ಪ್ರಿಯಾಂಕಾ ಮದುವೆಗೆ ಪಟಾಕಿ, ಆನೆ, ಕುದುರೆ ಬಳಸಿದ್ದಕ್ಕೆ ವಿವಾದ!

Published : Dec 04, 2018, 11:00 AM IST
ಪ್ರಿಯಾಂಕಾ ಮದುವೆಗೆ  ಪಟಾಕಿ, ಆನೆ, ಕುದುರೆ  ಬಳಸಿದ್ದಕ್ಕೆ ವಿವಾದ!

ಸಾರಾಂಶ

ಪ್ರಿಯಾಂಕಾ ಮದುವೆಗೆ ಪಟಾಕಿ, ಆನೆ, ಕುದುರೆ ಬಳಸಿದ್ದಕ್ಕೆ ವಿವಾದ! ಮದುವೆ ವೇಳೆ ಆನೆ ಮತ್ತು ಕುದುರೆಗಳನ್ನು ಹಿಂಸಾತ್ಮಕ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಪ್ರಾಣಿ ದಯಾ ಸಂಘಟನೆಯಾದ ಪೇಟಾ ಆಕ್ಷೇಪ ವ್ಯಕ್ತಪಡಿಸಿದೆ. 

ಮುಂಬೈ (ಡಿ. 04): ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ರ ಬಹುನಿರೀಕ್ಷಿತ ವಿವಾಹದ ಮುಗಿದ ಬೆನ್ನಲ್ಲೇ, ವಿವಾಹದ ಕುರಿತು ವಿವಾದಗಳೂ ಎದ್ದಿವೆ.

ಕ್ರೈಸ್ತ ಶೈಲಿಯಲ್ಲಿ ಮದುವೆಯಾದ ದಿನ ಜೋಧ್‌ಪುರ ಅರಮನೆ ಬಳಿ ಭಾರೀ ಪಟಾಕಿ ಸಿಡಿಸಲಾಗಿತ್ತು. ಇದಕ್ಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಕಾರಣ, ಅಸ್ತಮಾ ರೋಗಿಗಳ ಪರ ಔಷಧ ತಯಾರಿಸುವ ಕಂಪನಿಯೊಂದ ಜಾಹೀರಾತಿನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಪ್ರಿಯಾಂಕಾ, ಪಟಾಕಿ ಸಿಡಿತದಿಂದ ಅಸ್ತಮಾ ಹೆಚ್ಚಾಗುತ್ತದೆ. ಹೀಗಾಗಿ ದೀಪಾವಳಿಯಲ್ಲಿ ದೀಪದಿಂದ ಮಾತ್ರ ಆರಿಸೋಣ ಎಂದು ಕರೆ ನೀಡಿದ್ದರು.

ಆದರೆ ಇದೀಗ ಅವರೇ ಸ್ವತಃ ತಮ್ಮ ಮದುವೆ ವೇಳೆ ಭಾರೀ ಪಟಾಕಿ ಸಿಡಿಸಿದ್ದು ಟೀಕೆಗೆ ಕಾರಣವಾಗಿದೆ. ಇನ್ನು ಹಿಂದೂ ಶೈಲಿಯ ಮದುವೆ ವೇಳೆ ಆನೆ ಮತ್ತು ಕುದುರೆಗಳನ್ನು ಹಿಂಸಾತ್ಮಕ ರೀತಿಯಲ್ಲಿ  ಬಳಸಿಕೊಳ್ಳಲಾಗಿದೆ ಎಂದು ಪ್ರಾಣಿ ದಯಾ ಸಂಘಟನೆಯಾದ ಪೇಟಾ ಆಕ್ಷೇಪ ವ್ಯಕ್ತಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?