ಉಗ್ರರ 350ಕೆಜಿ ಬಾಂಬ್ ಗೆ, ಭಾರತದ 1000 ಕೆಜಿ ಬಾಂಬ್‌ ನಿಂದ ಉತ್ತರ!

By Web DeskFirst Published Feb 26, 2019, 10:39 AM IST
Highlights

ಭಾರತೀಯ ವಾಯು ಸೇನೆಯು ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಕ್ಯಾಂಪ್ ಗಳನ್ನು ಧ್ವಂಸಗೊಳಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ. ಈ ಮೂಲಕ ಉಗ್ರರು ಪುಲ್ವಾಮಾದಲ್ಲಿ CRPF ಯೋಧರ ಮೇಲೆ ನಡೆಸಿದ್ದ 350ಕೆಜಿ ಬಾಂಬ್ ಗೆ, 1000 ಕೆಜಿ ತೂಕದ ಬಾಂಬ್ ಗಳಿಂದ ಉತ್ತರಿಸಿದೆ.

ನವದೆಹಲಿ[ಫೆ.26]: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಮೇಲೆ ನಡೆದಿದ್ದ ದಾಳಿಯ ಎರಡು ವಾರಗಳೊಳಗೆ ಭಾರತೀಯ ಸೇನೆಯು ಉಗ್ರರಿಗೆ ಪ್ರತ್ಯುತ್ತರ ನೀಡಿದೆ. ಗಡಿ ನಿಯಂತ್ರಣಾ ರೇಖೆ ದಾಟಿದ ಭಾರತೀಯ ವಾಯುಸೇನೆಯು ಜೈಷ್-ಎ-ಮೊಹಮ್ಮದ್ ಸಂಘಟನೆಯ ಕ್ಯಾಂಪ್ ಗಳ ಮೇಲೆ 1000ಕೆಜಿ ತೂಕದ ಸುಮಾರು 10 ಬಾಂಬ್ ದಾಳಿ ನಡೆಸಿದೆ. ಈ ಮೂಲಕ ಉಗ್ರರು ನಡೆಸಿದ್ದ 350 ಕೆಜಿ ಸ್ಫೋಟಕ್ಕಕೆ 1000 ಕೆಜಿ ಬಾಂಬ್ ದಾಳಿ ನಡೆಸಿ ಪ್ರತೀಕಾರ ಪಡೆದಿದೆ.

"

ಲಭ್ಯವಾದ ಮಾಹಿತಿ ಅನ್ವಯ ಮಂಗಳವಾರ ಮುಂಜಾನೆ ಸುಮಾರು 3.48ಕ್ಕೆ ಭಾರತೀಯ ವಾಯುಸೇನೆಯು ಗಡಿ ನಿಯಂತ್ರಣಾ ರೇಖೆ ದಾಟಿದ ವಿರಾಜ್ ಫೈಟರ್ ಜೆಟ್ ಗಳು ಪಾಕಿಸ್ತಾನದ ರಾಡಾರ್ ವ್ಯವಸ್ಥೆಯನ್ನು ಜಾಮ್ ಗೊಳಿಸಿ ಜೈಶ್ ನ ಉಗ್ರ ಶಿಬಿರಗಳ ಮೇಲೆ 1000ಕೆಜಿ ತೂಕದ ಸುಮಾರು 10 ಬಾಂಬ್ ದಾಳಿ ನಡೆಸಿ ಸುರಕ್ಷಿತವಾಗಿ ತಮ್ಮ ಮೂಲ ನೆಲೆಗಳಿಗೆ ವಾಪಾಸು ಬಂದಿವೆ. ಕೇವಲ 21 ನಿಮಿಷಗಳ ಕಾಲ ನಡೆದ ಕ್ಷಿಪ್ರ ವಾಯುದಾಳಿಯಲ್ಲಿ ಭಾರತೀಯ ವಾಯುಸೇನೆಯ 12 ಮಿರಾಜ್ 2000 ಫೈಟರ್ ಜೆಟ್ ಗಳು ಭಾಗವಹಿಸಿದ್ದವು.

ದಾಳಿಯ ಕುರಿತಾಗಿ ಭಾರತೀಯ ವಾಯುಸೇನೆಯಿಂದ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಶೀಘ್ರವೇ ಸುದ್ದಿ ಗೋಷ್ಟಿಯನ್ನು ಆಯೋಜಿಸಲಾಗಿದೆ.

 

click me!