ಬಿಜೆಪಿ ಮುಖಂಡನಿಂದ ಹೊಸ ವಿವಾದ

First Published Jun 6, 2018, 3:01 PM IST
Highlights

ಸರ್ಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರೇ ಮೇಲು ಎನ್ನುವಂತಹ ಹೇಳಿಕೆ ನೀಡುವ ಮೂಲಕ ಉತ್ತರ  ಪ್ರದೇಶದ  ಬಿಜೆಪಿ ಮುಖಂಡ  ಸುರೇಂದ್ರ ಸಿಂಗ್ ವಿವಾದಕ್ಕೀಡಾಗಿದ್ದಾರೆ. 

ಬೆಂಗಳೂರು : ಸರ್ಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರೇ ಮೇಲು ಎನ್ನುವಂತಹ ಹೇಳಿಕೆ ನೀಡುವ ಮೂಲಕ ಉತ್ತರ  ಪ್ರದೇಶದ  ಬಿಜೆಪಿ ಮುಖಂಡ  ಸುರೇಂದ್ರ ಸಿಂಗ್  ಸಾರ್ವಜನಿಕ ಸಭೆಯಲ್ಲಿ ಇಂತಹ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 

ವೇಶ್ಯೆಯರು ಸರ್ಕಾರಿ ಅಧಿಕಾರಿಗಳಿಗಿಂತ ಉತ್ತಮ, ಯಾಕೆಂದರೆ ಅವರು ಕೆಲಸವಾದ ಮೇಲೆ ಹಣವನ್ನು ತೆಗೆದುಕೊಳ್ಳುತ್ತಾರೆ.  ಆದರೆ ಸರ್ಕಾರಿ ಅಧಿಕಾರಿಗಳು ಹಣವನ್ನು ತೆಗೆದುಕೊಂಡರೂ ಕೂಡ   ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಣ ನೀಡಿದರೂ ಅವರಿಂದ ಕೆಲಸವಾಗುತ್ತದೆ ಎನ್ನುವ ಯಾವುದೇ ನಂಬಿಕೆ ಇರುವುದಿಲ್ಲ ಎಂದಿದ್ದಾರೆ. 

ಇತ್ತೀಚೆಗಷ್ಟೇ ಉತ್ತರ ಪ್ರದೇಶದ 2 ಕ್ಷೇತ್ರಗಳಾದ ಕೈರಾನ ಹಾಗೂ ನೂಪುರ್ ಪ್ರದೇಶಗಳಲ್ಲಿ ಉಪ ಚುನಾವಣೆ ನಡೆದಿದ್ದು, 2 ಕ್ಷೇತ್ರಗಳಲ್ಲಿಯೂ ಕೂಡ ಬಿಜೆಪಿ ಸೋಲನ್ನು ಅನುಭವಿಸಿದೆ. ಇದೇ  ಬೆನ್ನಲ್ಲೇ ಅಲ್ಲಿನ ಬಿಜೆಪಿ ನಾಯಕ ಸುರೇಂದ್ರ ಸಿಂಗ್ ಇಂತಹ ಹೇಳಿಕೆ ನೀಡಿದ ವಿವಾದಕ್ಕೀಡಾಗಿದ್ದಾರೆ.  

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಮುಖಂಡರಿಗೆ ಎಚ್ಚರಿಕೆಯನ್ನು ನೀಡಿದ್ದರು. ಬಾಯಿಗೆ ಬಂದಂತೆ ಮಾತನಾಡುವ ಮೂಲಕ ಮಾಧ್ಯಮಗಳಿಗೆ ಮಸಾಲೆ ಒದಗಿಸಬೇಡಿ ಎಂದಿದ್ದರು. ಆದರೂ ಕೂಡ ಕೆಲ ಬಿಜೆಪಿ ಮುಖಂಡರು ತಮ್ಮ  ವಿವಾದಿತ ಹೇಳಿಕೆಗಳನ್ನು ಮುಂದುವರಿಸಿದ್ದಾರೆ. 

click me!