ರಾಮದಾಸ್ ವಿರುದ್ಧ ಚುನಾವಣಾ ಅಖಾಡಕ್ಕೆ ಇಳಿಯಲು ಪ್ರೇಮಕುಮಾರಿ ಸಜ್ಜು

By Suvarna Web DeskFirst Published Apr 10, 2018, 10:07 AM IST
Highlights

ಮಾಜಿ ಸಚಿವ ರಾಮದಾಸ್ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿದ ಪ್ರೇಮಕುಮಾರಿ ಕೆ.ಆರ್. ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ.

ಮೈಸೂರು : ಮಾಜಿ ಸಚಿವ ರಾಮದಾಸ್ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿದ ಪ್ರೇಮಕುಮಾರಿ ಕೆ.ಆರ್. ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ.  ಈ ಸಂಬಂಧ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.  ಲಿಂಗಾಯಿತ/ವೀರಶೈವ ಧರ್ಮಕ್ಕೆ ಸೇರಿದ ಪ್ರೇಮಕುಮಾರಿ  ಸುತ್ತೂರು ಮಠದ ಶ್ರೀಗಳ  ಆಶೀರ್ವಾದ ಪಡೆದವರಿಗೆ ಜಯ ತಪ್ಪಿದ್ದಲ್ಲ ಎಂದು ರಾಮದಾಸ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

 ಬಿಜೆಪಿಯಿಂದ ರಾಮದಾಸ್ ಗೆ ಟಿಕೆಟ್ ಖಾತ್ರಿಯಾದರೆ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿರುವ ಅವರು, ಕೆ.ಆರ್. ಕ್ಷೇತ್ರದಲ್ಲೇ ಸ್ಪರ್ಧಿಸಿ ನ್ಯಾಯ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ .

ಕೆ.ಆರ್. ಕ್ಷೇತ್ರದಲ್ಲಿ 30-35 ಸಾವಿರದಷ್ಟು ಲಿಂಗಾಯತ/ವೀರಶೈವ ಮತಗಳೇ ನಿರ್ಣಾಯಕವಾಗಿದ್ದು,  ಒತ್ತಡಕ್ಕೆ ಕಟ್ಟುಬಿದ್ದು ರಾಮದಾಸ್ ಗೆ ಟಿಕೆಟ್ ನೀಡಿದರೂ ಗೆಲುವು ಸುಲಭವಲ್ಲ.   ಸುತ್ತೂರು ಮಠದ ಭೇಟಿಯಿಂದ ಸ್ಪರ್ಧೆಯ ಉತ್ಸಾಹ ಹೆಚ್ಚಿಸಿಕೊಂಡಿರುವ ಪ್ರೇಮಕುಮಾರಿ ಜಾತಿಯನ್ನು ಟ್ರಂಪ್ ಕಾರ್ಡ್ ಮಾಡಿಕೊಂಡು‌ ರಾಮದಾಸ್ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ.

click me!