ನಾಲ್ಕು ದಶಕದ ನಂತರ LOC ದಾಟಿದ ಭಾರತದ ಲೋಹದ ಹಕ್ಕಿಗಳು!

By Web DeskFirst Published Feb 26, 2019, 11:03 AM IST
Highlights

ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿ ಭಾರತೀಯ ವಾಯುಸೇನೆಯು ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಮೇಲೆ ದಾಳಿ ನಡೆಸಿದೆ.

ನವದೆಹಲಿ[ಫೆ.26]: ಬರೋಬ್ಬರಿ ನಾಲ್ಕು ದಶಕಗಳ ನಂತರ ಭಾರತೀಯ ವಾಯು ಸೇನೆಯ ಲೋಹದ ಹಕ್ಕಿಗಳಿಗೆ ಭಾರತದ ಗಡಿಯಾಚೆ ರೆಕ್ಕೆ ಬಿಚ್ಚುವ ಅವಕಾಶ ಸಿಕ್ಕಿದೆ. LOC ದಾಟಿದ ಮಿರಾಜ್ ಫೈಟರ್ ಜೆಟ್ ಗಳು ಉಗ್ರರ ಕ್ಯಾಂಪ್ ಕೇವಲ 21 ನಿಮಿಷಗಳಲ್ಲಿ ಧ್ವಂಸಗೊಳಿಸಿ ಸುರಕ್ಷಿತವಾಗಿ ಮರಳಿವೆ. ಈ ಮೂಲಕ ಭಾರತವು ಪುಲ್ವಾಮಾ ದಾಳಿಗೆ ಪ್ರತೀಕಾರ ಆರಂಭಿಸಿದೆ.

"

ಈ ಹಿಂದೆ ಕಾರ್ಗಿಲ್ ನಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭ ಆಗಿದ್ದ ಸಂದರ್ಭದಲ್ಲೂ ವಾಯುಪಡೆಗೆ ಗಡಿ ದಾಟುವ ಅವಕಾಶವನ್ನು ಭಾರತ ಸರ್ಕಾರ ನೀಡಿರಲಿಲ್ಲ. ಆದರೆ ಈಗ ಬರೋಬ್ಬರಿ 40 ವರ್ಷಗಳ ಬಳಿಕ LOC ದಾಟಿದ ನಮ್ಮ ಲೋಹದ ಹಕ್ಕಿಗಳು ಪಾಕ್ ಗಡಿಯಲ್ಲಿ ಅವಿತಿದ್ದ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದೆ.

ಪುಲ್ವಾಮಾ ದಾಳಿ ನಡೆದ ಕೇವಲ 2 ವಾರಗಳೊಳಗೆ ಈ ದಾಳಿ ನಡೆದಿದ್ದು, ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿದೆ.

click me!