ಬೇಡಿ-ಪುದುಚೇರಿ ಶಾಸಕ ವೇದಿಕೆಯಲ್ಲೇ ಕಿತ್ತಾಟ!

Published : Oct 03, 2018, 10:04 AM IST
ಬೇಡಿ-ಪುದುಚೇರಿ ಶಾಸಕ ವೇದಿಕೆಯಲ್ಲೇ ಕಿತ್ತಾಟ!

ಸಾರಾಂಶ

ಎಷ್ಟೊತ್ತಾದರೂ ಭಾಷಣ ನಿಲ್ಲಿಸಿದ ಎಂಎಲ್ಎಗೆ ಪುದುಚೆರಿ ರಾಜ್ಯಪಾಲೆ ಕಿರಣ್ ಬೇಡಿ ಭಾಷಣ ನಿಲ್ಲಿಸಲು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಇಬ್ಬರ ನಡುವೆ ವಾಗ್ದಾವ ತಾರಕಕ್ಕೇರಿದೆ.

ಪುದುಚೇರಿ: ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ ಅವರು ಅಣ್ಣಾ ಡಿಎಂಕೆ ಶಾಸಕರೊಬ್ಬರ ಜತೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. 

ಪುದುಚೇರಿಯ ಉಪ್ಪಳಂ ಎಂಬಲ್ಲಿ ಗಾಂಧೀ ಜಯಂತಿ ನಿಮಿತ್ತ ನಡೆದ ಸಮಾರಂಭದಲ್ಲಿ ಮಾತನಾಡಿದ ಅಣ್ಣಾ ಡಿಎಂಕೆ ಶಾಸಕ ಎ. ಅನ್ಬಳಗನ್, ‘ಉ
ರಾಜ್ಯಪಾಲ ರಿಂದ ನಮಗೆ ತೊಂದರೆಯಾಗುತ್ತಿದೆ. ನನ್ನ ಕ್ಷೇತ್ರದ ಒಂದೇ ಒಂದು ಅಭಿವೃದ್ಧಿ ಕೆಲಸದ ಕಡತವನ್ನೂ ಅವರು ಪಾಸು ಮಾಡಿಲ್ಲ’ ಎಂದು ಹೇಳುತ್ತ ಬೇಡಿ ಸಹಿ ಬಾಕಿ ಇರುವ ಕಾಮಗಾರಿಗಳ ಪಟ್ಟಿಯನ್ನು ಓದತೊಡಗಿದರು. ಈ ವೇಳೆ ಮಧ್ಯಪ್ರವೇಶಿಸಿದ ಬೇಡಿ, ಶಾಸಕನನ್ನು ಸಮಧಾನಿಸಲು ಯತ್ನಿಸಿದರು. ಆದರೆ ಭರವಸೆ ನಂಬದ ಅನ್ಬಳಗನ್, ಬೇಡಿ ವಿರುದ್ಧ ವಾಗ್ದಾಳಿ ಮುಂದುವರಿಸಿದಾಗ, ‘ಮೈಕ್ ಬಂದ್ ಮಾಡಿ’ ಎಂದು ಪೊಲೀಸರಿಗೆ ಬೇಡಿ ಸೂಚಿಸಿದರು. 

ಇದರಿಂದ ಕೆರಳಿದ ಅನ್ಬಳಗನ್, ಬೇಡಿ ಅವರತ್ತ ವೇದಿಕೆಯಲ್ಲೇ ಕೂಗಾಡಿದರು. ಇದಕ್ಕೆ ಪ್ರತಿಯಾಗಿ ಬೇಡಿ ಕೂಡ ಕೂಗಾಡಿ, ವೇದಿಕೆಯಿಂದ  ಕೆಳಗಿಳಿಯಲು ಸೂಚಿಸಿದರು. 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!