ಪ್ರಭಾಕರ್ ಭಟ್ ಮತ್ತು ಭಾಗವತ್, ಅಮಿತ್ ಶಾ ಹೇಳುವ ಹಿಂದುತ್ವ ಒಪ್ಪಲ್ಲ!

Published : Aug 10, 2017, 02:16 PM ISTUpdated : Apr 11, 2018, 12:53 PM IST
ಪ್ರಭಾಕರ್ ಭಟ್ ಮತ್ತು ಭಾಗವತ್, ಅಮಿತ್ ಶಾ ಹೇಳುವ ಹಿಂದುತ್ವ ಒಪ್ಪಲ್ಲ!

ಸಾರಾಂಶ

ನಾರಾಯಣ ಗುರು, ವಿವೇಕಾನಂದರು ಹೇಳಿದ ಹಿಂದುತ್ವದ ಬಗ್ಗೆ ನಮಗೆ ಗೌರವವಿದ್ದು ಅದಕ್ಕೆ ತಲೆಬಾಗುತ್ತೇವೆ. ಆದರೆ ಕಲ್ಲಡ್ಕ ಪ್ರಭಾಕರ್ ಭಟ್, ಮೋಹನ್ ಭಾಗವತ್, ಅಮಿತ್ ಶಾ ಹೇಳುವ ಹಿಂದುತ್ವದ ಬಗ್ಗೆ ಧಿಕ್ಕಾರವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಉಡುಪಿ(ಆ.10): ನಾರಾಯಣ ಗುರು, ವಿವೇಕಾನಂದರು ಹೇಳಿದ ಹಿಂದುತ್ವದ ಬಗ್ಗೆ ನಮಗೆ ಗೌರವವಿದ್ದು ಅದಕ್ಕೆ ತಲೆಬಾಗುತ್ತೇವೆ. ಆದರೆ ಕಲ್ಲಡ್ಕ ಪ್ರಭಾಕರ್ ಭಟ್, ಮೋಹನ್ ಭಾಗವತ್, ಅಮಿತ್ ಶಾ ಹೇಳುವ ಹಿಂದುತ್ವದ ಬಗ್ಗೆ ಧಿಕ್ಕಾರವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಬುಧವಾರ ಸಭೆಯೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯ ಅನಂತ ಕುಮಾರ್‌'ಗಿಂತಲೂ ಜೆಡಿಎಸ್‌'ನ ದೇವೇಗೌಡರೇ ನಿಜವಾದ ಹಿಂದೂ, ನಳಿನ್ ಕಟೀಲ್‌'ಗಿಂತಲೂ ಜನಾರ್ದನ ಪೂಜಾರಿ ಹೆಚ್ಚು ಒಳ್ಳೆಯ ಹಿಂದು ಎಂದು ಅಭಿಪ್ರಾಯಪಟ್ಟರು.

ಚಲೇ ಜಾವ್ ಹೇಳಿ:

50 ವರ್ಷಗಳ ಕಾಲ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸದ ಆರೆಸ್ಸೆಸ್‌'ನವರ ಕಾಲರ್ ಪಟ್ಟಿ ಹಿಡಿದು ನಿನ್ನ ದೇಶ ಪ್ರೇಮ ಯಾವುದು ಎಂದು ಕೇಳುವುದಕ್ಕೆ ಹಿಂಜರಿಯಬಾರದು. ಇಂತಹ ದೇಶದ್ರೋಹಿಗಳನ್ನು ಚಲೇ ಜಾವ್, ದೇಶ ಬಿಟ್ಟು ತೊಲಗಿ ಎಂದು ಹೇಳುವ ಧ್ಯರ್ಯವನ್ನು ಕಾಂಗ್ರೆಸ್ ತೋರಿಸಬೇಕಾಗಿದೆ ಎಂದರು.

ಮಠಗಳಲ್ಲಿ ಕೋಮುವಾದಿಗಳ ನೇಮಕ:

ಧರ್ಮಪೀಠಗಳು ಕೋಮುವಾದಿಗಳ ರಿಕ್ರೂಟ್ಮೆಂಟ್ ಬೋರ್ಡ್‌ಗಳಾಗುತ್ತಿವೆ ಎಂದು ಮಟ್ಟು ಆರೋಪಿಸಿದರು. ಮೊದಲಿನಿಂದಲೂ ನನಗೆ ಕಾಂಗ್ರೆಸ್ ಸಿದ್ಧಾಂತ ಒಪ್ಪಿಗೆ ಇದೆ, ಆದರೆ, ನಾನಿನ್ನೂ ಕಾಂಗ್ರೆಸ್ ಪಕ್ಷ ಸೇರಿಲ್ಲ. ಮುಂದೆ ಸೇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು