ದೇವರನ್ನೂ ಬಿಡದ ರಾಜಕೀಯ ಪಕ್ಷಗಳು

By Web DeskFirst Published Sep 26, 2018, 3:06 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ರಾಜಕೀಯ ದೇವರನ್ನು ಆಯ್ಕೆ ಮಾಡಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. 

ಬೆಂಗಳೂರು : ಲೋಕಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಇದೇ ವೇಳೆ ರಾಜಕೀಯ ಪಕ್ಷಗಳು ಸಕಲ ಸಿದ್ಧತೆಯಲ್ಲಿ ತೊಡಗಿದ್ದು,  ತಮ್ಮ ಅದೃಷ್ಟ ಪರೀಕ್ಷೆಗಾಗಿ ದೇವರುಗಳನ್ನು ಆಯ್ಕೆ ಮಾಡಿಕೊಂಡಿವೆ. 

 ಬಿಜೆಪಿ ರಾಮನನ್ನು ತನ್ನ ದೇವರೆಂದು ಆಯ್ಕೆ ಮಾಡಿಕೊಂಡರೆ, ಸಮಾಜವಾದಿ ಪಕ್ಷವು ವಿಷ್ಣುವನ್ನು ಆಯ್ಕೆ ಮಾಡಿಕೊಂಡಿದೆ. ಇನ್ನು ಕಾಂಗ್ರೆಸ್ ಪಕ್ಷವು ಶಿವನನ್ನು ತನ್ನ ದೇವರಾಗಿ ಆಯ್ಕೆ ಮಾಡಿಕೊಂಡಿದೆ. 

ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ  ಇತ್ತೀಚೆಗಷ್ಟೇ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದು, ಈ ವೇಳೆ ಅವರನ್ನು ಬಿಳ್ಕೊಡಲು ಸ್ವಕ್ಷೇತ್ರದ ಕಾರ್ಯಕರ್ತರು ಶಿವ ಭಕ್ತರ ವೇಷ ತೊಟ್ಟಿದ್ದರು.  

ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರು ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ. 

ಇತ್ತ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ವಿಷ್ಣುವಿನ ಬೃಹತ್ ನಗರಿಯನ್ನು ನಿರ್ಮಾಣ ಮಾಡುವ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ನಗರಿಯಲ್ಲಿ ವಿಷ್ಣುವಿನ ದೇವಾಲಯವನ್ನೂ ಕೂಡ ನಿರ್ಮಾಣ ಮಾಡಲಾಗುತ್ತದೆ.

click me!