ಕಮ್ಯುನಿಸ್ಟ್ ಆಡಳಿತ ಪತನ ಭೀತಿ:9 ಕೋಟಿ ಸದಸ್ಯರಿಗೆ ಧರ್ಮ ತ್ಯಜಿಸಲು ಚೀನಾ ಸೂಚನೆ!

By Suvarna Web DeskFirst Published Jul 20, 2017, 4:04 PM IST
Highlights

ಕಾರ್ಯಕರ್ತರು ಧಾರ್ಮಿಕ ಸ್ಥಾನಮಾನ ತೊರೆಯಲು ಗಡುವು ನೀಡಲಾಗಿದೆ, ಅದನ್ನು ಮೀರುವವರ ವಿರುದ್ಧಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚೀನಾದ ಧಾರ್ಮಿಕ ವ್ಯವಹಾರಗಳ ಆಡಳಿತ ಸಂಸ್ಥೆಯ ಮುಖ್ಯಸ್ಥ ವಾಂಗ್ ಝುವೊವಾನ್ ಎಚ್ಚರಿಸಿದ್ದಾರೆ.

ಬೀಜಿಂಗ್(ಜು.20): ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ), ತನ್ನ ಸುಮಾರು 9 ಕೋಟಿ ಸದಸ್ಯರಿಗೆ ಧರ್ಮವನ್ನು ತೊರೆಯುವಂತೆ ವಿವಾದಾತ್ಮಕ ನಿರ್ದೇಶನವೊಂದನ್ನು ನೀಡಿದೆ. ಕಾರ್ಯಕರ್ತರು ಧಾರ್ಮಿಕ ಸ್ಥಾನಮಾನ ತೊರೆಯಲು ಗಡುವು ನೀಡಲಾಗಿದೆ, ಅದನ್ನು ಮೀರುವವರ ವಿರುದ್ಧಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚೀನಾದ ಧಾರ್ಮಿಕ ವ್ಯವಹಾರಗಳ ಆಡಳಿತ ಸಂಸ್ಥೆಯ ಮುಖ್ಯಸ್ಥ ವಾಂಗ್ ಝುವೊವಾನ್ ಎಚ್ಚರಿಸಿದ್ದಾರೆ.
ಪಕ್ಷದ ಒಗ್ಗಟ್ಟನ್ನು ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಪಕ್ಷದ ಸದಸ್ಯರು ದೃಢ ಮಾರ್ಕ್ಸ್ವಾದಿ ನಾಸ್ತಿಕರಾಗಿರಬೇಕು. ಪಕ್ಷದ ನಿಯಮಗಳನ್ನು ಪಾಲಿಸಿ, ಪಕ್ಷದ ನಂಬಿಕೆಗೆ ಬದ್ಧರಾಗಿ ಎಂದು ವಾಂಗ್ ಸೂಚಿಸಿದ್ದಾರೆ. ಪೋಲೆಂಡ್ ಸೇರಿದಂತೆ ಹಲವು ಯುರೋಪಿಯನ್ ದೇಶಗಳು ಈ ಹಿಂದೆ ಸಮಾಜವಾದಿ ಚಿಂತನೆಗಳನ್ನು ಹೊಂದಿದ್ದು, ಬಳಿಕ ಅಲ್ಲಿ ಕ್ರೈಸ್ತರ ಸಂಖ್ಯೆ ಹೆಚ್ಚಾದ ಮೇಲೆ ಕಮ್ಯುನಿಸ್ಟ್ ಸರ್ಕಾರ ಕುಸಿದು ಬಿದ್ದಿತ್ತು. ಇದೇ ಭೀತಿಯಿಂದ ಚೀನಾ ಕೂಡಾ ತನ್ನ ಸದಸ್ಯರಿಗೆ ಧರ್ಮ ತ್ಯಜಿಸಲು ಸೂಚಿಸಿದೆ ಎಂದುವಿಶ್ಲೇಷಿಸಲಾಗಿದೆ. ಚೀನಾದಲ್ಲಿ ಬೌದ್ಧ ಧರ್ಮದ ನಂತರ ಕ್ರೈಸ್ತ ಧರ್ಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ. ಅಲ್ಲಿ 6.5ಕೋಟಿ ಕ್ರೈಸ್ತರು, 2 ಕೋಟಿ ಮುಸ್ಲಿಮರಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

click me!