ರೈಲ್ವೇ ಇಲಾಖೆ ಸೇರ ಬಯಸುವವರಿಗೆ ಮಾಹಿತಿ; ಮಹತ್ವದ ಪರೀಕ್ಷೆ ಮುಂದೂಡಿಕೆ

By Web DeskFirst Published Nov 12, 2018, 9:47 PM IST
Highlights

ಡಿಸಂಬರ್ 12-14 ರವರೆಗೆ ನಡೆಯಬೇಕಿದ್ದ ರೈಲ್ವೇ ಇಲಾಖೆಯ 2 ನೇ ಹಂತದ ಸಿಬಿಟಿ ಪರೀಕ್ಷೆ ಮುಂದೂಡಲ್ಪಟ್ಟಿದ್ದು ಡಿ. 24 ರಂದು ನಡೆಯಲಿದೆ ಎಂದು ರೈಲ್ವೇ ನೇಮಕಾತಿ ಬೋರ್ಡ್ ತಿಳಿಸಿದೆ. 

ಬೆಂಗಳೂರು (ನ. 11): ಡಿಸಂಬರ್ 12-14 ರಂದು ನಡೆಯಬೇಕಿದ್ದ ರೈಲ್ವೇ ಇಲಾಖೆಯ 2 ನೇ ಹಂತದ ಸಿಬಿಟಿ ಪರೀಕ್ಷೆ ಮುಂದೂಡಲ್ಪಟ್ಟಿದ್ದು ಡಿ. 24 ರಂದು ನಡೆಯಲಿದೆ ಎಂದು ರೈಲ್ವೇ ನೇಮಕಾತಿ ಬೋರ್ಡ್ ತಿಳಿಸಿದೆ. 

ಮೊದಲ ಹಂತದ ಸಿಬಿಟಿ ಪರೀಕ್ಷಾ ಫಲಿತಾಂಶವನ್ನು ನವೆಂಬರ್ 2 ರಂದು ಪ್ರಕಟಿಸಲಾಗಿದೆ.  ಫಲಿತಾಂಶದ ಜೊತೆಗೆ ಪ್ರಶ್ನೆ ಪತ್ರಿಕೆ ಹಾಗೂ ಕೀ ಆ್ಯನ್ಸರ್ ಪೇಪರನ್ನು ಬಿಟ್ಟಿತ್ತು. ಆದರೆ ಇದಕ್ಕೂ, ಅಂತಿಮ ಉತ್ತರ ಪತ್ರಿಕೆಗೂ ವ್ಯತ್ಯಾಸ ಕಂಡು ಬಂದಿದ್ದರಿಂದ ಸಾಕಷ್ಟು ಅಭ್ಯರ್ಥಿಗಳನ್ನು ಆಕ್ಷೇಪಿಸಿದ್ದರು.  ಅಭ್ಯರ್ಥಿಗಳ ಆಕ್ಷೇಪ ಪರಿಗಣಿಸಿದ ರೈಲ್ವೇ ಇಲಾಖೆ ಉತ್ತರ ಪತ್ರಿಕೆಯಲ್ಲಿ ದೋಷವಿದ್ದಿರುವುದನ್ನು ಗಮನಿಸಿ ಈಗಾಗಲೇ ಪ್ರಕಟಿಸಿದ ಫಲಿತಾಂಶವನ್ನು ರದ್ದುಗೊಳಿಸಿದೆ. ಸದ್ಯದಲ್ಲೆ ಪರಿಷ್ಕೃತ ಫಲಿತಾಂಶವನ್ನು  ಆನ್ ಲೈನ್ ನಲ್ಲಿ ಪ್ರಕಟಿಸುವುದಾಗಿ ಹೇಳಿದೆ. 

ಮೊದಲ ಹಂತದ ಸಿಬಿಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ 2 ನೇ ಹಂತದ ಸಿಬಿಟಿಯನ್ನು ಬರೆಯಬಹುದಾಗಿದೆ. ಪರೀಕ್ಷಾ ದಿನದ ನಾಲ್ಕು ದಿನದ ಮುಂಚಿತವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಡ್ಮಿಟ್ ಕಾರ್ಡ್ ಕೊಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. 

click me!