
ನವದೆಹಲಿ (ಡಿ.12): ಹಿರಿಯರು ಪ್ಯಾಕ್' ಅಪ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ತನ್ನ ತಂಡದಲ್ಲಿ ಯುವಕರಿಗೆ ಪ್ರಾತಿನಿಧ್ಯ ಕೊಟ್ಟು ಸೀನಿಯರ್ಸ್‌ಗಳು ಗಂಟು ಮೂಟೆ ಕಟ್ಟಿ ಎಂದು ಈಗಾಗಲೇ ಹೇಳಿದ್ದಾರೆ.
ಅಂದ ಕಾಲತ್ತಿಲೆ ಕಾಂಗ್ರೆಸ್ ಖಜಾಂಚಿಯಾಗಿರುವ ಮೋತಿಲಾಲ್ ವೋರಾ ಅವರಿಗೂ ನಿಮ್ಮ ಸೇವೆ ಸಾಕು ಎಂದು ರಾಹುಲ್ ನೇರವಾಗಿಯೇ ಹೇಳಿದ್ದು, ಕಳೆದ ಮೂರು ತಿಂಗಳುಗಳಿಂದ ರಾಹುಲ್ ಅತ್ಯಂತ ವಿಪರೀತವಾಗಿ ನಂಬುವ ಕನಿಷ್ಕಾ ಸಿಂಗ್ ವೋರಾ ಅವರಿಂದ ಲೆಕ್ಕ ಪತ್ರ ವ್ಯವಹಾರ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಘಾಟಿ ಅಜ್ಜ ವೋರಾ ಕೂಡ ಪ್ಯಾಕ್‌ಅಪ್ ಆಗಲಿದ್ದಾರಂತೆ. ಮೊದಲ ಹಂತದಲ್ಲಿ ಅಹಮದ್ ಪಟೇಲ್, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ, ಜನಾರ್ದನ್ ದ್ವಿವೇದಿಯವರ ಪ್ರಭಾವ ಕಡಿಮೆಯಾದರೆ ಮಾತ್ರ ಕಾಂಗ್ರೆಸ್ ಬಗ್ಗೆ ಇರುವ ಇಮೇಜ್ ಬದಲಾಯಿಸಬಹುದು ಎಂದು ರಾಹುಲ್ ಗಾಂಧಿಗೆ ಮನವರಿಕೆ ಆಗಿದೆಯಂತೆ. ಇದ್ದುದರಲ್ಲಿ ಗುಲಾಂ ನಬಿ ಆಜಾದ್ ಮತ್ತು ಮಲ್ಲಿಕಾರ್ಜುನ ಖರ್ಗೆ ಬಗ್ಗೆ ರಾಹುಲ್‌ಗೆ ಸ್ವಲ್ಪ ವಿಶ್ವಾಸ ಇದ್ದಂತೆ ಕಾಣುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.