ಪ್ರಧಾನಿ ಮೋದಿ ಮೂರನೇ ಮನ್ ಕಿ ಬಾತ್ ಕಾರ್ಯಕ್ರಮ| ರಾಷ್ಟ್ರಪಿತ ಮಹಾತ್ಮಾ ಗಾಂಧಿ150ನೇ ಜನ್ಮ ವಾರ್ಷಿಕೋತ್ಸವ| ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಪಣ ತೊಡುವಂತೆ ಪ್ರಧಾನಿ ಮೋದಿ ಕರೆ| ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ಉಲ್ಲೇಖ ಮಾಡಿದ ಪ್ರಧಾನಿ ಮೋದಿ| ಬೇರ್ ಗ್ರಿಲ್ಸ್ ಅವರೊಂದಿಗಿನ ಸಂಭಾಷಣೆ ರಹಸ್ಯ ಬಹಿರಂಗಗೊಳಿಸಿದ ಪ್ರಧಾನಿ|
ನವದೆಹಲಿ(ಆ.25): ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕ, ಮೋದಿ ಮೂರನೇ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದಾರೆ.
PM Narendra Modi in : India is preparing for a mega festival and the world is talking about it- 2nd October, the 150th birth anniversary of Mahatma Gandhi. The spirit of service has been an inseparable part of Mahatma Gandhi's life. pic.twitter.com/8nK55VkZDw
— ANI (@ANI)ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ಜನ್ಮ ವಾರ್ಷಿಕೋತ್ಸವಕ್ಕಾಗಿ ರಾಷ್ಟ್ರ ಸಜ್ಜಾಗುತ್ತಿದ್ದು, ಸತ್ಯ, ಅಹಿಂಸೆಗಳ ಸಂದೇಶ ಸಾರಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಬಡವರು, ದೀನ ದಲಿತರಿಗೆ ಭರವಸೆಯ ಬೆಳಕಾದವರು ಎಂದು ಮೋದಿ ಹೇಳಿದರು.
PM:When we celebrate Mahatma Gandhi's 150th anniversary we'll not only be dedicating to him an open defecation free India but also kick starting a mass movement for making India plastic free. I appeal to all to celebrate this yr's Gandhi Jayanti by freeing Mother India of plastic https://t.co/nj6S06VicM
— ANI (@ANI)130 ಕೋಟಿ ಭಾರತೀಯರು 130 ಕೋಟಿ ವಿಧಗಳಲ್ಲಿ ಗಾಂಧೀಜಿಯವರನ್ನು ಸ್ಮರಿಸಬಹುದು ಎಂದ ಮೋದಿ, ಮಹಾತ್ಮಾ ಗಾಂಧಿಯವರ ಸ್ಮರಣೆಗೆ ದೇಶ ಸೇವೆಗಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ ಎಂದು ಅಭಿಪ್ರಾಯಪಟ್ಟರು..
ಬಾಪು ಅವರ 150ನೇ ಜನ್ಮ ವಾರ್ಷಿಕೋತ್ಸವದಂದು ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಪಣ ತೊಡೋಣ ಎಂದು ಕರೆ ನೀಡಿದ ಪ್ರಧಾನಿ, ದೇಶದಲ್ಲಿ 'ಪೋಷಣಾ ಅಭಿಯಾನ' ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಅತ್ಯಾಧುನಿಕ ವೈಜ್ಞಾನಿಕ ವಿಧಾನಗಳಿಂದ ಸರ್ವರಿಗೂ ಪೋಷಕಾಂಶಗಳ ಲಭ್ಯತೆಗೆ ಪಣ ತೊಡೋಣ ಎಂದು ಮನವಿ ಮಾಡಿದರು.
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದದಿಂದಾಗಿ ನಾನು ವಿಶ್ವದ ಯುವ ಜನತೆ ಜೊತೆ ಸಂಪರ್ಕ ಸಾಧಿಸಿದೆ. ನನ್ನೊಂದಿಗೆ ಎಲ್ಲರೂ ಯೋಗದ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಇದೀಗ ವನ್ಯಜೀವಿ ಹಾಗೂ ಜಾಗತಿಕ ತಾಪಮಾನ ಬದಲಾವಣೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಬೇರ್ ಗ್ರಿಲ್ಸ್ ಜೊತೆ ನೀವು ಹೇಗೆ ಮಾತುಕತೆ ನಡೆಸಿದಿರಿ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದು, ನಾನು ಅವರೊಂದಿಗೆ ಮಾತನಾಡಲು ತಂತ್ರಜ್ಞಾನ ನೆರವಿಗೆ ಬಂತು ಎಂದು ಮೋದಿ ಹೇಳಿದ್ದಾರೆ.
PM Modi: A lot of people wanted to know how Bear Grylls understood my Hindi. People asked whether it was edited or shot multiple times. Technology acted as bridge between me & him. A cordless device attached to his ear translated Hindi into English simultaneously. pic.twitter.com/yE0iSwQOUW
— ANI (@ANI)ಬೇರ್ ಅವರ ಕಿವಿಯಲ್ಲಿದ್ದ ಉಪಕರಣ ನಾನು ಆಡಿದ ಮಾತುಗಳನ್ನು ಅವರಿಗೆ ಅವರ ಭಾಷೆಯಲ್ಲೇ ಕೇಳುವಂತೆ ಮಾಡಿತು. ನಾನು ಹಿಂದಿಯಲ್ಲಿ ಮಾತನಾಡಿದೆ, ಆದರೆ ಅದು ಅವರಿಗೆ ಇಂಗ್ಲೀಷ್’ನಲ್ಲಿ ಕೇಳಿಸಿತು ಎಂದು ಮೋದಿ ಸ್ಪಷ್ಟಪಡಿಸಿದರು.
PM Narendra Modi: On 29th Aug, on the occasion of National Sports Day, we will launch 'Fit India Movement' in the country. I want to see you fit and make you fitness conscious. pic.twitter.com/xwJHL9eJfb
— ANI (@ANI)ಪ್ರತಿವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ 'ಫಿಟ್ ಇಂಡಿಯಾ ಮೂವ್’ಮೆಂಟ್' ಆರಂಭಿಸುತ್ತಿರುವುದಾಗಿ ಇದೇ ವೇಳೆ ಮೋದಿ ಸ್ಪಷ್ಟಪಡಿಸಿದರು.