ಮಾಸ್ತಿಗುಡಿ ಚಿತ್ರತಂಡದವರಿಗೆ 6 ಪ್ರಶ್ನೆಗಳು

By Suvarna Web DeskFirst Published Nov 7, 2016, 3:08 PM IST
Highlights

ಜಲಾಶಯದಲ್ಲಿ ಶೂಟಿಂಗ್ ಮಾಡಬಾರದು, ಅದರಲ್ಲೂ ಏರಿಯಲ್ ಶಾಟ್ ತೆಗೆಯಬಾರದು ಎಂದು ಬಿಡಬ್ಲ್ಯೂಎಸ್'ಎಸ್'ಬಿ ಸ್ಪಷ್ಟವಾಗಿ ಹೇಳಿದ್ದರೂ ಆ ಕೆಲಸ ಮಾಡಿದ್ದು ಯಾಕೆ?

ಬೆಂಗಳೂರು(ನ. 07): ಮಾಸ್ತಿಗುಡಿ ಚಿತ್ರೀಕರಣ ವೇಳೆ ಇಬ್ಬರು ಉದಯೋನ್ಮುಖ ನಟರು ದುರಂತ ಸಾವನ್ನಪ್ಪಿದ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಸ್ತಿಗುಡಿ ಚಿತ್ರತಂಡ ಇಂಥ ಕೆಲ ಪ್ರಮುಖ ಪ್ರಶ್ನೆಗಳನ್ನು ಉತ್ತರಿಸುತ್ತದಾ?

1) ಈಜು ಬಾರದವರನ್ನು ನೀರಿಗೆ ಧುಮುಕಿಸಿದ್ದು ಎಷ್ಟು ಸರಿ?
2) ಮೊದಲ ಮಹಡಿಯಿಂದ ಕೆಳಗೆ ನೋಡಲು ಭಯಪಡುವವನನ್ನು ಹೆಲಿಕಾಪ್ಟರ್'ನಿಂದ ಕೆಳಗೆ ಧುಮುಕಿಸಿದ್ದು ಯಾಕೆ?
3) ಜಲಾಶಯದಲ್ಲಿ ಶೂಟಿಂಗ್ ಮಾಡಬಾರದು, ಅದರಲ್ಲೂ ಏರಿಯಲ್ ಶಾಟ್ ತೆಗೆಯಬಾರದು ಎಂದು ಬಿಡಬ್ಲ್ಯೂಎಸ್'ಎಸ್'ಬಿ ಸ್ಪಷ್ಟವಾಗಿ ಹೇಳಿದ್ದರೂ ಆ ಕೆಲಸ ಮಾಡಿದ್ದು ಯಾಕೆ?
4) ದುರಂತ ಸಾವನ್ನಪ್ಪಿದ ರಾಘವ್ ಉದಯ್ ಮತ್ತು ಅನಿಲ್'ಗೆ ಯಾಕೆ ಲೈಫ್ ಜಾಕೆಟ್ ತೊಡಿಸಲಿಲ್ಲ?
5) ಅತ್ಯಗತ್ಯವಾದ ಸ್ಪೀಡ್ ಬೋಟ್ ಯಾಕೆ ಇಟ್ಟುಕೊಂಡಿರಲಿಲ್ಲ?
6) ಲೈಫ್ ಬೋಟನ್ನು ಸ್ಪಾಟ್ ಸಮೀಪದಲ್ಲಿರಿಸದೇ, ದಡದಲ್ಲಿ ಯಾಕೆ ಇಟ್ಟುಕೊಂಡಿದ್ದಿರಿ?

click me!