ವಿಶೇಷ ಅಧಿವೇಶನಕ್ಕೂ ತಟ್ಟಿದ ರಾಹುಕಾಲ ಎಫೆಕ್ಟ್: ಮಧ್ಯಾಹ್ನ 12ರ ನಂತರ ಸದನ ಆರಂಭಕ್ಕೆ ಎಚ್.ಡಿ ರೇವಣ್ಣ ಸಲಹೆ

By Internet DeskFirst Published Sep 23, 2016, 7:38 AM IST
Highlights

ಬೆಂಗಳೂರು(ಸೆ.23): ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಷಯದಲ್ಲಿ ರಾಜ್ಯದ ನಿಲುವು ತಿಳಿಸಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗಿದ್ದು, ಈ ವಿಶೇಷ ಅಧಿವೇಶನಕ್ಕೆ ರಾಹುಕಾಲ ಎಫೆಕ್ಟ್ ತಟ್ಟಿದೆ. 

ವಿಶೇಷ ಅಧಿವೇಶನ ಯಾವುದೇ ರೀತಿಯ ತೊಡಕಾಗದೆ ಯಶಸ್ವಿಯಾಗಲಿ ಎನ್ನುವ ಕಾರಣದಿಂದ ಸದನ ಆರಂಭಕ್ಕೆ ವಿಪಕ್ಷ ನಾಯಕರು ಎಚ್.ಡಿ ರೇವಣ್ಣ ಸಲಹೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ರೇವಣ್ಣ, ಮಧ್ಯಾಹ್ನ 12ರ ವರೆಗೂ ರಾಹುಕಾಲವಿದ್ದು, ನಂತರ ಕಲಾಪ ಆರಂಭಿಸುವಂತೆ ಸಲಹೆ ನೀಡಿದ್ದಾರೆ. 

Latest Videos

ಸದನ ಸಲಹಾ ಸಮಿತಿ ಸಭೆಯಲ್ಲಿ ವಿಪಕ್ಷ  ನಾಯಕರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್ ಅವರು ರೇವಣ್ಣ ಬಳಿ ಸಲಹೆ ಹಿನ್ನಲೆಯಲ್ಲಿ ಮಧ್ಯಾಹ್ನ 12 ಗಂಟೆ ಬಳಿಕ ಕಲಾಪ  ಆರಂಭ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಕಲಾಪವು ರಾಹುಕಾಲ ಕಳೆದ ನಂತರ ಮಧ್ಯಾಹ್ನ 12ರ ನಂತರ ಆರಂಭವಾಗಿದೆ.  
 

click me!