ಪ್ರಣಬ್‌ರನ್ನು ಬಿಟ್ಟ ರಾಹುಲ್ ಗಾಂಧಿ

First Published Jun 12, 2018, 9:52 AM IST
Highlights

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜೂನ್‌ 13ರಂದು ರಾಜಧಾನಿಯಲ್ಲಿ ಇಫ್ತಾರ್‌ ಕೂಟ ಹಮ್ಮಿಕೊಂಡಿದ್ದಾರೆ. ಅನೇಕ ಘಟಾನುಘಟಿಗಳು ಕೂಟಕ್ಕೆ ಬರುತ್ತಿದ್ದಾರೆ. ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹಾಗೂ ಆಪ್‌ ಪ್ರಮುಖರೂ ಆದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಕೂಟಕ್ಕೆ ಆಹ್ವಾನವಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

ನವದೆಹಲಿ :  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜೂನ್‌ 13ರಂದು ರಾಜಧಾನಿಯಲ್ಲಿ ಇಫ್ತಾರ್‌ ಕೂಟ ಹಮ್ಮಿಕೊಂಡಿದ್ದಾರೆ. ಅನೇಕ ಘಟಾನುಘಟಿಗಳು ಕೂಟಕ್ಕೆ ಬರುತ್ತಿದ್ದಾರೆ. ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹಾಗೂ ಆಪ್‌ ಪ್ರಮುಖರೂ ಆದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಕೂಟಕ್ಕೆ ಆಹ್ವಾನವಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

ತಾಜ್‌ ಪ್ಯಾಲೇಸ್‌ ಹೊಟೆಲ್‌ನಲ್ಲಿ ಅಂದು ಇಫ್ತಾರ್‌ ಕೂಟ ಆಯೋಜನೆಯಾಗಿದ್ದು, 2 ವರ್ಷಗಳ ಅಂತರದ ನಂತರ ಪಕ್ಷದ ವತಿಯಿಂದ ಕೂಟ ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚೆಗೆ ಆರೆಸ್ಸೆಸ್‌ ಸಮಾರಂಭದಲ್ಲಿ ಭಾಗಿಯಾಗಿ, ಸಂಘದ ಸಂಸ್ಥಾಪಕ ಕೇಶವ ಹೆಡಗೇವಾರ್‌ ಅವರನ್ನು ‘ಭಾರತ ಮಾತೆಯ ಭವ್ಯ ಸುಪುತ್ರ ಎಂದು ಪ್ರಣಬ್‌ ಹೊಗಳಿದ್ದರು. ಇದರಿಂದ ರಾಹುಲ್‌ ಕಸಿವಿಸಿಕೊಂಡಂತಿದ್ದು, ಅವರನ್ನು ಆಹ್ವಾನಿಸಲ್ಲ ಎಂದು ಹೇಳಲಾಗಿದೆ.

ಇದೇ ವೇಳೆ ದಿಲ್ಲಿಯಲ್ಲಿ ಕಾಂಗ್ರೆಸ್‌ ಜತೆ ಸಂಘರ್ಷಕ್ಕಿಳಿದಿರುವ ಕೇಜ್ರಿವಾಲ್‌ಗೂ ಆಹ್ವಾನವಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಹಮೀದ್‌ ಅನ್ಸಾರಿ ಅವರಿಗೆ ಯಾವ ಕಾರಣಕ್ಕೆ ಅಹ್ವಾನ ನೀಡಿಲ್ಲ ಎಂಬುದು ತಿಳಿದುಬಂದಿಲ್ಲ.

click me!