ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನೇ ಸಿಎಂ ಆಗ್ತಾರಾ?

By Suvarna Web DeskFirst Published Apr 8, 2018, 12:27 PM IST
Highlights

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ  ಬಂದರೆ ಸಿದ್ದರಾಮಯ್ಯ ಅವರೇ ಸಿಎಂ ಎಂದು  ಮಾಧ್ಯಮದವರ ಜೊತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ಮಾಡುವ ವೇಳೆ ಹೇಳಿದ್ದಾರೆ.  

ಬೆಂಗಳೂರು (ಏ. 08): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ  ಬಂದರೆ ಸಿದ್ದರಾಮಯ್ಯ ಅವರೇ ಸಿಎಂ ಎಂದು  ಮಾಧ್ಯಮದವರ ಜೊತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ಮಾಡುವ ವೇಳೆ ಹೇಳಿದ್ದಾರೆ.  

ಜನರ ಭಾವನೆ ಅರ್ಥಮಾಡಿಕೊಳ್ಳುವರು, ಜನರ ಜೊತೆ ಬೆರೆಯುವವರೇ ಸಿಎಂ. ಸೈದ್ಧಾಂತಿಕವಾಗಿ ಒಗ್ಗಟ್ಟು ಮೂಡಿದ್ರೆ ಮಾತ್ರ ಕೇಡರ್ ಮಟ್ಟದಲ್ಲಿ ಪಕ್ಷ ಗಟ್ಟಿಯಾಗುತ್ತದೆ ಎನ್ನುವ ಮೂಲಕ  ಸಿದ್ದರಾಮಯ್ಯನವರೇ ಸಿಎಂ ಅಭ್ಯರ್ಥಿ ಎಂಬ ಸುಳಿವು ನೀಡಿದ್ದಾರೆ. 

ಕಷ್ಟಪಟ್ಟು ಕೆಲಸ ಮಾಡುವವರಿಗೆ  ಈ ದೇಶದಲ್ಲಿ  ಏನು ಸಿಗುತ್ತಿಲ್ಲ.  ಆರಾಮಗಿ ಇರುವವರಿಗೆ ಎಲ್ಲಾ ಸಿಗುತ್ತಿದೆ.  ಅದನ್ನ ಕಾಂಗ್ರೆಸ್ ಸರ್ಕಾರ ಬದಲಾಯಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಇಂದಿರಾ ಕ್ಯಾಂಟೀನ್ ನಿಂದ ನಿಮಗೆ ಅನುಕೂಲ ಆಗಿದ್ಯಾ?   ಅಲ್ಲಿ ಊಟ ಮಾಡ್ತೀರಾ ಎಂದು ಪೌರ ಕಾರ್ಮಿಕರನ್ನು ಪ್ರಶ್ನಿಸಿದ್ದಾರೆ.  ಹೌದು, ತುಂಬಾ ಅನುಕೂಲವಾಗಿದೆ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ.  ಸರ್ಕಾರ ಪೌರಕಾರ್ಮಿಕರ ಗುತ್ತಿಗೆ ರದ್ದು ಮಾಡಿದ ಹಿನ್ನಲೆಯಲ್ಲಿ ಮಾತನಾಡುತ್ತಾ,  ನಾವು ದೆಹಲಿಯಲ್ಲಿ ಅಧಿಕಾರಕ್ಕೆ ಬರುತ್ತೇವೆ.  ನಾವು ನಿಮಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ.  ಕಷ್ಟಪಡುವವರಿಗೆ  ಇಲ್ಲಿ ಏನು ಸಿಕ್ತಿಲ್ಲ, ಕಷ್ಟ ಪಡದೇ ಇರುವವರಗೆ ಎಲ್ಲವೂ ಸಿಕ್ತಿದೆ.  ಇದು ಭಾರತದ ಸಮಸ್ಯೆ.  ಈ ಸಮಸ್ಯೆಗಳನ್ನ ಬಗೆಹರಿಸಲು  ಕಾಂಗ್ರೆಸ್ ಪಕ್ಷ ಇದೆ.  ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಎಲ್ಲ ಕಡೆ ಗುತ್ತಿಗೆ ನಿಯಮವನ್ನ ರದ್ದು ಮಾಡುತ್ತೇವೆ ಎಂದಿದ್ದಾರೆ. 
 

click me!