24ರಿಂದ ಉತ್ತರ ಕರ್ನಾಟಕದಲ್ಲಿ 4 ದಿನ ರಾಹುಲ್‌ ಪ್ರವಾಸ

By Suvarna Web DeskFirst Published Feb 22, 2018, 7:08 AM IST
Highlights

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ 2ನೇ ಹಂತದ ರಾಜ್ಯ ಪ್ರವಾಸದ ರೂಪರೇಷೆಗಳನ್ನು ಕೆಪಿಸಿಸಿ ಅಂತಿಮಗೊಳಿಸಿದೆ. ಫೆ.24ರಿಂದ 26ರವರೆಗೆ ರಾಹುಲ್‌ ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ 2ನೇ ಹಂತದ ರಾಜ್ಯ ಪ್ರವಾಸದ ರೂಪರೇಷೆಗಳನ್ನು ಕೆಪಿಸಿಸಿ ಅಂತಿಮಗೊಳಿಸಿದೆ. ಫೆ.24ರಿಂದ 26ರವರೆಗೆ ರಾಹುಲ್‌ ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಪ್ರವಾಸ ನಡೆಸಲಿರುವ ರಾಹುಲ್‌ ಗಾಂಧಿ ಅವರು, ವಿವಿಧೆಡೆ ಆಯೋಜಿಸಿರುವ ಸಾರ್ವಜನಿಕ ಸಭೆ, ಸ್ತ್ರೀ ಶಕ್ತಿ ಸಮಾವೇಶ, ಪಕ್ಷದ ಆಯಾ ಜಿಲ್ಲಾ ಮುಖಂಡರ ಸಭೆಗಳಲ್ಲಿ ಪಾಲ್ಗೊಂಡು ಸಂವಾದ ನಡೆಸಲಿದ್ದಾರೆ.

ರಾಹುಲ್‌ ಕಾರ್ಯಕ್ರಮ ವಿವರ:

ಫೆ.24ಕ್ಕೆ ಬೆಳಗಾವಿ, ವಿಜಯಪುರ ಜಿಲ್ಲಾ ಪ್ರವಾಸ- ಬೆಳಗ್ಗೆ 11.30ಕ್ಕೆ 1.30ಕ್ಕೆ ದೆಹಲಿಯಿಂದ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮನ. ಮಧ್ಯಾಹ್ನ 12.30ಕ್ಕೆ ಹೆಲಿಕಾಪ್ಟರ್‌ ಮೂಲಕ ಅಥಣಿಗೆ ಆಗಮಿಸಿ, ಕರಿಮಸೂತಿಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ. ಮಧ್ಯಾಹ್ನ 2.30ಕ್ಕೆ ವಿಜಯಪುರ ಜಿಲ್ಲೆಯ ಟಿಕೋಟಾದಲ್ಲಿ ಸ್ತ್ರೀ ಶಕ್ತಿ ಸಮಾವೇಶದಲ್ಲಿ ಭಾಗಿ.

ಫೆ.25ಕ್ಕೆ ವಿಜಯಪುರ, ಬಾಗಲಕೋಟೆ ಜಿಲ್ಲಾ ಪ್ರವಾಸ:

ಫೆ.25ರ ಬೆಳಗ್ಗೆ 7.30ಕ್ಕೆ ವಿಜಯಪುರದಲ್ಲಿ ‘ವೃಕ್ಷಥಾನ್‌ 2018’ ಮ್ಯಾರಥಾನ್‌ಗೆ ಚಾಲನೆ. ಬೆಳಗ್ಗೆ 10 ಗಂಟೆಗೆ ಜಮಖಂಡಿಯ ಚಿಕ್ಕಪಡಸಲಗಿ ಜಲಾಶಯ ಭರ್ತಿ ಸಂಭ್ರಮಾಚರಣೆಯಲ್ಲಿ ಭಾಗಿ. ಮಧ್ಯಾಹ್ನ 12ಕ್ಕೆ ವಿಜಯಪುರದ ಮುಲವಾಡದಲ್ಲಿ ಕಾರ್ಯಕರ್ತರ ಸಭೆ. ಮಧ್ಯಾಹ್ನ 2.15ಕ್ಕೆ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಕಾರ್ಯಕರ್ತರ ಸಭೆ. ಬಳಿಕ ಮುಧೋಳದಲ್ಲಿ ಸಂಜೆ. 4.30ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗಿ.

ಫೆ.26ಕ್ಕೆ ಬಾಗಲಕೋಟೆ, ಬೆಳಗಾವಿ, ಧಾರವಾಡ ಪ್ರವಾಸ:

ಮೂರನೇ ದಿನದ ಪ್ರವಾಸದಲ್ಲಿ ಬೆಳಗ್ಗೆ 9.20ಕ್ಕೆ ಬಾಗಲಕೋಟೆಯಲ್ಲಿ ಬಾಗಲಕೋಟೆ ಮತ್ತು ಬೆಳಗಾವಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸಲಿದ್ದಾರೆ. 10.20ಕ್ಕೆ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಹಿರಿಯ ನಾಯಕರ ಸಭೆ. ಮಧ್ಯಾಹ್ನ 12.45ಕ್ಕೆ ಸವದತ್ತಿಯಲ್ಲಿ ಕಾರ್ಯಕರ್ತರ ಸಭೆ, ಮಧ್ಯಾಹ್ನ 3.30ಕ್ಕೆ ಧಾರವಾಡದಲ್ಲಿ ಕಾರ್ಯಕರ್ತರ ಸ್ವಾಗತ ಸಮಾರಂಭಗಳಲ್ಲಿ ಭಾಗಿ. ರಾತ್ರಿ 9.15ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ.

click me!