
ನವದೆಹಲಿ : ಎಐಸಿಸಿ ಸಭೆಯ ಆರಂಭದಲ್ಲಿಯೇ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ ಅವರು ದೇಶವನ್ನು ಬಿಜೆಪಿ ವಿಭಜನೆ ಮಾಡುತ್ತಿದೆ ಎಂದು ಹೇಳಿದರು.
ಅಲ್ಲದೇ ಬಿಜೆಪಿಯಿಂದ ದೇಶದ ಏಕತೆಯನ್ನು ಒಡೆಯುವ ರಾಜಕಾರಣ ನಡೆಯುತ್ತಿದೆ. ದೇಶದಲ್ಲಿ ಸದ್ಯ ನಿರುದ್ಯೋಗ, ರೈತರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದು ಅವರು ಹೇಳಿದರು. ದೇಶವನ್ನು ಮುನ್ನೆಲೆಗೆ ತರುವಲ್ಲಿ ಕಾಂಗ್ರೆಸ್ ಪಕ್ಷವೊಂದರಿಂದಲೇ ಸಾಧ್ಯ ಎಂದು ಈ ವೇಳೆ ಹೇಳಿದರು. ಅಲ್ಲದೇ ದೇಶದಲ್ಲಿ ಜಾತಿ ಮತಗಳನ್ನು ವಿಭಜಿಸದೇ ಆಡಳಿತ ನಡೆಸುವುದೂ ಕೂಡ ಕಾಂಗ್ರೆಸ್ ಪಕ್ಷವೊಂದೇ ಎಂದು ಈ ವೇಳೆ ಹೇಳಿದರು.
ಜನರ ಬಗ್ಗೆ ಬಿಜೆಪಿ ಸಿಟ್ಟು ಪ್ರದರ್ಶನ ಮಾಡಿದರೆ, ನಾವು ಪ್ರೀತಿಯನ್ನು ಹಂಚಿಕೆ ಮಾಡುತ್ತೇವೆ. ಇದೇ ಬಿಜೆಪಿಗೂ ನಮಗೂ ಇರುವ ವ್ಯತ್ಯಾಸವಾಗಿದೆ ಎಂದು ಈ ವೇಳೆ ರಾಹುಲ್ ಗಾಂಧಿ ಹೇಳಿದರು. ದೇಶವನ್ನು ಮನ್ನಡೆಗೆ ತರುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೇ ಮಾತ್ರವೇ ಇದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.