದೀಗ ಮತ್ತೊಮ್ಮೆ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದೆ. 

ನವದೆಹಲಿ : ಇತ್ತೀಚೆಗಷ್ಟೇ 90 ಸಾವಿರಕ್ಕೂ ಅತ್ಯಧಿಕ ಹುದ್ದೆಗಳ ನೇಮಕಾತಿಗೆ ಆಹ್ವಾನಿಸಿದ್ದ ರೈಲ್ವೆ ಇಲಾಖೆ ಇದೀಗ ಮತ್ತೊಮ್ಮೆ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದೆ. 

ರೈಲ್ವೆ ಭದ್ರತಾ ಪಡೆಗೆ ಮತ್ತೆ ಇದೀಗ 9000 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. 1120 ಸಬ್ ಇನ್ಸ್ ಪೆಕ್ಟರ್ ಹಾಗೂ 8,619 ಕಾನ್ ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ  ಕಾನ್ಸ್ ಸ್ಟೇಬಲ್ ಹುದ್ದೆಗಳಲ್ಲಿ 4403 ಹುದ್ದೆಗಳಿಗೆ ಪುರುಷ ಹಾಗೂ 4216 ಹುದ್ಮದೆಗಳಿಗೆ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಲಿದೆ.

ಇನ್ಸ್ ಪೆಕ್ಟರ್ ಹುದ್ದೆಗಳಲ್ಲಿ 819 ಪುರುಷರು ಹಾಗೂ 301 ಮಹಿಳೆಯರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. 

 

Indian Railways releases more than 9,000 jobs for Constable & Sub Inspector posts in Railway Protection Force and Railway Protection Special Force, opening up new opportunities for youth. Get detailed information at https://t.co/ghSFBYVnrs pic.twitter.com/U7AWYFAXtT

— Piyush Goyal (@PiyushGoyal)
click me!