ಇಂದು ಕುಂದಾನಗರಿಗೆ ರಾಷ್ಟ್ರಪತಿ, ಬಿಗಿ ಪೊಲೀಸ್​ ಬಂದೋಬಸ್ತ್​

Published : Sep 15, 2018, 10:21 AM ISTUpdated : Sep 19, 2018, 09:26 AM IST
ಇಂದು ಕುಂದಾನಗರಿಗೆ ರಾಷ್ಟ್ರಪತಿ,  ಬಿಗಿ ಪೊಲೀಸ್​ ಬಂದೋಬಸ್ತ್​

ಸಾರಾಂಶ

ಕುಂದಾನಗರಿ ಬೆಳಗಾವಿಗೆ ಇಂದು (ಶನಿವಾರ) ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಆಗಮಿಸಲಿದ್ದಾರೆ. ಬೆಳಗಾವಿಯ ಕೆ.ಎಲ್​.ಎಸ್ ಕಾನೂನು ವಿದ್ಯಾಲಯದ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲು ರಾಷ್ಟ್ರಪತಿಗಳು ಬರ್ತಿದ್ದು, ಇವರ ಆಗಮನಕ್ಕೆ ಸಕಲ ಸಿದ್ಧತೆ ನಡೆದಿದೆ.

ಬೆಳಗಾವಿ, (ಸೆ.15): ಕುಂದಾನಗರಿ ಬೆಳಗಾವಿಗೆ ಇಂದು (ಶನಿವಾರ) ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಆಗಮಿಸಲಿದ್ದಾರೆ. ಬೆಳಗಾವಿಯ ಕೆ.ಎಲ್​.ಎಸ್ ಕಾನೂನು ವಿದ್ಯಾಲಯದ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲು ರಾಷ್ಟ್ರಪತಿಗಳು ಬರ್ತಿದ್ದು, ಇವರ ಆಗಮನಕ್ಕೆ ಸಕಲ ಸಿದ್ಧತೆ ನಡೆದಿದೆ. 

ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ, ಸಿಎಂ ಕುಮಾರಸ್ವಾಮಿ, ಭಾರತದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ, ರಾಜ್ಯಪಾಲ ವಜುಬಾಯಿ ವಾಲಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದು, ಇವರನ್ನ ಬರಮಾಡಿಕೊಳ್ಳಲು ಕುಂದಾನಗರಿ ಸಿದ್ಧವಾಗಿದೆ. 

 ನಗರದ ಸುತ್ತಲೂ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದ್ದು, ವೇದಿಕೆ ಸುತ್ತ ಸಿಸಿಟಿವಿ ಅಳವಡಿಸಲಾಗಿದೆ. ಕಳೆದ 15 ದಿನದಿಂದ ಈ ಸಮಾರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ಗಣ್ಯರು ತೆರಳುವ ಮಾರ್ಗ ವಧುವಿನಂತೆ ಶೃಂಗಾರಗೊಂಡಿದೆ. 

ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿದ ರಸ್ತೆ ಮೂಲಕ  ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳುತ್ತಾರೆ. ಬೆಳಗ್ಗೆ 11.30ರಿಂದ 12.30ರವರೆಗೆ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ.. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಮುಸ್ಲಿಮರು ಸೂರ್ಯ-ನದಿ ಪೂಜಿಸಬೇಕು, RSS ನಾಯಕನ ಹೇಳಿಕೆಯಿಂದ ಚರ್ಚೆ ಶುರು
ದುರಂಧರ್ ಸ್ಟೈಲ್‌ನಲ್ಲಿ ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕಿಸ್ತಾನಿ ಲೇಡಿ ಸ್ಪೈ; ವಿಡಿಯೋ ಭಾರೀ ವೈರಲ್!