ಆರ್'ಎಸ್'ಎಸ್ ಶಾಖೆಯಲ್ಲಿ ಚಡ್ಡಿ ಹಾಕಿರುವ ಹುಡುಗಿಯರಿಲ್ಲ..! ವಿವಾದದ ಕಿಡಿ ಹೊತ್ತಿಸಿದ ರಾಹುಲ್ ಹೇಳಿಕೆ..!

By Suvarna Web DeskFirst Published Oct 11, 2017, 9:59 PM IST
Highlights

ಗುಜರಾತ್ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿರುವ ರಾಹುಲ್​ ಗಾಂಧಿ ಆರ್​ಎಸ್​ಎಸ್​ ಅನ್ನು ಟೀಕಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಆರ್​ಎಸ್​ಎಸ್​ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ ಎಂದು ಹೇಳಲು ಹೋಗಿ ಆರ್​ಎಸ್​ಎಸ್​ ನಲ್ಲಿ ಚೆಡ್ಡಿ ಹಾಕಿರುವ ಹುಡುಗಿಯರನ್ನು ನಾನು ನೋಡೇ ಇಲ್ಲ, ನೀವು ನೋಡಿದ್ದಿರಾ ಎಂದು ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದ್ದರು. ಇಷ್ಟೇ ಸಾಕಾಯ್ತು ರಾಹುಲ್ ವಿರುದ್ಧ ಟೀಕೆಗಳ ಸುರಿಮಳೆಯೇ ಬಂದವು.

ಬೆಂಗಳೂರು (ಅ.11): ಗುಜರಾತ್ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿರುವ ರಾಹುಲ್​ ಗಾಂಧಿ ಆರ್​ಎಸ್​ಎಸ್​ ಅನ್ನು ಟೀಕಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಆರ್​ಎಸ್​ಎಸ್​ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ ಎಂದು ಹೇಳಲು ಹೋಗಿ ಆರ್​ಎಸ್​ಎಸ್​ ನಲ್ಲಿ ಚೆಡ್ಡಿ ಹಾಕಿರುವ ಹುಡುಗಿಯರನ್ನು ನಾನು ನೋಡೇ ಇಲ್ಲ, ನೀವು ನೋಡಿದ್ದಿರಾ ಎಂದು ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದ್ದರು. ಇಷ್ಟೇ ಸಾಕಾಯ್ತು ರಾಹುಲ್ ವಿರುದ್ಧ ಟೀಕೆಗಳ ಸುರಿಮಳೆಯೇ ಬಂದವು.

ಗುಜರಾತ್​ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ ನಿನ್ನೆ ಆರ್​ಎಸ್​ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪ್ರತಿ ಹಂತದಲ್ಲೂ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದೆ. ಕಾಂಗ್ರೆಸ್ ಪ್ರತಿ ಘಟಕದಲ್ಲೂ ಮಹಿಳೆಯರಿದ್ದಾರೆ ಆದರೆ ಆರ್’ಎಸ್’ಎಸ್ ಹಾಗೂ ಬಿಜೆಪಿ ಮಹಿಳೆಯರಿಗೆ ಅವಕಾಶವನ್ನೇ ನೀಡಿಲ್ಲ ಎಂದು ಟೀಕಿಸಿದ್ದಾರೆ. ಇದೇ ವೇಳೆ ವ್ಯಂಗವಾಗಿ ಟೀಕೆ ಮಾಡಲು ಹೋಗಿ ತಾವೇ ಗೇಲಿಗೆ ಗುರಿಯಾಗಿದ್ದಾರೆ. ಆರ್’ಎಸ್’ಎಸ್ ಘಟಕದಲ್ಲಿ ಎಷ್ಟು ಜನ ಮಹಿಳೆಯರಿದ್ದಾರೆ? ಆರ್ ಎಸ್ ಎಸ್ ಶಾಖೆಗಳಲ್ಲಿ ಮಹಿಳೆಯರು ಶಾರ್ಟ್ಸ್ ಧರಿಸಿದ್ದನ್ನು ನೀವು ನೋಡಿದ್ದೀರಾ? ನಾನಂತೂ ನೋಡೇ ಇಲ್ಲ ಎಂದು ಹೇಳಿ ಟೀಕೆಗಳಿಗೆ ಆಹಾರವಾಗಿದ್ದಾರೆ.

Latest Videos

ಆರ್​ಎಸ್​ಎಸ್​ ಸಂಘಟನೆ ಚಡ್ಡಿಯಿಂದ ಹೊರ ಬಂದು ಪ್ಯಾಂಟ್ ಗೆ ತನ್ನ ಸಮವಸ್ತ್ರ ಬದಲಿಸಿಕೊಂಡು ಒಂದು ವರ್ಷವಾಗುತ್ತಿದೆ. ಚಡ್ಡಿ ಎಂದು ಹೀಗೆಳೆದು ಟೀಕಿಸಲು ಮುಂದಾದ ರಾಹುಲ್ ಈ ಬಾರಿ ಮುಜುಗರಕ್ಕೊಳಗಾಗಿದ್ದಾರೆ. ಆರ್​ಎಸ್​ಎಸ್​ನಲ್ಲಿ 1936 ರಿಂದಲೇ ರಾಷ್ಟ್ರೀಯ ಸೇವಿಕಾ ಸಮಿತಿ ಎಂಬ ಮಹಿಳಾ ಘಟಕ ಇದೆ. ದೇಶಾಧ್ಯಂತ ಐದು ಸಾವಿರಕ್ಕೂ ಹೆಚ್ಚು ಶಾಖೆಗಳಿದ್ದು ಹತ್ತು ಲಕ್ಷ ಮಹಿಳಾ ಸದಸ್ಯರಿದ್ದಾರೆ. ಇಷ್ಟಿದ್ದೂ ರಾಹುಲ್ ನಿನ್ನೆ ಮತ್ತೆ ತಮ್ಮ ದಡ್ಡತನವನ್ನು ಪ್ರದರ್ಶಿಸಿದ್ದಾರೆ.

ಆರ್​ಎಸ್​ಎಸ್​ ಅನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಮುಜುಗರ ಅನುಭವಿಸಿಲ್ಲ. 2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಗಾಂಧಿ ಹತ್ಯೆ ಮಾಡಿದ್ದು ಆರ್​ಎಸ್​ಎಸ್​ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ರಾಹುಲ್​ ಗಾಂಧಿಯನ್ನು ಆರ್​ಎಸ್​ಎಸ್ ಕೋರ್ಟ್​ಗೆಳೆದಿದ್ದು. ಸುಪ್ರೀಂ ಕೋರ್ಟ್​ ಮುಂದೆ ಹಾಜರಾಗಿದ್ದ ರಾಹುಲ್ ಗಾಂಧಿ ನಾನು ಹಾಗೆ ಹೇಳಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದರು. ಈಗ ಮತ್ತೆ ಆರ್​ಎಸ್​ಎಸ್​ ಟೀಕೆ ಮಾಡಲು ಹೋಗಿ ಎಡವಿದ್ದಾರೆ. ರಾಹುಲ್ ಪ್ರತೀ ಬಾರಿ ಮಾತನಾಡಿದಾಗಲೂ ಒಂದಲ್ಲಾ ಒಂದು ವಿವಾದಕ್ಕೆ ಆಹಾರವಾಗುತ್ತಿರೋದು ಸ್ವತಃ ಕಾಂಗ್ರೆಸಿಗೂ ಮುಜುಗರ ಅನುಭವಿಸುವಂತಾಗಿದೆ.

click me!