
ಸ್ಯಾಂಡಲ್‌ವುಡ್ ನಟಿಯಾಗಿ, ಮಂಡ್ಯ ಎಂಪಿಯಾಗಿ, ಇದೀಗ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಹೊಣೆ ಹೊತ್ತ ರಮ್ಯಾಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ.
36ನೇ ವಸಂತಕ್ಕೆ ಕಾಲಿಟ್ಟ ರಮ್ಯಾಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಶುಭ ಕೋರಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸಾಮಾಜಿಕ ಜಾಲತಾಣ ಸೆನ್ಸೇಷನ್ ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ಟ್ವಿಟ್ ಮಾಡಿರುವ ರಾಹುಲ್, ರಮ್ಯಾ ಕಾಂಗ್ರೆಸ್‌ನ ಆಸ್ತಿ ಅಂತ ಬಣ್ಣಿಸಿದ್ದಾರೆ. ನೆಚ್ಚಿನ ನಟಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಬರುತ್ತಿದ್ದು, ಟ್ವೀಟರ್‌ನಲ್ಲಿ #HappyBirthdayRamya ಟ್ರೆಂಡಿಂಗ್ ಆಗುತ್ತಿದೆ.
ಬಹುತೇಕ ಅಭಿಮಾನಿಗಳು 'ರಮ್ಯಾ ಭೂಮಿ ಮೇಲಿರುವ ಅತ್ಯಂತ ವಿಶಿಷ್ಟ ವ್ಯಕ್ತಿ' ಎಂದೇ ಬಣ್ಣಿಸಿದ್ದು, ನಟಿಯ ಫೋಟೋ ಹಾಕಿ ಶುಭ ಹಾರೈಸಿದ್ದಾರೆ. ದಿವ್ಯಾ ಸ್ಪಂದನಾ ಎಂಬ ಅಕೌಂಟ್‌ನಲ್ಲಿ ಆಕೆಯ ಬಾಲ್ಯದ ಅನೇಕ ಫೋಟೋಗಳನ್ನು ಹಾಕಿ ವಿಶ್ ಮಾಡಿದ್ದಾರೆ. ನಟಿಯಾಗಿ ಹೆಸರು ಮಾಡಿರುವ ರಮ್ಯಾ, ರಾಜಕೀಯ ಪ್ರವೇಶಿಸಿದ ನಂತರ ವಿಭಿನ್ನ ಜವಾಬ್ದಾರಿಗಳ ಮೂಲಕ ಹೆಸರು ಮಾಡುತ್ತಿದ್ದಾರೆ. ಕಾಂಗ್ರೆಸ್, ಸಾಮಾಜಿಕ ಜಾಲತಾಣ ಉಸ್ತುವಾರಿ ಹೊತ್ತಿರೋ ರಮ್ಯಾ, ಮೋದಿ ಹಾಗೂ ಬಿಜೆಪಿ ಸರಕಾರದ ವಿರುದ್ಧ ಮಾತನಾಡುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.