ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಹೆಮ್ಮೆ : ಹಿಂದೂ ಮಹಿಳೆ

By Web DeskFirst Published Jan 28, 2019, 1:40 PM IST
Highlights

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಮೊದಲ ಹಿಂದೂ ಮಹಿಳೆ ಇಲ್ಲಿನ ಕಾಂಗ್ರೆಸ್ ಗೆ ಆಯ್ಕೆಯಾಗುವ ಮೂಲಕ ಅರ್ಹತೆ ಪಡೆದುಕೊಂಡಿದ್ದಾರೆ. 

ವಾಷಿಂಗ್ಟನ್ : ಭಾರತೀಯ ಮೂಲದ ಅಮೆರಿಕನ್ ಹಿಂದೂ ಮಹಿಳೆ ತುಳಸಿ ಗಬ್ಬರ್ಡ್ 2020ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಡೆಮಾಕ್ರಟಿಕ್ ಪಕ್ಷದಿಂದ ಅರ್ಹತೆ ಪಡೆದುಕೊಂಡಿದ್ದಾರೆ. 

ಆದರೆ ಹಿಂದೂ ಎನ್ನುವ ಕಾರಣಕ್ಕೆ ಇವರು ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಯಾಕೆಂದರೆ ತುಳಸಿ ವಿರುದ್ಧ ಧಾರ್ಮಿಕ ನಿಂದನೆ ಹಾಗೂ ಆಕೆಯ ಬೆಂಬಲಿಗರ ವಿರುದ್ಧ ಸಾಕಷ್ಟು ನಿಂದನೆ ಮಾಡಲಾಗುತ್ತಿದೆ. 

ಆದರೆ ಭಾರತೀಯ ಹಿಂದೂ ಮಹಿಳೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ  ಕ್ಯಾಂಪೇನ್ ನ್ನೇ ಕೈಗೊಳ್ಳಲಾಗಿದೆ. 

ಸದ್ಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ  ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅಮೆರಿಕ ಕಾಂಗ್ರೆಸ್ ಗೆ ಆಯ್ಕೆಯಾಗಿರುವ 37 ವರ್ಷದ ತುಳಸಿ ಜನವರಿ 11 ರಂದೇ 2020ರ ವೇಳೆಗೆ ತಾವು ಶ್ವೇತಭವನದ ಹೊಣೆ ವಹಿಸಿಕೊಳ್ಳುವುದಾಗಿ ಹೇಳಿದ್ದರು. 

ಇದೀಗ ಅಮೆರಿಕದಲ್ಲಿ ತಮ್ಮ  ವಿರುದ್ಧ ನಡೆಯುತ್ತಿರುವ ವಿರೋಧಿ ಕ್ಯಾಂಪೇನ್ ಬಗ್ಗೆ ಪ್ರತಿಕ್ರಿಯಿಸಿರುವ ತುಳಸಿ, ಇಂದು ಹಿಂದೂ ರಾಷ್ಟ್ರದ ಮಹಿಳೆ ಅಧ್ಯಕ್ಷೀಯ ಚುನಾವಣೆ ಅರ್ಹತೆಯನ್ನು ಪಡೆದುಕೊಂಡಿದ್ದು,  ನಾಳೆಯ ದಿನ ಇದೇ ಸ್ಥಾನದಲ್ಲಿ ಮುಸ್ಲಿಮ್, ಜ್ಯೂಯಿಶ್ ಅಮೆರಿಕನ್, ಜಪಾನಿಸ್, ಆಫ್ರಿಕನ್ ಅಮೆರಿಕನ್ ಕೂಡ ಇರಬಹುದು ಎಂದಿದ್ದಾರೆ. 

ಅಲ್ಲದೇ ಮೊದಲ ಹಿಂದೂ ಮಹಿಳೆಯೋರ್ವರು ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಮಾಡುವ ಅರ್ಹತೆ ಪಡೆದುಕೊಂಡಿರುವುದು ತಮಗೆ ಹೆಮ್ಮೆ ಎನಿಸುತ್ತಿದೆ ಎಂದು ತುಳಸಿ ಹೇಳಿದರು.

ತುಳಸಿ ಗಬ್ಬರ್ಡ್ ಹಿನ್ನೆಲೆ : 1981 ಏಪ್ರಿಲ್ 12 ರಂದು ಜನಿಸಿದ ತುಳಸಿ 2013ರಿಂದ  ಅಮೆರಿಕ ಕಾಂಗ್ರೆಸ್ ನಲ್ಲಿ ಹವಾಯ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಸದಸ್ಯೆಯಾದ ಅವರು  ಫೆಬ್ರವರಿ 28 , 2016ರವರೆಗೆ ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ 2020ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿದ್ದಾರೆ. 

click me!