
ಬಾಗಲಕೋಟೆ(ಅ. 08): ಸ್ನೇಹಿತೆಯರ ವ್ಯಂಗ್ಯ ಮಾತುಗಳನ್ನು ಸಹಿಸಲಾಗದೇ ಇಲ್ಲಿಯ ಪಿಜಿ ಹಾಸ್ಟೆಲ್'ವೊಂದರಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ವಿಷಾದಕರ ಘಟನೆ ಸಂಭವಿಸಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬೂದಿಹಾಳ ಗ್ರಾಮದ 17 ವರ್ಷದ ಅಕ್ಷತಾ ಆತ್ಮಹತ್ಯೆ ಮಾಡಿಕೊಂಡಾಕೆ. ವಿಜ್ಞಾನ ವಿಷಯದಲ್ಲಿ ಪಿಯುಸಿ ಓದುತ್ತಿದ್ದ ಅಕ್ಷತಾ ಬರೆದಿಟ್ಟ ಡೆತ್ ನೋಟ್ ಪ್ರಕಾರ ಈಕೆ ಜೀವನದಲ್ಲಿ ಜಿಗುಪ್ಸೆ ಹೊಂದು ಸಾವಿನ ನಿರ್ಧಾರ ಕೈಗೊಂಡಿದ್ದಾಳೆನ್ನಲಾಗಿದೆ. ಎಸ್ಸೆಸೆಲ್ಸಿಯಲ್ಲಿ ಶೇ.95ರಷ್ಟು ಅಂಕ ಪಡೆದ ಈ ಹುಡುಗಿ ಎಂಬಿಬಿಎಸ್ ಓದಬೇಕೆಂದು ಗುರಿ ಇಟ್ಟುಕೊಂಡಾಕೆ. ಆದರೆ, ಸ್ನೇಹಿತೆಯರ ಚುಚ್ಚುಮಾತಿಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಆಕೆ ಬರೆದಿಟ್ಟ ಡೆತ್'ನೋಟ್'ನಿಂದ ತಿಳಿದುಬರುತ್ತಿದೆ. ಈಕೆ ಡೆತ್'ನೋಟ್'ನಲ್ಲಿ ಬರೆದಿರುವ ವಿವರ ಈ ಕೆಳಕಂಡಂತಿದೆ.
"ಅಮ್ಮಾ ನಾನು ಈ ರೀತಿ ಮಾಡಿಕೊಳ್ಳೋಕೆ ಕಾರಣವೇನೆಂದರೆ ನನಗೆ ಹೆಣ್ಣಾಗಿ ಯಾಕೆ ಹುಟ್ಟಿದೆನೋ ಎನಿಸಿಬಿಟ್ಟಿದೆ. ಅದರಲ್ಲಿ ಈ ಹುಡುಗಿಯರದೊಂದು ಬರೆ ಹೆದರುವುದು, ಜಗಳವಾಡುವುದು ಇದೇ. ಇಂತಹವರ ನಡುವೆ ಓದಬೇಕೆಂದರೆ ಅದಕ್ಕೂ ಇವಳು ಏನು ಎಂಬಿಬಿಎಸ್ ಕಲಿಯುತ್ತಾಳೆಂದು ಚುಚ್ಚು ಮಾತುಗಳು... ಹಾಗೇ ನೀವು ಯಾರು ಜೊತೆಯಾಗುತ್ತಳೇ, ಅಕ್ಕಪಕ್ಕ ಊರಿನವರು ಎಂದು ಕಳಿಸಿದ್ದಿರೋ ಅವರು ಅಂತಹವರೇ ಒಳಗೊಂದು ಹೊರಗೊಂದು.. ಅಮ್ಮಾ ನನಗೆ ಇಂತಹ (ಬದುಕು) ಬದುಕೋಕೆ ಆಗಲ್ಲ. ಹಾಗೆ ನನಗೆ ಮೂರು ದಿನ ಹುಲಿಯಾಗಿ ಬದುಕಬೇಕು. ಇಲ್ಲದಿದ್ದರೆ ಇಲಿಯಾಗಿ ನೂರು ವರ್ಷ ಬದುಕಿದರೆ ಪ್ರಯೋಜನವಿಲ್ಲ. ನನ್ನ ಮೇಲೆ ನನಗೆ ಜಿಗುಪ್ಸೆಯಾಗಿ ಬಿಟ್ಟಿದೆ. ಬಂದು 4-5 ತಿಂಗಳಾಯಿತು. ಚೆನ್ನಾಗಿ ಮಾರ್ಕ್ಸ್ ತೆಗೆಯೋಕೂ ಆಗವಲ್ಲದಾಯಿತು. ನಾನೇನು ಓದಿಲ್ಲ ಅಂತಲ್ಲ. ಎಷ್ಟೋ ಕಷ್ಟಪಟ್ಟೆ. ನಿನಗೆ ಗೊತ್ತಲ್ಲ.. ನನಗೆ ಗದ್ದಲದಲ್ಲಿ ಕುಳಿತು ಓದಿದರೆ ತಲೆಗೆ ಹತ್ತಲ್ಲ ನನಗೆ...
ಅಮ್ಮಾ ಈ ಜಗತ್ತು ಎಷ್ಟು ಕೆಟ್ಟದ್ದು ಗೊತ್ತಾ. ಯಾರನ್ನೂ ಚೆನ್ನಾಗಿ ಇರೋಕೆ ಬಿಡೋದಿಲ್ಲ. ಅದರಲ್ಲಿ ನಾನು ಮೊದಲು ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು...."
ವರದಿ: ಮಲ್ಲಿಕಾರ್ಜುನ ಹೊಸಮನಿ, ಸುವರ್ಣನ್ಯೂಸ್, ಬಾಗಲಕೋಟೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.