ಏಪ್ರಿಲ್ ಕೊನೆ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ

By Suvarna Web DeskFirst Published Apr 6, 2018, 5:42 PM IST
Highlights

ಏಪ್ರಿಲ್  ಕೊನೆಯ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಲಿದೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. 

ಬೆಂಗಳೂರು (ಏ. 06): ಏಪ್ರಿಲ್  ಕೊನೆಯ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಲಿದೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. 

ಇಂದು ಸುದ್ದಿಗೋಷ್ಟಿಯಲ್ಲಿ ತನ್ವೀರ್ ಸೇಠ್ ಮಾತನಾಡುತ್ತಾ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದಿದೆ. ಪರೀಕ್ಷಾ ಸುಧಾರಣಾ ಕ್ರಮ ತೃಪ್ತಿ ತಂದಿದೆ.  33 ವಿಷಯಗಳಲ್ಲಿ ಪರೀಕ್ಷೆ ನಡೆದಿದೆ.  ಮುಂದಿನ ವರ್ಷದಿಂದ ಪರೀಕ್ಷಾ ಮಂಡಳಿಯೇ ಪೂರಕ ಪರೀಕ್ಷೆ ನಡೆಸಲಿದೆ ಎಂದಿದ್ದಾರೆ. 

Scheme evaluation ಕಳೆದ ವರ್ಷದಿಂದ ಆರಂಭವಾಗಿದೆ.  ಈ ವರ್ಷ 2.73ರಷ್ಟು ವಿದ್ಯಾರ್ಥಿಗಳು ಗೈರು  ಹಾಜರಾಗಿದ್ದಾರೆ.  2817 ಪರೀಕ್ಷಾ ಕೇಂದ್ರಗಳ್ಲಿ 51 ವಿದ್ಯಾರ್ಥಿಗಳು ಡಿಬಾರ್  ಆಗಿದ್ದಾರೆ.   ಇಂಟರ್’ನೆಟ್’ನಲ್ಲಿ  8ನೇ ತಾರೀಖು  ಕೀ ಉತ್ತರ ಹಾಕಲಾಗುತ್ತದೆ.  ಆಕ್ಷೇಪಣೆ ಗೆ ಮೇ 8 ರಿಂದ 10ರವರೆಗೆ ಅವಕಾಶ ನೀಡಲಾಗಿದೆ.  ಮೌಲ್ಯಮಾಪನ ಇದೇ ತಿಂಗಳ 16 ರಿಂದ 25ರವರೆಗೆ ನಡೆಯುತ್ತದೆ. ಮೇ ಮೊದಲ ವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದಿದ್ದಾರೆ. 

click me!