
ಬೆಂಗಳೂರು (ಮಾ. 03): ಚುನಾವಣೆ ಗಿಮಿಕ್‌ಗಾಗಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಪೌರಕಾರ್ಮಿಕರ ಪಾದ ತೊಳೆಯುತ್ತಾರೆ. ಪಾದ ತೊಳೆಯೊದ್ರಿಂದ ಉದ್ಧಾರ ಆಗೋದಾದ್ರೆ ನಮಗೂ ಪಾದ ತೊಳೆದುಬಿಡಲಿ, ನಾವು ಉದ್ಧಾರ ಆಗುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವಿದ್ದಾಗ .4310 ಕೋಟಿ ಪೌರಕಾರ್ಮಿಕರ ಕಲ್ಯಾಣಕ್ಕೆ ಇಡಲಾಗಿತ್ತು. ಈಗ ನರೇಂದ್ರ ಮೋದಿ .10 ಕೋಟಿ ಇಟ್ಟಿದ್ದು ಅದು ಪೌರಕಾರ್ಮಿಕರಿಗೆ ಈವರೆಗೂ ತಲುಪಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಾನು ಸಚಿವನಾಗಿ ಬಂದಿರುವುದೇ ಸಂವಿಧಾನ ಬದಲಾವಣೆಗೆ ಎಂದು ಸಚಿವರೊಬ್ಬರು ಹೇಳಿದ್ರೂ ನರೇಂದ್ರ ಮೋದಿ ಸುಮ್ಮನಿದ್ದರು. ಅವರ ಉದ್ದೇಶವೇನು? ಲೋಕಸಭೆಯಲ್ಲಿ ಒಂದು ಬಾರಿಯಾದರೂ ಸಚಿವರು ಹೇಳಿದನ್ನು ತಪ್ಪು ಎಂದು ಹೇಳಿದ್ದಾರಾ? ಭಗವತ್ ಗೀತೆ ಮೇಲೆ ದೇಶ ನಡೆಯುತ್ತಿಲ್ಲ. ಸಂವಿಧಾನದ ಮೇಲೆ ದೇಶ ನಡೆಯುತ್ತಿದೆ. ಅಂತಹ ಸಂವಿಧಾನ ಸುಟ್ಟರೂ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರ ಮೇಲೆ ಹಲ್ಲೆ ಮಾಡಿದರೂ ಸಮ್ಮನಿರುತ್ತಾರೆ. ಕ್ರಿಕೆಟ್‌ನಲ್ಲಿ ಗೆದ್ದವರಿಗೆ, ಮದುವೆಯಾದವರಿಗೆ ಟ್ವೀಟ್ ಮಾಡುತ್ತಾರೆ. ಚುನಾವಣೆ ಬಂದರೆ ಗಿಮಿಕ್‌ಗಳನ್ನು ಶುರುಮಾಡುತ್ತಾರೆ ಎಂದು ಆರೋಪಿಸಿದರು.
ಖರ್ಗೆ ವಿರುದ್ಧ ಮೋದಿ ಸ್ಪರ್ಧಿಸಲಿ
ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮೋದಿಯೇ ಬಂದು ಸ್ಪರ್ಧೆ ಮಾಡಲಿ ಅವರಿಗೂ ಸ್ವಾಗತ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಸವಾಲು ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ನೀವು ಬೇಕಾದರೂ ಸ್ಪರ್ಧೆ ಮಾಡಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯಿಂದ ಜಾಧವ್ ಸ್ಪರ್ಧೆ ಮಾಡುತ್ತಾರೆಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.